ರಾಜಮೌಳಿ- ಮಹೇಶ್ ಬಾಬು ಪ್ಯಾನ್ ವರ್ಲ್ಡ್ ಸಿನಿಮಾ ಟೈಟಲ್ ಲೀಕ್? ಫುಲ್ ವೈರಲ್

ನಿರ್ದೇಶಕ ರಾಜಮೌಳಿ 'RRR' ಬಳಿಕ ಮಹೇಶ್ ಬಾಬು ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. 12 ವರ್ಷಗಳಿಂದ ಈ ಸಿನಿಮಾ ಮುಂದೂಡುತ್ತಾ ಬರಲಾಗಿತ್ತು. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಪ್ರೀ ಪ್ರೊಡಕ್ಷನ್ಸ್ ವರ್ಕ್ ಭರದಿಂದ ಸಾಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗುವ ಸಾಧ್ಯತೆಯಿದೆ.

'RRR' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಹಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಜೇಮ್ಸ್ ಕ್ಯಾಮರೂನ್ ಕೂಡ ರಾಜಮೌಳಿಯನ್ನು ಕೊಂಡಾಡಿದ್ದರು. ಇದೀಗ ಜಕ್ಕಣ್ಣ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ. ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಗ್ಲೋಬ್ಟ್ರೋಟಿಂಗ್ ಆಕ್ಷನ್ ಅಡ್ವೆಂಚರ್ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ.

 SSMB29: Mahesh Babu and Rajamoulis next films title leaked

ತೆರೆಮೆರೆಯಲ್ಲಿ ಮಹೇಶ್ ಬಾಬು ಹಾಗೂ ಮೌಳಿ ಸಿನಿಮಾ ಕೆಲಸಗಳು ನಡೀತಿದೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಇದು ಮಹೇಶ್ ಬಾಬು ನಟನೆಯ 29 ಸಿನಿಮಾ. ಹಾಗಾಗಿ SSMB29 ಸಿನಿಮಾ ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಹಾಲಿವುಡ್‌ ರೇಂಜ್‌ನಲ್ಲಿ ಇಂಡಿಯಾನ ಜೋನ್ಸ್ ಮಾದರಿಯ ಸಿನಿಮಾ ಮಾಡಲು ಮೌಲಿ ಅಂಡ್ ಟೀಂ ಸಜ್ಜಾಗಿದೆ.

ಈಗಾಗಲೇ ವಿಜಯೇಂದ್ರ ಪ್ರಸಾದ್ SSMB29 ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಜಕ್ಕಣ್ಣ ಚಿತ್ರಕಥೆ ಫೈನಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು 3 ವರ್ಷಗಳ ಸಮಯ ಮೀಸಲಿಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಇಂಡೋನೇಷ್ಯಾ ನಟಿ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಇನ್ನು ತಂತ್ರಜ್ಞರ ತಂಡದಲ್ಲೂ ಜಕ್ಕಣ್ಣ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಇದೆಲ್ಲದರ ನಡುವೆ ಸಿನಿಮಾ ಟೈಟಲ್ ಏನು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ರಾಜಮೌಳಿ- ಮಹೇಶ್ ಬಾಬು ಜೋಡಿ ಸಿನಿಮಾ ಟೈಟಲ್ ಲೀಕ್ ಆಗಿದೆ ಎನ್ನುವ ಗುಸುಗುಸು ಶುರುವಾಗಿದೆ. 'ಮಹಾರಾಜ್' ಅಥವಾ 'ಚಕ್ರವರ್ತಿ' ಎನ್ನುವ ಟೈಟಲ್‌ಗಳ ಬಗ್ಗೆ ರಾಜಮೌಳಿ ಪರಿಶೀಲನೆ ನಡೆಸುತ್ತಿದ್ದಾರೆ, ಇವೆರಡರಲ್ಲಿ ಒಂದು ಟೈಟಲ್ ಫೈನಲ್ ಆಗುವುದು ಖಚಿತ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಭಿಮಾನಿಗಳು 'ಮಹಾರಾಜ್' ಟೈಟಲ್ ಕೇಳಿ ಖುಷಿಯಾಗಿದ್ದಾರೆ. ಇನ್ನು ಕೆಲವರು ರಾಜಮೌಳಿ ಇವೆರಡು ಟೈಟಲ್‌ ಪರಿಗಣಿಸುವುದು ಕಷ್ಟ. ಬೇರೆ ಏನಾದರೂ ಅವರ ತಲೆಯಲ್ಲಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

 SSMB29: Mahesh Babu and Rajamoulis next films title leaked

ಇದೆಲ್ಲದರ ನಡುವೆ #SSMB29 ಎನ್ನುವ ವರ್ಕಿಂಗ್ ಟೈಟಲ್‌ ಕೂಡ ಬದಲಿಸುತ್ತಾರೆ ಎನ್ನಲಾಗ್ತಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು 29ನೇ ಸಿನಿಮಾ ಎನ್ನುವುದನ್ನು ಶಾರ್ಟ್ ಆಗಿ #SSMB29 ಎನ್ನಲಾಗುತ್ತಿದೆ. 'RRR' ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜಕ್ಕಣ್ಣ ಕ್ರೇಜ್ ಶುರುವಾಗಿದೆ. ಹಾಗಾಗಿ ಇಬ್ಬರ ಹೆಸರನ್ನು ಸೇರಿಸಿ #SSRMB ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.

ಈ ಚಿತ್ರವನ್ನು ನಾರಾಯಣ ಕೆ. ಎಲ್‌ ನಿರ್ಮಾಣ ಮಾಡುತ್ತಿದ್ದಾರೆ. ಮೌಳಿ ಹಾಲಿವುಡ್ ಸ್ಟುಡಿಯೋ ಜೊತೆ ಕೈಜೋಡಿಸಿ ದೊಡ್ಡಮಟ್ಟದಲ್ಲಿ #SSRMB ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಕೊನೆಯದಾಗಿ 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ನಟಿಸಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ತೆಲುಗಿನಲ್ಲಿ ಇದು ನನ್ನ ಕೊನೆಯ ಸಿನಿಮಾ ಎನಿಸುತ್ತದೆ ಎಂದು ಮಹೇಶ್ ಬಾಬು ಸಂದರ್ಶನವೊಂದರಲ್ಲಿ ಹೇಳಿದ್ದರು. ರಾಜಮೌಳಿ ಸಿನಿಮಾ ಬಳಿಕ ಟಾಲಿವುಡ್ ಪ್ರಿನ್ಸ್ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ಆ ರೀತಿ ಹೇಳಿದ್ದರು ಎನ್ನಲಾಗ್ತಿದೆ.

More from Filmibeat

English summary
Rajamouli Considering This 2 Titles For #SSMB29?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X