ಸಂಭಾವನೆ ಹೆಚ್ಚಿಸಿಕೊಂಡ ಪೂಜಾ ಹೆಗ್ಡೆ, ನಿರ್ಮಾಪಕರು ಸುಸ್ತೋ ಸುಸ್ತು!
ಕೊರೊನಾ ಲಾಕ್‌ಡೌನ್ ಆದ್ಮೇಲೆ ನಿರ್ಮಾಪಕ ಸಂಕಷ್ಟಕ್ಕೆ ಬಿದ್ದಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಸ್ಟಾರ್‌ಗಳು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡರೆ ಉತ್ತಮ ಎಂಬ ಅಭಿಪ್ರಾಯ ಸಿನಿ ಜಗತ್ತಿನಲ್ಲಿ ಕೇಳಿಬರುತ್ತಿದೆ.
ಆದ್ರೆ, ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಂಭಾವನೆಯನ್ನ ಮಾತ್ರ ಭಾರಿ ಏರಿಸಿಕೊಂಡಿದ್ದಾರೆ. ಆ ಬಾಲಿವುಡ್ ಆಫರ್ ಬರುತ್ತಿದ್ದಂತೆ ಈ ಕಡೆ ತೆಲುಗಿನಲ್ಲಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ ನಟಿ. ಹೀಗಾಗಿ, ನಿರ್ಮಾಪಕರು ಅಯ್ಯೋ ಎಂದು ತಲೆ ಮೇಲೆ ಕೈಯಿಟ್ಟು ಕುಳಿತುಕೊಂಡಿದ್ದಾರೆ. ಅಷ್ಟಕ್ಕೂ, ಪೂಜಾ ಹೆಗ್ಡೆ ಸಂಭಾವನೆ ಎಷ್ಟು? ಮುಂದೆ ಓದಿ...

ಅಲಾ ವೈಕುಂಠಪುರಂಲೋ ಹಿಟ್
ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿದ್ದರು. ಈ ಚಿತ್ರ ಯಶಸ್ಸು ಆಗುತ್ತಿದ್ದಂತೆ ಪೂಜಾಗೆ ಆಫರ್ ಹೆಚ್ಚಾಯಿತು. ಆ ಕಡೆ ಬಾಲಿವುಡ್‌ನಲ್ಲೂ ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಸಿಕ್ತು.

2.5 ಕೋಟಿ ಎನ್ನುತ್ತಿದ್ದಾರೆ ನಟಿ
ಒಂದು ಸಿನಿಮಾ 1.5 ಕೋಟಿಗಿಂತ ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಿದ್ದ ಪೂಜಾ ಹೆಗ್ಡೆ ಈಗ ತನ್ನ ಸಂಭಾವನೆಯನ್ನು 2.5 ಕೋಟಿಗೆ ಏರಿಕೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಮಹರ್ಷಿ ಚಿತ್ರಕ್ಕೆ 1 ಕೋಟಿ, ಅಲಾ ವೈಕುಂಠಪುರಂಲೋ ಚಿತ್ರಕ್ಕೆ 1.40 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವರದಿಯಾಗಿದೆ.

ಪೂಜಾ ಕೈಯಲ್ಲಿರುವ ಚಿತ್ರಗಳು
'ಅಲಾ ವೈಕುಂಠಪುರಂಲೋ' ಸಿನಿಮಾ ಬಳಿಕ ಪ್ರಭಾಸ್ ನಟಿಸುತ್ತಿರುವ 'ರಾಧೇ ಶ್ಯಾಮ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಡೆ ಅಖಿಲ್ ಅಕ್ಕಿಕೇನಿ ನಟಿಸುತ್ತಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರಕ್ಕೂ ಪೂಜಾ ನಾಯಕಿಯಾಗಿದ್ದಾರೆ. ಈ ಚಿತ್ರಗಳಿಗಾಗಿ ನಿರ್ಮಾಪಕರು 2.5 ಕೋಟಿ ನೀಡಿದ್ದಾರೆ ಎನ್ನಲಾಗಿದೆ.

ಬಾಲಿವುಡ್ನನಲ್ಲೂ ಹೆಚ್ಚಿದ ಅವಕಾಶ
2016ರಲ್ಲಿ ಮೊಹೆಂಜೊ ದಾರೊ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದ ಪೂಜಾ 2019ರಲ್ಲಿ ಹೌಸ್‌ಪುಲ್ ಸಿನಿಮಾ ಮಾಡಿದರು. ಇದೀಗ, ಸಲ್ಮಾನ್ ಖಾನ್ ನಟಿಸಲಿರುವ 'ಕಬೀ ಈದ್ ಕಬೀ ದಿವಾಳಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿಯೂ ದೊಡ್ಡ ಸಂಭಾವನೆ ಪಡೆದಿದ್ದಾರೆ.


Click it and Unblock the Notifications











