»   » 'ಸ್ವಿಜರ್ಲ್ಯಾಂಡ್'ನಲ್ಲಿ ಸೋನಮ್ ಕಪೂರ್ ಮದುವೆ.!

'ಸ್ವಿಜರ್ಲ್ಯಾಂಡ್'ನಲ್ಲಿ ಸೋನಮ್ ಕಪೂರ್ ಮದುವೆ.!

Posted By:
Subscribe to Filmibeat Kannada

ಇತ್ತೀಚಿಗಷ್ಟೆ ಬಹುಭಾಷಾ ನಟಿ ಶ್ರಿಯಾ ಶರಣ್ ಮದುವೆ ಸುದ್ದಿ ಎಲ್ಲರ ಗಮನ ಸೆಳೆದಿತ್ತು. ಎಲ್ಲರ ಕಣ್ತಪ್ಪಿಸಿ ಕೇವಲ ಕುಟುಂಬದವರ ಸಮ್ಮುಖದಲ್ಲೇ ಸಪ್ತಪದಿ ತುಳಿದ ನಟಿ ಶ್ರೀಯಾ ರಷ್ಯನ್ ಮೂಲದ ವ್ಯಕ್ತಿಯನ್ನ ವರಿಸಿದ್ದರು. ಇದೀಗ, ಬಾಲಿವುಡ್ ನ ಇನ್ನೊಂದು ನಟಿಯ ಮದುವೆಗೆ ವೇದಿಕೆ ಸಜ್ಜಾಗಿದೆ.

ಶ್ರೀದೇವಿಯ ಹಠಾತ್ ನಿಧನದಿಂದ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಮದುವೆ ಮುಂದಕ್ಕೆ ಹೋಗಿದೆ ಎನ್ನಲಾಗಿತ್ತು. ಆದ್ರೆ, ಯಾವುದೇ ಬದಲಾವಣೆ ಮಾಡದ ಕುಟುಂಬಸ್ಥರು ಮೊದಲೇ ನಿರ್ಧರಿಸಿದ್ದ ದಿನಾಂಕದಲ್ಲೇ ಕಪೂರ್ ಪುತ್ರಿಯ ವಿವಾಹ ಮಹೋತ್ಸವವನ್ನ ನಿಗದಿ ಮಾಡಿದ್ದಾರೆ.

ಶ್ರೀದೇವಿಯ ಹಠಾತ್ ನಿಧನ: ಸೋನಂ ಕಪೂರ್ ಮದುವೆ ಮುಂದಕ್ಕೆ?

ತಮ್ಮ ದೀರ್ಘಕಾಲದ ಗೆಳೆಯ ಆನಂದ್ ಅಹುಜಾ ಅವರ ಕೈಹಿಡಿಯಲು ಸೋನಂ ಕಪೂರ್ ಮನಸ್ಸು ಮಾಡಿದ್ದಾರೆ. ಇದಕ್ಕೆ ಸೋನಂ-ಆನಂದ್ ಪ್ರೀತಿಗೆ ಕಪೂರ್ ಕುಟುಂಬ ಒಪ್ಪಿಗೆ ನೀಡಿದೆ. ಸದ್ಯದ ಮೂಲಗಳ ಪ್ರಕಾರ ಮೇ ತಿಂಗಳಲ್ಲಿ ಇವರಿಬ್ಬರ ಮದುವೆ ನೆರವೇರಲಿದೆ.

ಮೇ 11, 12ಕ್ಕೆ ಮದುವೆ.!

ಸದ್ಯದ ಮಾಹಿತಿ ಪ್ರಕಾರ ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ಅವರ ಮದುವೆ ಮೇ ತಿಂಗಳಲ್ಲಿ ನಡೆಯಲಿದೆ. ಮೇ 11 ಮತ್ತು 12 ರಂದು ಬಾಲಿವುಡ್ ನ ಪ್ರೇಮಪಕ್ಷಿಗಳು ನವ ಬಾಳಿಗೆ ಕಾಲಿಡಲಿದ್ದಾರೆ.

ಸ್ವಿಜರ್ಲ್ಯಾಂಡ್ ನಲ್ಲಿ ವಿವಾಹ

ಅಂದ್ಹಾಗೆ, ಸೋನಮ್ ಕಪೂರ್ ಅವರ ಮದುವೆ ಭಾರತದಲ್ಲಿ ನಡೆಯುವುದಿಲ್ಲ. ಬದಲಾಗಿ, ಸ್ವಿಜರ್ಲ್ಯಾಂಡ್ ನ ಜಿನೀವಾದಲ್ಲಿ ನಡೆಸಲು ಕುಟುಂಬದವರು ನಿಶ್ಚಯಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಕಳೆದ ವಾರ ಲಂಡನ್ ನಲ್ಲಿ ಆನಂದ್ ಮತ್ತು ಸೋನಮ್ ಕಪೂರ್ ಸಣ್ಣದೊಂದು ಪಾರ್ಟಿ ಏರ್ಪಿಡಿಸಿದ್ದರಂತೆ.

ಕಪೂರ್ ಕುವರಿ ಸೋನಂ ಪೀ..ಪೀ..ಪೀ..ಡುಂ..ಡುಂಗೆ ರೆಡಿ.!

ಮಗಳ ಮದುವೆ ಅನಿಲ್ ಕಪೂರ್ ತಯಾರಿ

ಇನ್ನು ಮಗಳಲ ಮದುವೆಗೆ ಸಕಲ ರೀತಿಯಲ್ಲಿ ಅನಿಲ್ ಕಪೂರ್ ಸಿದ್ದವಾಗುತ್ತಿದ್ದು, ಎಲ್ಲರಿಗೂ ಈಗಲೇ ಫ್ಲೈಟ್ ಟಿಕೆಟ್ ಬುಕ್ ಮಾಡುತ್ತಿದ್ದಾರಂತೆ. ಹಾಗೆ, ಫೊನ್ ಮೂಲಕವೇ ಎಲ್ಲ ಗಣ್ಯರಿಗೂ ಆಹ್ವಾನ ನೀಡುತ್ತಿದ್ದಾರೆ ಎನ್ನಲಾಗಿದೆ. ಹಿಂದೂ ಸಂಪ್ರದಾಯದಂತೆ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳನ್ನ ಕೂಡ ಹಮ್ಮಿಕೊಂಡಿದ್ದು, ಯಾವಾಗ ಮತ್ತು ಸ್ಥಳ ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಯಾರು ಈ ಆನಂದ್ ಆಹುಜಾ.?

ಆನಂದ್ ಅಹುಜಾ ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆಗಿದ್ದು, ಕೆಲ ವರ್ಷಗಳಿಂದ ಸೋನಂ ಕಪೂರ್ ಅವರನ್ನ ಪ್ರೀತಿಸುತ್ತಿದ್ದಾರೆ. 2016ರಲ್ಲಿ ಅನಿಲ್ ಕಪೂರ್ ಅವರ 60ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ಇವರಿಬ್ಬರ ಪ್ರೀತಿ ಬೆಳಕಿಗೆ ಬಂದಿತ್ತು.

English summary
Bollywood actor Sonam Kapoor and her businessman beau Anand Ahuja are allegedly all set to tie the knot this summer on May 11 and May 12 in Geneva, Switzerland.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X