ಯಶ್ ಹಿಂದೆ ಬಿದ್ದ ತೆಲುಗಿನ ಸ್ಟಾರ್ ನಿರ್ದೇಶಕ-ನಿರ್ಮಾಪಕರು!?
'ಕೆಜಿಎಫ್' ಸಿನಿಮಾದ ಬಳಿಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ತೆಲುಗು, ತಮಿಳು, ಮಲಯಾಳಂ ಹಿಂದಿ ಭಾಷಿಕ ರಾಜ್ಯಗಳಲ್ಲಿಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
'ಕೆಜಿಎಫ್2' ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, 'ಕೆಜಿಎಫ್ 2' ಬಳಿಕ ಯಶ್ ಯಾರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಚರ್ಚೆ ಆರಂಭಗೊಂಡಿದೆ. ಒಂದು ಸುದ್ದಿಯ ಪ್ರಕಾರ ಯಶ್ ಅವರು ಶಂಕರ್ ನಿರ್ದೇಶನದ ರಾಮ್ ಚರಣ್ ತೇಜ ನಟಿಸುತ್ತಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಖಾತ್ರಿಯಾಗಿಲ್ಲ.
ಈ ನಡುವೆ ತೆಲುಗು ರಾಜ್ಯಗಳ ಸಿನಿಮಾ ನಿರ್ಮಾಪಕರು ಕೆಲವರು ಯಶ್ ಜೊತೆಗೆ ಸಿನಿಮಾ ಮಾಡಲು ಉತ್ಸುಕರಾಗಿದ್ದು, ಯಶ್ ಡೇಟ್ಸ್‌ಗಾಗಿ ಹಿಂದೆ ಬಿದ್ದಿದ್ದಾರೆ ಎಂದು ತೆಲುಗು ಪತ್ರಿಕೆಗಳೇ ವರದಿ ಮಾಡಿವೆ.

RRR ನಿರ್ಮಾಪಕ ದಾನಯ್ಯ
ರಾಜಮೌಳಿ ನಿರ್ದೇಶಿಸಿ ಜೂ.ಎನ್‌ಟಿಆರ್-ರಾಮ್‌ಚರಣ್ ತೇಜ ನಟಿಸುತ್ತಿರುವ 'RRR' ಸಿನಿಮಾದ ನಿರ್ಮಾಪಕ ಡಿ.ವಿ.ವಿ.ದಾನಯ್ಯ ಅವರು ಯಶ್ ಸಿನಿಮಾಕ್ಕೆ ಬಂಡವಾಳ ಹೂಡಲು ರೆಡಿಯಾಗಿದ್ದಾರಂತೆ. ಯಶ್ ಜೊತೆ ಒಂದು ಸುತ್ತಿನ ಮಾತುಕತೆಯೂ ಆಗಿದೆ ಎಂಬ ಸುದ್ದಿಯಿದೆ.

ಯಶ್‌ಗಾಗಿ ಕತೆ ಹೆಣೆಯುತ್ತಿರುವ ಪುರಿ ಜಗನ್ನಾಥ್
ಜೊತೆಗೆ ಪಕ್ಕಾ ಹಿಟ್ ನಿರ್ದೇಶಕ ಎಂದು ಖ್ಯಾತಿಗಳಿಸಿರುವ ಪುರಿ ಜಗನ್ನಾಥ್ ಅವರು ಯಶ್‌ಗೆ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ದಾನಯ್ಯ ಅವರ ಆಗ್ರಹದ ಮೇರಿಗೆ ಪುರಿ ಜಗನ್ನಾಥ್ ಅವರು ಯಶ್‌ಗಾಗಿ ಈಗಾಗಲೇ ಕತೆ ಹೆಣೆಯುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ದಿಲ್ ರಾಜು ಜೊತೆಗೆ ಮುಂದಿನ ಸಿನಿಮಾ?
ತೆಲುಗಿನ ಮೈತ್ರಿ ಮೂವೀಸ್ ಬ್ಯಾನರ್ ಸಹ ಯಶ್ ಜೊತೆಗೆ ಸಿನಿಮಾ ಮಾಡಲು ಯತ್ನಿಸುತ್ತಿದೆ ಎನ್ನಲಾಗಿದೆ. ಯಶ್‌ಗೆ ಗೆಳೆಯರೂ ಆಗಿರುವ ದಿಲ್ ರಾಜು ಸಹ ಯಶ್‌ಗಾಗಿ ಸಿನಿಮಾ ಒಂದನ್ನು ನಿರ್ಮಿಸುವ ಆಸೆ ಹೊಂದಿದ್ದಾರೆ. 'ಕೆಜಿಎಫ್ 2' ಸಿನಿಮಾದ ತೆಲುಗು ವಿತರಣೆ ಹಕ್ಕನ್ನು ಇವರೇ ಪಡೆದುಕೊಂಡಿದ್ದಾರೆ.

ಜುಲೈ 16 ರಂದು ಬಿಡುಗಡೆ ಆಗಲಿದೆ 'ಕೆಜಿಎಫ್ 2'
'ಕೆಜಿಎಫ್ 2' ಸಿನಿಮಾವು ಜುಲೈ 16 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಮುಗಿದು ಈಗಾಗಲೇ ಕೆಲವು ತಿಂಗಳೇ ಆಗಿದೆ. ಆದರೆ ಯಶ್ ಅವರು ತಮ್ಮ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದನ್ನು ಅಧಿಕೃತವಾಗಿ ಈವರೆಗೆ ಹೇಳಿಲ್ಲ.


Click it and Unblock the Notifications











