ಸೂಪರ್ ಹಿಟ್ ಸಿನಿಮಾ ಹಿಂದಿ ರೀಮೆಕ್‌ನಲ್ಲಿ ಶ್ರೀಲೀಲಾ? ಪ್ಲ್ಯಾನ್ ಹೇಗಿದೆ ಗೊತ್ತಾ?

ಸದ್ಯ ಮಹಿಳಾ ಪ್ರಧಾನ ಸಿನಿಮಾಗಳ ಕಾರುಬಾರು ಜೋರಾಗಿದೆ. ಇತ್ತೀಚೆಗೆ ಮಲಯಾಳಂ ಸಿನಿಮಾ 'ಲೋಕ' ದಾಖಲೆ ಪ್ರದರ್ಶನ ಕಾಣುತ್ತಿದೆ. ಇನ್ನು ಬಾಲಿವುಡ್‌ನಲ್ಲಿ ಮೊದಲಿನಿಂದಲೂ ಮಹಿಳಾ ಪ್ರಧಾನ ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಆದರೆ 'ಅರುಂಧತಿ' ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡುವ ಪ್ರಯತ್ನ ಸಫಲವಾಗಲೇ ಇಲ್ಲ.

16 ವರ್ಷಗಳ ಹಿಂದೆ ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದ 'ಅರುಂಧತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಹಾರರ್ ಫ್ಯಾಂಟಸಿ ಚಿತ್ರದಿಂದ ಪ್ರೇರಣೆಗೊಂಡು ಬಳಿಕ ಹಲವು ಸಿನಿಮಾಗಳು ಬಂದಿದ್ದವು. ಇನ್ನು ದೀಪಿಕಾ ಪಡುಕೋಣೆ ಅಥವಾ ಕರೀನಾ ಕಪೂರ್ ನಾಯಕಿಯಾಗಿ ಬಾಲಿವುಡ್‌ನಲ್ಲಿ ಸಿನಿಮಾ ರೀಮೆಕ್ ಮಾಡುವ ಪ್ರಯತ್ನ ಹಿಂದೆ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಶ್ರೀಲೀಲಾ ನಾಯಕಿಯಾಗಿ ಅಂತಾದೊಂದು ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ.

Sreeleela in Talks to Lead Hindi Remake of Anushka Shetty s blockbuster film

ತಮಿಳು ನಿರ್ದೇಶಕ ಮೋಹನ್ ರಾಜಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ರೀಮೆಕ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಮೋಹನ್ ರಾಜಾ ಸಿದ್ಧಹಸ್ತರು. ಆದರೆ 'ತನಿ ಒರುವನ್' ಎಂಬ ಸ್ವಮೇಕ್ ಸಿನಿಮಾ ನಿರ್ದೇಶಿಸಿ ಕಮಾಲ್ ಮಾಡಿದ್ದರು. ಬಳಿಕ ಈ ಸಿನಿಮಾ ತೆಲುಗಿಗೆ ರೀಮೆಕ್ ಆಗಿ ಗೆದ್ದಿತ್ತು. ಎರಡು ವರ್ಷಗಳ ಹಿಂದೆ ಮಲಯಾಳಂ 'ಲೂಸಿಫರ್' ಚಿತ್ರವನ್ನು ತೆಲುಗಿನಲ್ಲಿ 'ಗಾಡ್ ಫಾದರ್' ಹೆಸರಿನಲ್ಲಿ ಕಟ್ಟಿಕೊಟ್ಟಿದ್ದರು. ಸಿನಿಮಾ ಗೆಲ್ಲಲಿಲ್ಲ.

ಈಗಾಗಲೇ 'ಆಶಿಕಿ- 3' ಸಿನಿಮಾ ಮೂಲಕ ಶ್ರೀಲೀಲಾ ಬಾಲಿವುಡ್ ಪ್ರವೇಶಿಸಿದ್ದಾರೆ. ಕಾರ್ತಿಕ್ ಆರ್ಯನ್ ಜೋಡಿಯಾಗಿ ನಟಿಸುತ್ತಿದ್ದಾರೆ. ಬೇರೆ ಬೇರೆ ಕಥೆಗಳನ್ನು ಕೇಳುತ್ತಿದ್ದು ಮತ್ತಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸೋ ಸುಳಿವು ಸಿಕ್ತಿದೆ. ಇದೆಲ್ಲದರ ನಡುವೆ 'ಅರುಂಧತಿ' ರೀಮೆಕ್‌ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ನಿಜಕ್ಕೂ ಅಂಥಾದೊಂದು ಅವಕಾಶ ಸಿಕ್ಕರೆ ಶ್ರೀಲೀಲಾ ಜಾಕ್‌ಪಾಟ್ ಹೊಡೆದಂತೆ ಆಗುತ್ತದೆ.

Sreeleela in Talks to Lead Hindi Remake of Anushka Shetty s blockbuster film

ಬೆಂಗಳೂರಿನಲ್ಲಿ ಓದಿ ಬೆಳೆದ ಶ್ರೀಲೀಲಾ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿ ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ಆರಂಭದಲ್ಲಿ ಒಳ್ಳೆ ಕ್ರೇಜ್ ಸಂಪಾದಿಸಿಕೊಂಡಿದ್ದ ಕಿಸ್ ಬೆಡಗಿ ಬಳಿಕ ಸೈಲೆಂಟ್ ಆಗಿಬಿಟ್ಟರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರೂ ಪ್ರಯೋಜನವಾಗಿರಲಿಲ್ಲ. ಇಂತಹ ಸಮಯದಲ್ಲಿ 'ಪುಷ್ಪ'-2 ಚಿತ್ರದ 'ಕಿಸ್ಸಿಕ್' ಸಾಂಗ್‌ನಲ್ಲಿ ಕುಣಿಯುವಂತಾಯಿತು. ಆ ಮೂಲಕ ಬಾಲಿವುಡ್ ಫಿಲ್ಮ್ ಮೇಕರ್ಸ್ ಕಣ್ಣಿಗೆ ಬಿದ್ದರು.

2009ರಲ್ಲಿ ಬಂದಿದ್ದ 'ಅರುಂಧತಿ' ಚಿತ್ರಕ್ಕೆ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಿದ್ದರು. ಅರುಂಧತಿ ಹಾಗೂ ಜೇಜಮ್ಮ ಹೀಗೆ ದ್ವಿಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿ ಮೋಡಿ ಮಾಡಿದ್ದರು. ಇವತ್ತಿಗೂ ಸ್ವೀಟಿ ನಟಿಸಿದ ಜನಪ್ರಿಯ ಸಿನಿಮಾ ಇದೇ ಆಗಿದೆ. ಅಷ್ಟರಮಟ್ಟಿಗೆ ಆ ಸಿನಿಮಾ, ಆ ಪಾತ್ರ ಆಕೆಗೆ ಹೆಸರು ತಂದುಕೊಟ್ಟಿತ್ತು. ಅವತ್ತಿನ ಕಾಲಕ್ಕೆ ಅಂದಾಜು 13 ಕೋಟಿ ರೂ. ಬಜೆಟ್ ಸಿನಿಮಾ 70 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಪ್ಯಾನ್ ಇಂಡಿಯಾ ಟ್ರೆಂಡ್ ಇಲ್ಲದ ಕಾಲ ಅದು. ಹಾಗಾಗಿ ಹಿಂದಿಗೆ ಸಿನಿಮಾ ಡಬ್ ಆಗಿರಲಿಲ್ಲ. ದಕ್ಷಿಣದ ಫ್ಯಾಂಟಸಿ ಸಿನಿಮಾಗಳು ಈಗ ಹಿಂದಿ ಬೆಲ್ಟ್‌ನಲ್ಲಿ ಸಖತ್ ಸದ್ದು ಮಾಡ್ತಿವೆ. ಇಂತಹ ಸಮಯದಲ್ಲಿ 'ಅರುಂಧತಿ' ಸಿನಿಮಾ ರೀಮೆಕ್ ಮಾಡುವುದು ಒಳ್ಳೆ ಪ್ರಯತ್ನ ಎನ್ನುವ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಶ್ರೀಲೀಲಾ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸದ್ಯ ಕನ್ನಡದಲ್ಲಿ ಆಕೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

More from Filmibeat

English summary
Buzz is growing that actress Sreeleela may star in the Hindi remake of Anushka Shetty’s blockbuster ‘Arundhati’. Directed by Mohan Raja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X