»   » ರೋಹಿತ್ ಶರ್ಮಾಗೆ ಸೋಪಿಯಾ ಹಾಟ್ ಉಡುಗೊರೆ

ರೋಹಿತ್ ಶರ್ಮಾಗೆ ಸೋಪಿಯಾ ಹಾಟ್ ಉಡುಗೊರೆ

Posted By: ರವಿಕಿಶೋರ್
Subscribe to Filmibeat Kannada

ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಹೊಸ ದಾಖಲೆ ಮೆರೆದ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾಗೆ ಒಂದು ಹಾಟ್ ಗಿಫ್ಟ್ ಕೊಡಲು ಮುಂದಾಗಿದ್ದಾರೆ ತಾರೆ ಸೋಫಿಯಾ ಹಯಾತ್. ಶ್ರೀಲಂಕಾ ವಿರುದ್ಧ ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ 264 ರನ್ ಗಳಿಸಿದ ನೂತನ ದಾಖಲೆ ಬರೆದ ರೋಹಿತ್ ಗೆ ಈಗ ರೋಚಕ ಗಿಫ್ಟ್ ಸಿಗುತ್ತಿದೆ.

ತಮ್ಮ ನಗ್ನ ಚಿತ್ರಗಳನ್ನು ರೋಹಿತ್ ಅವರಿಗೆ ಅರ್ಪಿಸಿದ್ದಾರೆ ಸೋಫಿಯಾ. ಕೆಲವು ನಗ್ನ ಚಿತ್ರಗಳನ್ನು ಟ್ವಿಟ್ಟರ್ ಮೂಲಕ ಅರ್ಪಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ ಹಾಟ್ ಬೆಡಗಿ ಸೋಫಿಯಾ.

ರೋಹಿತ್ ಶರ್ಮಾ ಎಲ್ಲಿದ್ದರೆ ಅಲ್ಲೆಲ್ಲಾ ಸೋಫಿಯಾ ಸಹ ಇರುತ್ತಾರಂತೆ. ಅದು ಯಾವುದೇ ಸಭೆ ಸಮಾರಂಭವಿರಲಿ ಹಾಜರ್. ರೋಹಿತ್ ಬೆನ್ನ ಹಿಂದೆಯೇ ಇದ್ದು ಅವರಿಗೆ ಹೊಸ ಸ್ಫೂರ್ತಿ ನೀಡುತ್ತಿದ್ದಾರಂತೆ.

Sophia1

ರೋಹಿತ್ ಬೆನ್ನ ಹಿಂದೆ ಸೋಫಿಯಾ ಬಿದ್ದಿರುವುದು ಹಲವರ ಹುಬ್ಬೇರಿಸಿದ್ದು, ನಾನಾ ಗಾಸಿಪ್ ಗಳಿಗೂ ದಾರಿ ಮಾಡಿಕೊಡುತ್ತಿದೆ. ಆದರೆ ಇದ್ಯಾವುದನ್ನೂ ರೋಹಿತ್ ಅಷ್ಟಾಗಿ ತಲೆಗೆ ಹಾಕಿಕೊಂಡಿಲ್ಲ ಎಂಬುದೇ ಸಮಾಧಾನಕರ ಸಂಗತಿ.

ಡಬಲ್ ಸೆಂಚುರಿ ದಾಖಲೆ ಮಾಡುತ್ತಿದ್ದಂತೆ ಸೋಫಿಯಾ ತಮ್ಮ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡಿ ರೋಹಿತ್ ಅವರಿಗೆ ಬೆಂಬಲ ಸೂಚಿಸಿದ್ದರು. ಈ ಬಗ್ಗೆ ರೋಹಿತ್ ಮಾತ್ರ ಏನೂ ಹೇಳುತ್ತಿಲ್ಲ. ಒಟ್ಟಾರೆ ಪೂನಂ ಪಾಂಡೆ ಹಾದಿಯಲ್ಲಿ ಸೋಫಿಯಾ ಹೆಜ್ಜೆ ಹಾಕುತ್ತಿದ್ದಾರೆ.

English summary
After bagging double century, Rohit Sharma was a happy cricketer in Indian team. Sophia Hayat came up with hot photo shoot just for the sake of Rohit Sharma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada