ಕಲರ್ಸ್ ಗೆ ಬೈ ಹೇಳಿ ಜೀ-ಕನ್ನಡಕ್ಕೆ ಜೈ ಅಂತಾರಾ ಸೃಜನ್ ಲೋಕೇಶ್?
Recommended Video

ಸ್ಯಾಂಡಲ್ ವುಡ್ ನಟ ಸೃಜನ್ ಲೋಕೇಶ್ ಕಿರುತೆರೆ ಪ್ರೇಕ್ಷಕರಿಗೆ ಅಚ್ಚು ಮೆಚ್ಚು. 'ಮಜಾ ಟಾಕೀಸ್' ಮೂಲಕ ಕರ್ನಾಟಕ ರಾಜ್ಯಾದ್ಯಂತ ಅಭಿಮಾನಿಗಳನ್ನ ಹೊಂದಿರುವ ನಟ ಈಗ ಹೊಸ ಸುದ್ದಿಯನ್ನ ನೀಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಜೊತೆ ಹೆಜ್ಜೆ ಇಡುತ್ತಿರುವ ಸೃಜನ್ ಲೋಕೇಶ್ ಇನ್ಮುಂದೆ ಕಲರ್ಸ್ ನಲ್ಲಿ ಕಾಣಿಸುವುದಿಲ್ವಾ, ಕಲರ್ಸ್ ಜೊತೆಗಿನ ನಂಟನ್ನ ಮುರಿದುಕೊಳ್ತಾರಾ ಎಂಬ ಅನುಮಾನ ಕಾಡ್ತಿದೆ.
ಯಾಕಂದ್ರೆ, ಸೃಜನ್ ಲೋಕೇಶ್ ಇತ್ತೀಚಿಗಷ್ಟೆ ಓರ್ವ ವ್ಯಕ್ತಿಯನ್ನ ಭೇಟಿ ಮಾಡಿದ್ದಾರೆ. ಈ ಭೇಟಿ ನಂತರ ಸೃಜ ಬಗ್ಗೆ ಹಲವು ಕುತೂಹಲ ಹುಟ್ಟಿಕೊಂಡಿದೆ. ಅದಕ್ಕೆ ತಕ್ಕಂತೆ ಜನರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ, ಸೃಜನ್ ಭೇಟಿ ಮಾಡಿದ ಆ ವ್ಯಕ್ತಿ ಯಾರು? ಏನಿದು ಹೊಸ ಸುದ್ದಿ?

ಜೀ ಮುಖ್ಯಸ್ಥನ ಭೇಟಿ ಮಾಡಿದ ಸೃಜನ್
ಜೀ-ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಮತ್ತು ಸೃಜನ್ ಲೋಕೇಶ್ ಭೇಟಿಯಾಗಿದ್ದು, ಈ ಭೇಟಿ ಹಲವು ಚರ್ಚೆಗೆ ಕಾರಣವಾಗಿದೆ. ಕಲರ್ಸ್ ಕುಟುಂಬದಿಂದ ಜೀ ಕುಟುಂಬದ ಕಡೆ ಸೃಜ ಹೋಗ್ತಿದ್ದಾರಾ ಎಂಬ ಕುತೂಹಲ ಮೂಡಿದೆ.

ಸುಳಿವು ಕೊಟ್ಟ ಜೋಡಿ
ಬರಿ ಭೇಟಿಯಾಗಿದ್ರೆ ಪರವಾಗಿಲ್ಲ. ಆದ್ರೆ, ಈ ಭೇಟಿಯನ್ನ ಸಂಭ್ರಮಿಸಿರುವುದು ಇದಕ್ಕೆ ಪುಷ್ಠಿ ಕೊಡುವಂತಿದೆ. ರಾಘವೇಂದ್ರ ಹುಣಸೂರ್ ಮತ್ತು ಸೃಜನ್ ಇಬ್ಬರು ಕೇಕ್ ಕಟ್ ಮಾಡಿ ಸಂತಸಪಟ್ಟಿದ್ದಾರೆ. ಕೇಕ್ ಮೇಲೆ 'ಬೆಸ್ಟ್ ಇಸ್ ಯೆಟ್ ಟು ಕಮ್' ಎಂದು ಬರೆದಿರುವುದು ಗಮನ ಸೆಳೆಯುತ್ತಿದೆ.

ಹೊಸ ಶೋಗೆ ಪ್ಲಾನಿಂಗ್
ಇವರಿಬ್ಬರ ಭೇಟಿ ಸಹಜವಾಗಿ ಅನೇಕ ಸಲ ಆಗಿರುತ್ತೆ. ಆದ್ರೆ, ಈ ಸಲ ಈ ಭೇಟಿಯನ್ನ ವಿಶೇಷವಾಗಿಸಲು ಸ್ವತಃ ಇಬ್ಬರು ನಿರ್ಧರಿಸಿ, ಜನರಿಗೆ ತಿಳಿಸಿದ್ದಾರೆ. ಇದನ್ನ ಗಂಭೀರವಾಗಿ ಗಮನಿಸಿದ್ರೆ, ಜೀ ಕನ್ನಡದಲ್ಲಿ ಸೃಜನ್ ಹೊಸ ಶೋ ಮಾಡಬಹುದು. ಅದು ಅತಿ ಶೀಘ್ರದಲ್ಲಿ ಆರಂಭವಾಗಬಹುದು ಎಂಬ ನಿರೀಕ್ಷೆ ಇದೆ. ಈ ಫೋಟೋಗಳು ನೋಡಿದ ಬಳಿಕ ಜನರ ಅಭಿಪ್ರಾಯವೂ ಅದೇ ಆಗಿದೆ. ಅದನ್ನ ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

'ಚೋಟಾ ಚಾಂಪಿಯನ್' ಮಾಡಿದ್ದ ಸೃಜ
ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಚೋಟಾ ಚಾಂಪಿಯನ್ ಎಂಬ ಮಕ್ಕಳ ಕಾರ್ಯಕ್ರಮವನ್ನ ಸೃಜನ್ ಲೋಕೇಶ್ ನಿರೂಪಣೆ ಮಾಡ್ತಿದ್ರು. ಅದಾದ ಬಳಿಕ ಕಾಸಿಗೆ ಟಾಸ್ ಎಂಬ ಗೇಮ್ ಶೋ ಹೋಸ್ಟ್ ಮಾಡಿದ್ದರು. ಅದಾದ ಬಳಿಕ ಜೀ ಕನ್ನಡದಲ್ಲಿ ಯಾವ ಶೋ ಮಾಡಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು ಅಷ್ಟೇ.

ಮಜಾ ಟಾಕೀಸ್, ಸದಾ ನಿಮ್ಮೊಂದಿಗೆ
ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ಮತ್ತು ಮಜಾ ವೀಕೆಂಡ್ ಕಾರ್ಯಕ್ರಮಗಳನ್ನ ನಿರೂಪಣೆ ಮಾಡ್ತಿದ್ದಾರೆ. ಅದರ ಜೊತೆಗೆ ಉದಯ ಟಿವಿಯಲ್ಲಿ ಸದಾ ನಿಮ್ಮೊಂದಿಗೆ ಕಾರ್ಯಕ್ರಮವನ್ನ ಲೋಕೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ಮಾಡ್ತಿದ್ದಾರೆ.


Click it and Unblock the Notifications











