For Quick Alerts
  ALLOW NOTIFICATIONS  
  For Daily Alerts

  ಸೋನಾಕ್ಷಿ ಸಿನ್ಹಾ ನಿಶ್ಚಿತಾರ್ಥ ರಹಸ್ಯ: ವಜ್ರದ ಉಂಗುರ ತೋರಿಸಿದ್ದೇಕೆ ನಟಿ?

  |

  ಬಾಲಿವುಡ್‌ನಲ್ಲಿ ಸಾಲು, ಸಾಲಾಗಿ ಸಿನಿಮಾ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾ ಇದ್ದಾರೆ. ಕತ್ರೀನಾ ಕೈಫ್, ಆಲಿಯಾ ಭಟ್ ಅದ್ದೂರಿಯಾಗಿ ಮದುವೆ ಆಗಿ ಸುದ್ದಿ ಆಗಿದ್ದರು. ಈಗ ಈ ಸಾಲಿನಲ್ಲಿ ನಟಿ ಸೋನಾಕ್ಷಿಯ ಸಿನ್ಹಾ ಹೆಸರು ಕೇಳಿ ಬರುತ್ತಿದೆ.

  ಸೋನಾಕ್ಷಿ ಸಿನ್ಹಾಗೆ ಮದುವೆ ಫಿಕ್ಸ್ ಆಯ್ತಾ, ಹುಡುಗ ಯಾರು?, ಸಿನಿಮಾ ನಟನನ್ನೇ ಮದುವೆ ಆಗ್ತಾರ ಎಂಬೆಲ್ಲಾ ಪ್ರಶ್ನೆಗಳು ಮೂಡೋದು ಸಹಜ. ಸದ್ಯ ಸೋನಾಕ್ಷಿ ವಿಚಾರ ಮದುವೆ ತನಕ ಬಂದಿಲ್ಲ. ಈಗಷ್ಟೆ ನಿಶ್ಚಿತಾರ್ಥ ಆಗಿದೆ ಎನ್ನಲಾಗುತ್ತಿದೆ. ಸದ್ಯ ಬಾಲಿವುಡ್‌ನಲ್ಲಿ ಈಕೆಯ ಎಂಗೇಜ್‌ಮೆಂಟ್ ಸುದ್ದಿ ಹಬ್ಬಿದೆ.

  ಆಮಿರ್ ಖಾನ್ ಮಗಳ 'ಬಿಕಿನಿ ಬರ್ತ್' ಡೇ ಅವಾಂತರ!ಆಮಿರ್ ಖಾನ್ ಮಗಳ 'ಬಿಕಿನಿ ಬರ್ತ್' ಡೇ ಅವಾಂತರ!

  ಸೋನಾಕ್ಷಿ ಸಿನ್ಹಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿ ಸದ್ದಾಗುತ್ತಿದೆ. ಇದಕ್ಕೆ ಕಾರಣ ನಟಿ ಸೋನಾಕ್ಷಿ ಅಲ್ಲದೆ ಮತ್ಯಾರು ಅಲ್ಲ. ಸೋನಾಕ್ಷಿ ಸಿನ್ಹಾ ಹಂಚಿಕೊಂಡ ಫೊಟೋ ಒಂದು ಈ ಸುದ್ದಿಗೆ ಕಾರಣ ಆಗಿದೆ.

  ವಜ್ರದ ಉಂಗುರ ಧರಿಸಿದ ಸೋನಾಕ್ಷಿ ಸಿನ್ಹಾ!

  ವಜ್ರದ ಉಂಗುರ ಧರಿಸಿದ ಸೋನಾಕ್ಷಿ ಸಿನ್ಹಾ!

  ನಟಿ ಸೋನಾಕ್ಷಿ ಸಿನ್ಹಾ ಮದುವೆ ಆಗುತ್ತಾರೆ, ಅವರು ಗುಟ್ಟಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ ಎನ್ನುವ ವಿಚಾರದ ಹಬ್ಬಲು ಕಾರಣ ನಟಿ ಸೋನಾಕ್ಷಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಒಂದು ಫೋಟೋ. ಈ ಫೊಟೋದಲ್ಲಿ ನಟಿ ಸೋನಾಕ್ಷಿ ತಮ್ಮ ಕೈ ಬೆರಳಿಗೆ ಹಾಕಿಕೊಂಡಿರುವ ಉಂಗುರವನ್ನು ತೋರಿಸಿದ್ದಾರೆ. ಇದು ವಜ್ರದ ಉಂಗರ ಎನ್ನಲಾಗಿದೆ.

  English summary
  Is Sonakshi Sinha Secretly Engaged With Dream Boy, Her New Post Tells The Story,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X