For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಗೆ ಅಚ್ಚರಿಯ ಎಂಟ್ರಿ ಕೊಡಲಿದ್ದಾರೆ ಇಬ್ಬರು ಮಾಜಿ ಸ್ಪರ್ಧಿಗಳು!?

  |

  ಬಿಗ್‌ಬಾಸ್ ಕನ್ನಡ ಸೀಸನ್ 09 ಪ್ರಾರಂಭವಾಗಿ ಆರು ವಾರಗಳಿಗೂ ಹೆಚ್ಚಾಗಿದ್ದು, ಈಗಾಗಲೇ ಆರು ಮಂದಿ ಸ್ಪರ್ಧಿಗಳು ಮನೆಯಿಂದ ಹೊರ ಕಳಿಸಲ್ಪಟ್ಟಿದ್ದಾರೆ.

  ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದ ಬಿಗ್‌ಬಾಸ್ ಮನೆಯಲ್ಲಿ ಇತ್ತೀಚೆಗೆ ಜಗಳ, ಮುನಿಸು, ಜಗಳಗಳು ಹೆಚ್ಚಾಗಿವೆ. ಸ್ಪರ್ಧಿಗಳ ಸಂಖ್ಯೆ ಕಡಿಮೆಯಾದಷ್ಟು ಪರಸ್ಪರರ ಮಧ್ಯೆ ಬಿರುಕು ಹೆಚ್ಚಾಗುತ್ತಲೇ ಸಾಗುತ್ತಿದೆ. ಆರಂಭದ ಕೆಲವಾರ ಆತ್ಮೀಯರಾಗಿದ್ದವರು ಸಹ ಈಗ ಪರಸ್ಪರ ಕಚ್ಚಾಡುತ್ತಿದ್ದಾರೆ.

  ಆದರೆ ಇದೀಗ ಬರುತ್ತಿರುವ ಹೊಸ ಸುದ್ದಿಯೆಂದರೆ ಈಗಿರುವ ಸ್ಪರ್ಧಿಗಳ ಜೊತೆಗೆ ಹೊಸ ಇಬ್ಬರು ಸ್ಪರ್ಧಿಗಳನ್ನು ಮನೆಯ ಒಳಗೆ ಕಳಿಸಲು ಆಯೋಜಕರು ಯೋಜಿಸಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರು ಸ್ಪರ್ಧಿಗಳು ಮನೆಯ ಒಳಗಿನ ಈಗಿರುವ ಪರಿಸ್ಥಿತಿಯನ್ನು ಸಂಪೂರ್ಣ ಬದಲಾಯಿಸುವ ಸಾಧ್ಯತೆ ಇದೆ.

  ಇಬ್ಬರಿಗೆ ವೈಲ್ಡ್ ಕಾರ್ಡ್ ಎಂಟ್ರಿ?

  ಇಬ್ಬರಿಗೆ ವೈಲ್ಡ್ ಕಾರ್ಡ್ ಎಂಟ್ರಿ?

  ಒಟಿಟಿ ಸೀಸನ್‌ನಲ್ಲಿ ಕೊನೆಯ ದಿನದ ವರೆಗೆ ಸ್ಪರ್ಧಿಯಲ್ಲಿದ್ದ ಸೋನು ಗೌಡ ಅನ್ನು ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಕಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರ ಜೊತೆಗೆ ಮತ್ತೊಬ್ಬ ಮಾಜಿ ಬಿಗ್‌ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರನ್ನೂ ಸಹ ಮನೆಯ ಒಳಗೆ ಕಳಿಸಲು ಬಿಗ್‌ಬಾಸ್‌ ಆಯೋಜಕರು ಚಿಂತಿಸಿದ್ದಾರೆ.

  ಸೋನು ಗೌಡ ಬಂದರೆ ಬದಲಾವಣೆ ಏನಾಗಲಿದೆ

  ಸೋನು ಗೌಡ ಬಂದರೆ ಬದಲಾವಣೆ ಏನಾಗಲಿದೆ

  ಒಟಿಟಿ ಬಿಗ್‌ಬಾಸ್‌ ಸೀಸನ್‌ನಲ್ಲಿ ಭಾಗವಹಿಸಿದ್ದ ಸೋನು ಗೌಡ, ರಾಕೇಶ್ ಅಡಿಗ ಜೊತೆ ಉತ್ತಮ ಗೆಳೆತನ ಹೊಂದಿದ್ದರು. ಇಬ್ಬರೂ ಬಹಳ ಆಪ್ತವಾಗಿದ್ದರು. ಸೋನು ಗೌಡಗೆ ರಾಕೇಶ್‌ ಮೇಲೆ ಪ್ರೇಮಭಾವವೂ ಇತ್ತು ಆದರೆ ರಾಕೇಶ್, ಸೋನು ಅನ್ನು ಗೆಳತಿಯಾಗಿಯಷ್ಟೆ ನೋಡಿದ್ದರು. ಈಗ ರಾಕೇಶ್ ಹಾಗೂ ಅಮೂಲ್ಯ ಗೌಡ ನಡುವೆ ಆಪ್ತತೆ ಇದ್ದು, ಸೋನು ಗೌಡ ಮನೆ ಪ್ರವೇಶಿಸಿದರೆ ರಾಕೇಶ್ ಹಾಗೂ ಅಮೂಲ್ಯ ಗೌಡ ನಡುವಿನ ಈಕ್ವೇಶನ್ ಬದಲಾಗಲಿದೆ.

  ಬಿಗ್‌ಬಾಸ್ ಮನೆಯಲ್ಲಿದ್ದ ಚಕ್ರವರ್ತಿ ಚಂದ್ರಚೂಡ್

  ಬಿಗ್‌ಬಾಸ್ ಮನೆಯಲ್ಲಿದ್ದ ಚಕ್ರವರ್ತಿ ಚಂದ್ರಚೂಡ್

  ಇನ್ನು ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಬಿಗ್‌ಬಾಸ್‌ ಮನೆಯಲ್ಲಿದ್ದವರು, ಅದರಲ್ಲಿಯೂ ಪ್ರಶಾಂತ್ ಸಂಬರ್ಗಿಯನ್ನು ಬಿಗ್‌ಬಾಸ್‌ನ ಒಳಗೆ ಹಾಗೂ ಹೊರಗೂ ವಿರೋಧಿಸುತ್ತಲೇ ಬಂದವರು. ಈಗ ಅವರು ಮನೆ ಪ್ರವೇಶಿಸಿದರೆ ಪ್ರಶಾಂತ್ ಸಂಬರ್ಗಿಗೆ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ಇವರಿಬ್ಬರ ಜುಗಳ್‌ಬಂಧಿ ಪ್ರೇಕ್ಷಕರಿಗೆ ಖುಷಿ ನೀಡುವ ಸಾಧ್ಯತೆಯೂ ಇದೆ.

  ರೂಪೇಶ್ ರಾಜಣ್ಣ ಆಟಾಟೋಪ

  ರೂಪೇಶ್ ರಾಜಣ್ಣ ಆಟಾಟೋಪ

  ಸೆಪ್ಟೆಂಬರ್ 24 ರಂದು ಪ್ರಾರಂಭವಾದ ಬಿಗ್‌ಬಾಸ್‌ ಸೀಸನ್ 09 ರಲ್ಲಿ ಪ್ರಸ್ತುತ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ಆರ್ಯವರ್ಧನ್ ಅವರುಗಳ ಆಟ ಜೋರಾಗಿ ನಡೆಯುತ್ತಿದೆ. ಅದರಲ್ಲಿಯೂ ಈ ವಾರವಂತೂ ರೂಪೇಶ್ ರಾಜಣ್ಣ ಆಟ ಬಹಳ ಜೋರಾಗಿ ನಡೆಯುತ್ತಿದೆ. ಈ ವಾರ ರೂಪೇಶ್ ರಾಜಣ್ಣಗೆ ಕಳಪೆ ಸ್ಪರ್ಧಿ ಎಂಬ ಪಟ್ಟ ಬರುವ ಸಾಧ್ಯತೆಯೂ ಇದೆ. ಈ ವಾರ ಹಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

  English summary
  Sonu Gowda and Chakravarthy Chandrachud may get wild card entry to Bigg Boss season 09 soon.
  Friday, November 11, 2022, 10:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X