For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ 'ಮದಗಜ' ಸಕ್ಸಸ್ ಮೀಟ್‌ನಲ್ಲಿ 'ಮದಗಜ 2' ಘೋಷಣೆ: ಏನಂತಿದೆ ಸ್ಯಾಂಡಲ್‌ವುಡ್?

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ 'ಮದಗಜ' ಮಾಸ್ ಆಡಿಯನ್ಸ್‌ಗೆ ಇಷ್ಟ ಆಗಿತ್ತು. ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. 2021 ಡಿಸೆಂಬರ್ 03 ರಂದು ರಾಜ್ಯಾದ್ಯಂತ ಈ ಸಿನಿಮಾ ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ಲಗ್ಗೆ ಇಟ್ಟು ಪರಭಾಷಾ ಸಿನಿಮಾಗಳ ನಡುವೆಯೂ 'ಮದಗಜ' ಬಾಕ್ಸಾಫೀಸ್‌ನಲ್ಲಿ ಬಡಿದಾಡಿತ್ತು. ಈ ಸಿನಿಮಾವೀಗ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಇಡೀ ಚಿತ್ರತಂಡಕ್ಕೆ ಸಕ್ಸಸ್ ಪಾರ್ಟಿ ನೀಡಲು ಮುಂದಾಗಿದ್ದಾರೆ.

  'ಮದಗಜ'50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಕೆಲವು ದಿನಗಳ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಿರ್ಮಾಪಕ ಉಮಾಪತಿ ಒಟ್ಟಿಗೆ ಸೇರಿದ್ದರು. ಆಗಲೇ ಮದಗಜ ಪಾರ್ಟು ಮಾಡುವ ಬಗ್ಗೆ ಮೂವರೂ ಚರ್ಚೆ ಮಾಡಿದ್ದರು. ಈಗ ಸಕ್ಸಸ್ ಪಾರ್ಟಿಯಲ್ಲಿ ಇಡೀ ಚಿತ್ರತಂಡಕ್ಕೆ ನಿರ್ಮಾಪಕ ಉಮಾಪತಿ ಸರ್ಪ್ರೈಸ್ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

  50 ದಿನ ಪೂರೈಸಿದ 'ಮದಗಜ', 2023ಕ್ಕೆ ಇದೇ ಟೀಮ್‌ನಿಂದ ಮತ್ತೊಂದು ಸಿನಿಮಾ50 ದಿನ ಪೂರೈಸಿದ 'ಮದಗಜ', 2023ಕ್ಕೆ ಇದೇ ಟೀಮ್‌ನಿಂದ ಮತ್ತೊಂದು ಸಿನಿಮಾ

  ಶ್ರೀಮುರಳಿಯ 'ಮದಗಜ' ಚಿತ್ರ 50 ದಿನ ಕಂಪ್ಲೀಟ್

  ಶ್ರೀಮುರಳಿಯ 'ಮದಗಜ' ಚಿತ್ರ 50 ದಿನ ಕಂಪ್ಲೀಟ್

  'ಮದಗಜ' 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಜನವರಿ 22 ರಂದು ನಿರ್ಮಾಪಕ ಉಮಾಪತಿ, ಶ್ರೀಮುರಳಿ ಹಾಗೂ ಮಹೇಶ್ ಕುಮಾರ್ ಮೂವರೂ ಒಟ್ಟಿಗೆ ಸೇರಿದ್ದರು. ಈ ವೇಳೆ ಮೂವರೂ ಮತ್ತೊಂದು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದರು. ಈ ವಿಷಯವನ್ನು ಸ್ವತ: ನಿರ್ದೇಶಕ ಮಹೇಶ್ ಕುಮಾರ್ ಫಿಲ್ಮಿ ಬೀಟ್ ಕನ್ನಡಕ್ಕೆ ತಿಳಿಸಿದ್ದರು. ಇಂದು ಇಡೀ 'ಮದಗಜ' ತಂಡಕ್ಕೆ ನಿರ್ಮಾಪಕರು ಸಕ್ಸಸ್ ಪಾರ್ಟಿ ನೀಡುತ್ತಿದ್ದಾರೆ. ಆಗಲೇ ಚಿತ್ರತಂಡಕ್ಕೆ ಸರ್ಪ್ರೈಸ್ ನೀಡಲಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ.

  ಶ್ರೀಮುರಳಿ 'ಮದಗಜ' ಸಿನಿಮಾ ಗೆದ್ದಿದೆಯಾ..? ಸೋತಿದ್ಯಾ?: ಏನ್ ಹೇಳುತ್ತೆ ಬಾಕ್ಸಾಫೀಸ್ ರಿಪೋರ್ಟ್?ಶ್ರೀಮುರಳಿ 'ಮದಗಜ' ಸಿನಿಮಾ ಗೆದ್ದಿದೆಯಾ..? ಸೋತಿದ್ಯಾ?: ಏನ್ ಹೇಳುತ್ತೆ ಬಾಕ್ಸಾಫೀಸ್ ರಿಪೋರ್ಟ್?

  'ಮದಗಜ 2' ಘೋಷಣೆ ಸಾಧ್ಯತೆ?

  'ಮದಗಜ 2' ಘೋಷಣೆ ಸಾಧ್ಯತೆ?

  'ಮದಗಜ' ಚಿತ್ರ 11 ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿತ್ತು. ಸದ್ಯ 6 ಸಿನಿಮಾ ಮಂದಿಗಳಲ್ಲಿ 'ಮದಗಜ' ಪ್ರದರ್ಶನ ಕಾಣುತ್ತಿದೆ. ಹೀಗಾಗಿ ಸಿನಿಮಾ ಬ್ಯುಸಿನೆಸ್ ಬಗ್ಗೆ ನಿರ್ಮಾಪಕ ಉಮಾಪತಿ ಖುಷಿಯಾಗಿದ್ದಾರೆ ಅನ್ನುವುದು ಸುದ್ದಿ. ಹೀಗಾಗಿಯೇ 2023ರಲ್ಲಿ ಇದೇ ತಂಡ ಮತ್ತೊಂದು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅದುವೇ 'ಮದಗಜ 2'. "ಮದಗಜ ತಂಡವೇ ಸೇರಿಕೊಂಡು ಮತ್ತೊಂದು ಸಿನಿಮಾ ನಿರ್ಮಾಣ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಶ್ರೀಮುರಳಿ ಸರ್ ಬಘೀರ್ ಸಿನಿಮಾ ಮುಗಿಯಬೇಕು. ನಾನು ಒಂದು ಮಲ್ಟಿಸ್ಟಾರರ್ ಸಿನಿಮಾಗೆ ಕೆಲಸ ಮಾಡುತ್ತಿದ್ದೇನೆ. ನಿರ್ಮಾಪಕರು ಕೂಡ ಉಪಾಧ್ಯಕ್ಷ ಮಾಡುತ್ತಿದ್ದಾರೆ. ಇವೆಲ್ಲವೂ ಮುಗಿದ ಬಳಿಕ 2023ಕ್ಕೆ ಮತ್ತೆ ಒಟ್ಟಿಗೆ ಸೇರಲಿದ್ದೇವೆ." ಎಂದು ನಿರ್ದೇಶಕ ಮಹೇಶ್ ಕುಮಾರ್ ಮೂವರು ಒಟ್ಟಿಗೆ ಸೇರಿದ ದಿನ ಫಿಲ್ಮ್‌ ಬೀಟ್‌ಗೆ ತಿಳಿಸಿದ್ದರು. ಹೀಗಾಗಿ ಇಂದಿನ ಸಕ್ಸಸ್ ಮೀಟ್‌ನಲ್ಲಿ 'ಮದಗಜ 2' ಅನೌನ್ಸ್ ಮಾಡುವ ಸಾಧ್ಯತೆಯಿದೆ.

  'ಬಘೀರ' ಬಳಿಕ 'ಮದಗಜ 2'?

  'ಬಘೀರ' ಬಳಿಕ 'ಮದಗಜ 2'?

  'ಮದಗಜ' ಬಳಿಕ ಶ್ರೀಮುರಳಿ ಅಭಿನಯದ 'ಬಘೀರ' ಸೆಟ್ಟೇರಬೇಕಿದೆ. ಆದರೆ, ಇನ್ನೂ ಈ ಸಿನಿಮಾದ ಬಗ್ಗೆ ಯಾವುದೇ ಸುದ್ದಿ ಹೊರಬಿದ್ದಿಲ್ಲ. ಹೊಂಬಾಳೆ ಫಿಲಂಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದರೆ. ಡಾ.ಸೂರಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆದರೆ, ಮದಗಜ ಮುಗಿದ ಬಳಿಕವೂ ಸಿನಿಮಾ ಅನೌನ್ಸ್ ಆಗಿಲ್ಲ. ಹೊಂಬಾಳೆ ಫಿಲಂಸ್ 'ಕೆಜಿಎಫ್ 2' ಬಿಡುಗಡೆ ಬಳಿಕ ಈ ಸಿನಿಮಾ ಸೆಟ್ಟೇರಿಸುವ ನಿರೀಕ್ಷೆಯಿದೆ. 2023ಕ್ಕೆ 'ಮದಗಜ 2' ಗ್ಯಾರಂಟಿ ಎನ್ನಲಾಗುತ್ತಿದೆ.

  ಶ್ರೀಮುರಳಿ 'ಮದಗಜ' ಸ್ಯಾಟಲೈಟ್ ಹಕ್ಕು ಸೇಲ್: ನಿರ್ಮಾಪಕರಿಗೆ ಸಿಕ್ಕಿದ್ದು ಎಷ್ಟು ಕೋಟಿ?ಶ್ರೀಮುರಳಿ 'ಮದಗಜ' ಸ್ಯಾಟಲೈಟ್ ಹಕ್ಕು ಸೇಲ್: ನಿರ್ಮಾಪಕರಿಗೆ ಸಿಕ್ಕಿದ್ದು ಎಷ್ಟು ಕೋಟಿ?

  ನಿರ್ದೇಶಕ- ನಿರ್ಮಾಪಕರು ಬ್ಯುಸಿ

  ನಿರ್ದೇಶಕ- ನಿರ್ಮಾಪಕರು ಬ್ಯುಸಿ

  ನಿರ್ದೇಶಕ ಮಹೇಶ್ ಕುಮಾರ್ ಮಲ್ಟಿಸ್ಟಾರರ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಉಮಾಪತಿ ಕೂಡ ಉಪಾಧ್ಯಕ್ಷ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಇಬ್ಬರೂ ಒಂದು ಸಿನಿಮಾ ಮುಗಿಸಿ, 'ಮದಗಜ 2' ಚಿತ್ರಕ್ಕೆ ಕೈ ಹಾಕಬಹುದು. ಇವೆಲ್ಲಾ ಏನೇ ಇದ್ದರೂ, ಇಂದು (ಫೆಬ್ರವರಿ 12) ನಡೆಯುವ ಸಕ್ಸಸ್ ಪಾರ್ಟಿಯಲ್ಲಿ 'ಮದಗಜ 2' ಅನೌನ್ಸ್ ಮಾಡುತ್ತಾರಾ ಅನ್ನೋ ಕುತೂಹಲ ಶ್ರೀಮುರಳಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

  English summary
  Sri Murali Ashika Ranganath Starrer Madagaja 2 may announce in success party. Producer Umapathy hosting succes party after Madagaja movie completing 50 days
  Saturday, February 12, 2022, 18:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X