For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ವಿಲನ್ ಆದ ಶ್ರೀನಗರ ಕಿಟ್ಟಿ?

  |

  ಸೂಪರ್ ಸ್ಟಾರ್ ನಟನೆಯ 'ಬುದ್ದಿವಂತ-2 ಸಿನಿಮಾಗೆ ಕನ್ನಡದ ಮತ್ತೊಬ್ಬ ನಟನ ಪ್ರವೇಶ ಆಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರು ಉಪೇಂದ್ರ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಟಿಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ತಯಾರಾಗಬೇಕಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಸುದ್ದಿ ಅಧಿಕೃತವಾಗಿ ಪ್ರಕಟವಾಗಿಲ್ಲ.

  ಆಗ ದರ್ಶನ್ ಗೆ ಗೆಳೆಯ, ಈಗ ಉಪ್ಪಿಗೆ ವಿಲನ್ ಆದ ಆದಿತ್ಯ.!ಆಗ ದರ್ಶನ್ ಗೆ ಗೆಳೆಯ, ಈಗ ಉಪ್ಪಿಗೆ ವಿಲನ್ ಆದ ಆದಿತ್ಯ.!

  ಜಯರಾಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಯರಾಂ ಅವರು ಈ ಹಿಂದೆ ಆರ್ ಚಂದ್ರು ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದರು. ಈಗ ಪೂರ್ಣ ಪ್ರಮಾಣದಲ್ಲಿ ಡೈರಕ್ಷನ್ ವಹಿಸಿಕೊಂಡಿದ್ದಾರೆ.

  ಅಂದ್ಹಾಗೆ, ಡೆಡ್ಲಿ ಖ್ಯಾತಿಯ ಆದಿತ್ಯ ಸಹ ಉಪೇಂದ್ರ ಅವರ ಹೊಸ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಅದು ಯಾವ ಸಿನಿಮಾ ಎಂದು ತಿಳಿದಿಲ್ಲ. ಈ ಹಿಂದೆ ಬುದ್ದಿವಂತ 2 ಚಿತ್ರಕ್ಕೆ ಆದಿತ್ಯ ಎಂಟ್ರಿಯಾಗಿದ್ದಾರೆ ಎನ್ನಲಾಗಿತ್ತು.

  ಬುದ್ದಿವಂತ 2 ಚಿತ್ರದಲ್ಲಿ ಮೇಘನಾ ರಾಜ್ ಮತ್ತು ಪಂಚತಂತ್ರ ಖ್ಯಾತಿಯ ಸೋನಾಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.

  ತೆಲುಗು ನಟ ವರುಣ್ ತೇಜ್ 'ಗನಿ' ಲುಕ್ ರಿಲೀಸ್; ಕುತೂಹಲ ಮೂಡಿಸಿದ ರಿಯಲ್ ಸ್ಟಾರ್ ಪಾತ್ರತೆಲುಗು ನಟ ವರುಣ್ ತೇಜ್ 'ಗನಿ' ಲುಕ್ ರಿಲೀಸ್; ಕುತೂಹಲ ಮೂಡಿಸಿದ ರಿಯಲ್ ಸ್ಟಾರ್ ಪಾತ್ರ

  ಇನ್ನು ಉಪೇಂದ್ರ ಅವರ ಸಿನಿಮಾಗಳ ಪಟ್ಟಿ ನೋಡಿದ್ರೆ ಹೋಮ್ ಮಿನಿಸ್ಟರ್, ತ್ರಿಶೂಲಂ, ಕಬ್ಜ ಹಾಗೂ ತೆಲುಗಿನಲ್ಲಿ ಘನಿ ಸೇರಿದಂತೆ ಇನ್ನು ಹಲವು ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada actor Srinagar kitty playing as antagonist opposite Upendra in Buddhivantha 2 Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X