For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತ ಸಿನಿಮಾರಂಗದೆಡೆ ಮುಖ ಮಾಡಿದ ಬಾಲಿವುಡ್ ಖ್ಯಾತ ನಟಿ?

  |

  ಬಾಲಿವುಡ್ ನಟಿಯರು ಹಲವರು ಕನ್ನಡ ಸೇರಿದಂತೆ ಉಳಿದ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ ಅಂತಹಾ ಹಲವರು ದಕ್ಷಿಣ ಭಾರತದಿಂದಲೇ ಸಿನಿಮಾ ಜೀವನ ಪ್ರಾರಂಭಿಸಿ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ.

  ಹಲವು ನಟಿಯರು, ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಆಗುತ್ತಿವೆ ಎಂದ ಕೂಡಲೇ ದಕ್ಷಿಣ ಭಾರತ ಸಿನಿಮಾರಂಗದತ್ತ ಮುಖ ಮಾಡುತ್ತಾರೆ, ಇದೂ ಸಹ ನಡೆಯುತ್ತಲೇ ಬಂದಿದೆ.

  ಲಂಡನ್‌ ನಿಂದ ಬಂದ ಸೋನಂ ಕಪೂರ್ ಮೋದಿಯನ್ನು ಹೊಗಳಿದ್ದೇ ಹೊಗಳಿದ್ದುಲಂಡನ್‌ ನಿಂದ ಬಂದ ಸೋನಂ ಕಪೂರ್ ಮೋದಿಯನ್ನು ಹೊಗಳಿದ್ದೇ ಹೊಗಳಿದ್ದು

  ಇದೀಗ ಬಾಲಿವುಡ್ ನಟಿ ಸೋನಂ ಕಪೂರ್ ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ತೆಲುಗು ಸಿನಿಮಾ ಒಂದರ ಜೊತೆಗೆ ಸೋನಂ ಕಪೂರ್ ಮಾತುಕತೆ ಮುಗಿಸಿದ್ದಾರಂತೆ. ವಿಶೇಷವೆಂದರೆ ಸೋನಂ ತಂದೆ ಅನಿಲ್ ಕಪೂರ್ ಸಹ ತಮ್ಮ ನಟನಾ ಜೀವನವನ್ನು ದಕ್ಷಿಣದ ಸಿನಿಮಾದಿಂದಲೇ ಪ್ರಾರಂಭಿಸಿದ್ದರು. ಅವರ ಮೊದಲ ಸಿನಿಮಾ ಕನ್ನಡದ 'ಪಲ್ಲವಿ-ಅನುಪಲ್ಲವಿ'.

  ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಸೋನಂ ಕಪೂರ್ ಅನ್ನು ಕೇಳಲಾಗಿದೆಯಂತೆ. ಪ್ರತಿಷ್ಠಿತ ಬ್ಯಾನರ್‌ನಿಂದ ತಯಾರಾಗುತ್ತಿರುವ ಸಿನಿಮಾದಲ್ಲಿ ಸೋನಂ ಕಪೂರ್ ತಮ್ಮ ಮೊದಲ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  RSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಸಿಡಿದೆದ್ದ ಬಾಲಿವುಡ್ ನಟಿ ಸೋನಂRSS ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಸಿಡಿದೆದ್ದ ಬಾಲಿವುಡ್ ನಟಿ ಸೋನಂ

  ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಪ್ರೀತಿ ಜಿಂಟಾ, ಅಮಿಷಾ ಪಟೇಲ್, ಆಲಿಯಾ ಭಟ್, ರವೀನಾ ಟಂಡನ್, ಸೊನಾಲಿ ಬೇಂದ್ರೆ ಇನ್ನೂ ಹಲವಾರು ಬಾಲಿವುಡ್ ನಟಿಯರು ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Actress Sonam Kapoor may act in Telugu movie with Big Star and in big banner movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X