Sreeleela: ರಶ್ಮಿಕಾಗಿಂತ ಬಹಳ ಮುಂದೆ ಹೋಗಿಬಿಟ್ರು ಶ್ರೀಲೀಲಾ: ಪ್ರಭಾಸ್‌ ಜೋಡಿಯಾಗಿ ಕಿಸ್ ಬೆಡಗಿ?

ಬೆಂಗಳೂರು ಬೆಡಗಿ ಶ್ರೀಲೀಲಾ ಟಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಪವನ್ ಕಲ್ಯಾಣ್, ಮಹೇಶ್ ಬಾಬುರಂತಹ ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಬರೋಬ್ಬರಿ 8 ತೆಲುಗು ಸಿನಿಮಾಗಳಿವೆ. ಅದರ ಜೊತೆ ಮತ್ತೊಂದು ಕ್ರೇಜಿ ಪ್ರಾಜೆಕ್ಟ್‌ಗೆ ಆಕೆ ಹೀರೊಯಿನ್ ಎನ್ನುವ ಗುಸುಗುಸು ಶುರುವಾಗಿದೆ.

ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾಗಳಲ್ಲಿ ಮಿಂಚಿ ಇದೀಗ ಬಾಲಿವುಡ್‌ಗೂ ಅಡಿಇಟ್ಟಿದ್ದಾರೆ. ಪೂಜೆ ಹೆಗ್ಡೆ, ರಶ್ಮಿಕಾ ಹಾಗೂ ಶ್ರೀಲೀಲಾ ಆರ್ಭಟದ ನಡುವೆ ಟಾಲಿವುಡ್‌ನಲ್ಲಿ ಬೇರೆ ನಟಿಯರೆಲ್ಲಾ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸ್ಟಾರ್ ನಟರ ಸಿನಿಮಾಗಳಿಗೆ ಮೊದಲ ಆಯ್ಕೆ ಈ ಮೂವರಲ್ಲಿ ಒಬ್ಬರಾಗಿರುತ್ತಾರೆ. ಅಷ್ಟರಮಟ್ಟಿಗೆ ತೆಲುಗು ಚಿತ್ರರಂಗದಲ್ಲೀಗ ಕರ್ನಾಟಕದ ಮೂಲದ ಈ ಚೆಲುವೆಯರ ಹವಾ ನಡೀತಿದೆ. ನಿಧಾನವಾಗಿ ಪೂಜಾ, ರಶ್ಮಿಕಾನ ಮೀರಿ ಶ್ರೀಲೀಲಾ ಮೋಡಿ ಮಾಡಲು ಶುರು ಮಾಡಿದ್ದಾರೆ.

Sreelela to pair opposite Prabhas in Hanu Raghavapudi directorial

ಶ್ರೀಲೀಲಾ ಈವರೆಗೆ ಟಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳೇನು ಕೊಟ್ಟಿಲ್ಲ. ಆದರೆ ಹೊಸ ಮುಖ. ನೋಡಲು ಸುಂದರವಾಗಿರುವ ಚೆಲುವೆ ಅಷ್ಟೆ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಡ್ಡೆ ಹುಡುಗರಲ್ಲಿ ಈಕೆಗೆ ಒಳ್ಳೆ ಕ್ರೇಜ್ ಇದೆ. ಅದೇ ಕಾರಣಕ್ಕೆ ಸಾಲು ಸಾಲು ಸಿನಿಮಾಗಳ ಅವಾಕಾಶಗಳು ಹುಡುಕಿ ಬರ್ತಿದೆ. ಅಂದಹಾಗೆ ಪ್ರಭಾಸ್ ಮುಂದಿನ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ಶುರುವಾಗಿದೆ.

ಈಗಾಗಲೇ ಪ್ರಭಾಸ್ 'ಸಲಾರ್', 'ಕಲ್ಕಿ' ಹಾಗೂ 'ರಾಜಾ ಡೀಲಕ್ಸ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಹನು ರಾಘವಪುಡಿ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ 'ಸೀತಾರಾಮಂ' ಸಿನಿಮಾ ಮಾಡಿದ್ದ ನಿರ್ದೇಶಕ ಯಂಗ್ ರೆಬಲ್‌ ಸ್ಟಾರ್‌ಗಾಗಿ ಬೊಂಬಾಟ್ ಕತೆ ಸಿದ್ಧಪಡಿಸಿದ್ದಾರೆ ಎನ್ನಲಾಗ್ತಿದೆ. 2ನೇ ಮಹಾಯುದ್ಧದ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಲಿದೆಯಂತೆ.

ಪ್ರಭಾಸ್- ಹನು ರಾಘವಪುಡಿ ಕಾಂಬಿನೇಷನ್‌ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ಸಿನಿಮಾ ಈ ವರ್ಷಾಂತ್ಯಕ್ಕೆ ಸೆಟ್ಟೇರಲಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದ್ದು ಅದೇ ನಿಜವಾದರೆ ಆಕೆಯ ಕ್ರೇಜ್ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಅಲ್ಲು ಅರ್ಜುನ್ ಬಿಟ್ಟರೆ ರಶ್ಮಿಕಾ ಕೂಡ ಯಾವುದೇ ಸ್ಟಾರ್ ನಟನ ಜೊತೆ ನಟಿಸಿಲ್ಲ. ಪ್ರಭಾಸ್ ಜೊತೆ ಶ್ರೀಲೀಲಾ ನಟಿಸಿದರೆ ಆಕೆಯನ್ನು ಮೀರಿಸಿ ಮುಂದೆ ಹೋದಂತಾಗುತ್ತದೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ಆಗ್ತಿದೆ.

Sreelela to pair opposite Prabhas in Hanu Raghavapudi directorial

ಶ್ರೀಲೀಲಾ ನಟನೆಯ 'ಸ್ಕಂದ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದಲ್ಲಿ ರಾಮ್ ಜೋಡಿಯಾಗಿ ಮಿಂಚಿದ್ದಾರೆ. 'ಭಗವಂತ್ ಕೇಸರಿ' ಚಿತ್ರದಲ್ಲಿ ಬಾಲಕೃಷ್ಣ ಸಹೋದರಿಯಾಗಿ ಶ್ರೀ ಬಣ್ಣ ಹಚ್ಚಿದ್ದಾರೆ. 'ಆದಿಕೇಶವ' ಎನ್ನುವ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. 'ಎಕ್ಸ್ಟ್ರಾಡಿನರಿಮ್ಯಾನ್' ಚಿತ್ರದಲ್ಲಿ ನಿತಿನ್ ಜೋಡಿಯಾಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಆಕೆ ಹೊರಬಂದ ಮೇಲೆ ಅವಕಾಶ ಕಿಸ್ ಬೆಡಗಿ ಪಾಲಾಗಿತ್ತು.

ಇನ್ನು ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಚಿತ್ರದ ಇಬ್ಬರು ನಾಯಕಿಯರಲ್ಲಿ ಶ್ರೀಲೀಲಾ ಒಬ್ಬರಾಗಿದ್ದಾರೆ. ವಿಜಯ್ ದೇವರಕೊಂಡ ಹೊಸ ಚಿತ್ರಕ್ಕೂ ಕಾಲ್‌ಶೀಟ್ ಕೊಟ್ಟಿದ್ದಾರೆ. 'ಉಸ್ತಾದ್‌ ಭಗತ್ ಸಿಂಗ್' ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ಬೆಂಗಳೂರು ಚೆಲುವೆ ಕಾಣಿಸಿಕೊಳ್ಳುತ್ತಿದ್ದಾರೆ. 'ಅನಗನಗ ಒಕರೋಜು' ಎನ್ನುವ ಇನ್ನೊಂದು ಸಿನಿಮಾ ಕೂಡ ಆಕೆಯ ಕೈಯಲ್ಲಿದೆ. ಇದೆಲ್ಲದರ ಜೊತೆಗೆ ಪ್ರಭಾಸ್ ಜೊತೆ ನಟಿಸೋ ಛಾನ್ಸ್ ಸಿಗುತ್ತಾ ಕಾದು ನೋಡಬೇಕಿದೆ.

More from Filmibeat

English summary
Prabhas and SreeLeela will be playing the pair for Hanu Raghavapudi direction project
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X