ದಕ್ಷಿಣ ಭಾರತ ಸಿನಿಮಾರಂಗದೆಡೆ ಮುಖ ಮಾಡಿದ ಬಾಲಿವುಡ್ ಖ್ಯಾತ ನಟಿ?

ಬಾಲಿವುಡ್ ನಟಿಯರು ಹಲವರು ಕನ್ನಡ ಸೇರಿದಂತೆ ಉಳಿದ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಅಂತಹಾ ಹಲವರು ದಕ್ಷಿಣ ಭಾರತದಿಂದಲೇ ಸಿನಿಮಾ ಜೀವನ ಪ್ರಾರಂಭಿಸಿ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ.

ಹಲವು ನಟಿಯರು, ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಆಗುತ್ತಿವೆ ಎಂದ ಕೂಡಲೇ ದಕ್ಷಿಣ ಭಾರತ ಸಿನಿಮಾರಂಗದತ್ತ ಮುಖ ಮಾಡುತ್ತಾರೆ, ಇದೂ ಸಹ ನಡೆಯುತ್ತಲೇ ಬಂದಿದೆ.

ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ತೆಲುಗು ಸಿನಿಮಾ ಒಂದರ ಜೊತೆಗೆ ಸೋನಂ ಕಪೂರ್ ಮಾತುಕತೆ ಮುಗಿಸಿದ್ದಾರಂತೆ. ವಿಶೇಷವೆಂದರೆ ಸೋನಂ ತಂದೆ ಅನಿಲ್ ಕಪೂರ್ ಸಹ ತಮ್ಮ ನಟನಾ ಜೀವನವನ್ನು ದಕ್ಷಿಣದ ಸಿನಿಮಾದಿಂದಲೇ ಪ್ರಾರಂಭಿಸಿದ್ದರು. ಅವರ ಮೊದಲ ಸಿನಿಮಾ ಕನ್ನಡದ 'ಪಲ್ಲವಿ-ಅನುಪಲ್ಲವಿ'.

Sonam Kapoor May Act In Telugu Movie With Big Star

ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಸೋನಂ ಕಪೂರ್ ಅನ್ನು ಕೇಳಲಾಗಿದೆಯಂತೆ. ಪ್ರತಿಷ್ಠಿತ ಬ್ಯಾನರ್‌ನಿಂದ ತಯಾರಾಗುತ್ತಿರುವ ಸಿನಿಮಾದಲ್ಲಿ ಸೋನಂ ಕಪೂರ್ ತಮ್ಮ ಮೊದಲ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಪ್ರೀತಿ ಜಿಂಟಾ, ಅಮಿಷಾ ಪಟೇಲ್, ಆಲಿಯಾ ಭಟ್, ರವೀನಾ ಟಂಡನ್, ಸೊನಾಲಿ ಬೇಂದ್ರೆ ಇನ್ನೂ ಹಲವಾರು ಬಾಲಿವುಡ್ ನಟಿಯರು ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Actress Sonam Kapoor may act in Telugu movie with Big Star and in big banner movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X