'ಮಫ್ತಿ' ನಂತರ ಮತ್ತೊಂದು ಚಿತ್ರದಲ್ಲಿ ಒಂದಾಗಲಿದೆ ಯಶಸ್ವಿ ಜೋಡಿ!

By Naveen

'ಮಫ್ತಿ' ಸಿನಿಮಾ ಗೆದ್ದ ಬಳಿಕ ಶ್ರೀ ಮುರಳಿ ಮುಂದಿನ ಸಿನಿಮಾ ಯಾವುದು ಎನ್ನುವುದು ಎಲ್ಲರಿಗೂ ಇರುವ ಕುತೂಹಲ. 'ಉಗ್ರಂ' ನಂತರ ಶ್ರೀ ಮುರಳಿ ತಮ್ಮ ಸಿನಿಮಾಗಳ ಆಯ್ಕೆ ಬಗ್ಗೆ ತುಂಬ ಜಾಣತನ ತೋರುತ್ತಿದ್ದಾರೆ. ಕಥೆಯಲ್ಲಿನ ವಿಭಿನ್ನತೆ ನೋಡಿ ಶ್ರೀ ಮುರಳಿ ಸಿನಿಮಾ ಮಾಡುತ್ತಿದ್ದಾರೆ.

'ಮಫ್ತಿ' ಚಿತ್ರದ ಬಳಿಕ ಶ್ರೀ ಮುರಳಿ ಯಾವ ಸಿನಿಮಾ ಮಾಡುತ್ತಾರೆ ಎನ್ನುವುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಅವರ ಮುಂದಿನ ಸಿನಿಮಾದ ಬಗ್ಗೆ ಸುದ್ದಿ ಮೇಲೆ ಸುದ್ದಿ ಬರುತ್ತಿದೆ. 'ರಾಜಕುಮಾರ' ನಿರ್ಮಾಪಕ ಶ್ರೀ ಮುರಳಿಗೆ ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿಯ ಇತ್ತು. ಆದರೆ ಈಗ ಅದರ ಹಿಂದಿಯೇ ಕನ್ನಡದ ಮತ್ತೊಬ್ಬ ನಿರ್ಮಾಪಕರು ಶ್ರೀ ಮುರಳಿ ಜೊತೆ ಸಿನಿಮಾ ಮಾಡಲಿದ್ದಾರಂತೆ. ಮುಂದೆ ಓದಿ...

ಮತ್ತೆ 'ಮಫ್ತಿ' ಜೋಡಿ

ಮತ್ತೆ 'ಮಫ್ತಿ' ಜೋಡಿ

ಶ್ರೀ ಮುರಳಿ ಮತ್ತು ಶಿವಣ್ಣ ಅಭಿನಯದ 'ಮಫ್ತಿ' ಸಿನಿಮಾ ಹಿಟ್ ಆಗಿದೆ. ಈ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕ ಜಯಣ್ಣ ಬೋಗೇಂದ್ರ ಈಗ ಮತ್ತೆ ಶ್ರೀ ಮುರಳಿ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಮೂಲಕ ಮತ್ತೆ 'ಮಫ್ತಿ' ಜೋಡಿ ಒಂದಾಗುತ್ತಿದೆ.

ನಿರ್ಮಾಪಕ ಜಯಣ್ಣ ಬೋಗೇಂದ್ರ

ನಿರ್ಮಾಪಕ ಜಯಣ್ಣ ಬೋಗೇಂದ್ರ

ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಪಕರಾದ ಜಯಣ್ಣ ಬೋಗೇಂದ್ರ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. 'ಮಫ್ತಿ' ಸಿನಿಮಾದಿಂದ ಸಂತಸದಲ್ಲಿರುವ ಜಯಣ್ಣ ಬೋಗೇಂದ್ರ ಈಗ ಮತ್ತೆ ಶ್ರೀ ಮುರಳಿ ಜೊತೆ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ.

ಹೆಚ್ಚಿನ ಮಾಹಿತಿ ಇಲ್ಲ

ಹೆಚ್ಚಿನ ಮಾಹಿತಿ ಇಲ್ಲ

ನಿರ್ಮಾಪಕರಾದ ಜಯಣ್ಣ ಬೋಗೇಂದ್ರ ಶ್ರೀ ಮುರಳಿಗೆ ಒಂದು ಸಿನಿಮಾ ಮಾಡುವುದು ಪಕ್ಕಾ ಅಂತೆ. ಆದರೆ ಆ ಹೊಸ ಸಿನಿಮಾದ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ.

'ಮಫ್ತಿ' ಸಿನಿಮಾದ ಬಗ್ಗೆ

'ಮಫ್ತಿ' ಸಿನಿಮಾದ ಬಗ್ಗೆ

'ಮಫ್ತಿ' ಸಿನಿಮಾ ಡಿಸೆಂಬರ್ 1ಕ್ಕೆ ರಿಲೀಸ್ ಆಗಿತ್ತು. ನವ ನಿರ್ದೇಶಕ ನರ್ತನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಶ್ರೀ ಮುರಳಿ ಮಫ್ತಿ ಪೊಲೀಸ್ ಅಧಿಕಾರಿ ಆಗಿ ಮತ್ತು ಶಿವಣ್ಣ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡಿದ್ದರು.

ನಿರ್ಮಾಪಕರ ಕಣ್ಣು ಶ್ರೀ ಮುರಳಿ ಮೇಲೆ

ನಿರ್ಮಾಪಕರ ಕಣ್ಣು ಶ್ರೀ ಮುರಳಿ ಮೇಲೆ

ಸದ್ಯ ಹ್ಯಾಟ್ರಿಕ್ ಬಾರಿಸಿರುವ ಮುರಳಿ ಮೇಲೆ ನಿರ್ಮಾಪಕರ ಕಣ್ಣು ಬಿದ್ದಿದೆ. ಒಂದು ಕಡೆ ನಿರ್ಮಾಪಕ ವಿಜಯ್ ಕಿರಗಂದೂರು ಮುರಳಿ ಜೊತೆ ಸಿನಿಮಾ ಮಾಡುವ ಸುದ್ದಿ ಇದೆ. ಇತ್ತ ಜಯಣ್ಣ ಬೋಗೆಂದ್ರ ಕೂಡ ಮುರಳಿಯ ಮತ್ತೊಂದು ಸಿನಿಮಾಗೆ ಬಂಡವಾಳ ಹಾಕುವ ಪ್ಲಾನ್ ಮಾಡಿದ್ದಾರೆ.

More from Filmibeat

English summary
According to the sources kannada movie producers Jayanna Bhogendra planning to do a movie with Actor Srimurali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X