ಒಂದಲ್ಲ ಎರಡಲ್ಲ ಮೂರು ಭಾಗಗಳಾಗಿ ಮೌಳಿ- ಮಹೇಶ್ ಸಿನಿಮಾ? ಪ್ರಿನ್ಸ್ 10 ವರ್ಷ ಕಾಲ್‌ಶೀಟ್.. ₹2100 ಕೋಟಿ ಬಜೆಟ್?

'RRR' ನಂತರ ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಯಾವ್ದು ಎನ್ನುವ ಬಗ್ಗೆ ಈಗಾಗಲೇ ಕ್ಲಾರಿಟಿ ಸಿಕ್ಕಿದೆ. ಮಹೇಶ್ ಬಾಬು ಹೀರೊ ಆಗಿ ಜಕ್ಕಣ್ಣ ಒಂದು ಆಕ್ಷನ್ ಅಡ್ವೆಂಚರಸ್ ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ. ಹಾಲಿವುಡ್‌ ರೇಂಜ್‌ನಲ್ಲಿ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ. ಸದ್ಯ ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ.

ಮಹೇಶ್ ಬಾಬು ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ನಟಿಸ್ತಿದ್ದಾರೆ. ಆ ನಂತರ ಮೌಳಿ ಚಿತ್ರಕ್ಕೆ ಕೈ ಜೋಡಿಸಲಿದ್ದಾರೆ. ಹನುಮಂತನ ಪಾತ್ರದಿಂದ ಪ್ರೇರಣೆಗೊಂಡು ರಾಜಮೌಳಿ ಚಿತ್ರದಲ್ಲಿ ಮಹೇಶ್ ಬಾಬು ಪಾತ್ರವನ್ನು ಡಿಸೈನ್ ಮಾಡ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದೀಗ ಸಿನಿಮಾ ಬಜೆಟ್, ಮಹೇಶ್ ಬಾಬು ಕಾಲ್‌ಶೀಟ್ ಬಗ್ಗೆಯೂ ಚರ್ಚೆ ನಡೀತಿದೆ. 'RRR' ಹಾಲಿವುಡ್‌ ಅಂಗಳದಲ್ಲೂ ಸದ್ದು ಮಾಡ್ತಿದ್ದಂತೆ ಜಕ್ಕಣ್ಣ ಮುಂದಿನ ಸಿನಿಮಾ ಬಗ್ಗೆ ಅಂತರಾಷ್ಟ್ರೀಯಮಟ್ಟದಲ್ಲಿ ನಿರೀಕ್ಷೆ ಮೂಡಿದೆ.

SSMB29; Strong Buzz That Rajamouli And Mahesh Babu Movie Going To Be 3 Parts

ಹಾಲಿವುಡ್ ಮಂದಿ ಕೂಡ ರಾಜಮೌಳಿ ಮುಂದಿನ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಜಕ್ಕಣ್ಣ ಕೂಡ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ಚಿತ್ರವನ್ನು 3 ಭಾಗಗಳಾಗಿ ತೆರೆಗೆ ತರುತ್ತಾರೆ ಎನ್ನುವ ಕ್ರೇಜಿ ನ್ಯೂಸ್ ವೈರಲ್ ಆಗ್ತಿದೆ. ಪ್ರತಿಯೊಂದು ಭಾಗಕ್ಕೆ 700 ಕೋಟಿ ರೂ. ಬಜೆಟ್ ಎನ್ನಲಾಗ್ತಿದೆ. ಒಂದು ವೇಳೆ ಫಸ್ಟ್ ಪಾರ್ಟ್ ಸಕ್ಸಸ್ ಕಂಡ್ರೆ ಮುಂದಿನ ಸಿನಿಮಾಗಳ ಬಜೆಟ್ ಕೂಡ ಹೆಚ್ಚುತ್ತೆ ಅನ್ನುವ ಮಾತುಗಳು ಕೇಳಿಬರ್ತಿದೆ. 'ಬಾಹುಬಲಿ' ಸಿನಿಮಾದಿಂದ ಸೀಕ್ವೆಲ್ ಟ್ರೆಂಡ್ ಹುಟ್ಟಾಕ್ಕಿದ ಮೌಳಿ 3 ಭಾಗಗಳಾಗಿ ಮುಂದಿನ ಸಿನಿಮಾ ತೆರೆಗೆ ತಂದ್ರು ಅಚ್ಚರಿ ಪಡ್ಬೇಕ್ಕಿಲ್ಲ.

ರಾಜಮೌಳಿ ಸಿನಿಮಾ ಅಂದ್ಮೇಲೆ ಯಾವಾಗ ಶುರುವಾಗುತ್ತೆ? ಯಾವಾಗ ಶೂಟಿಂಗ್ ಕಂಪ್ಲೀಟ್ ಆಗುತ್ತೆ ಅನ್ನೋದನ್ನು ಹೇಳೋಕ್ಕಾಗಲ್ಲ. ನಟ ಪ್ರಭಾಸ್ 'ಬಾಹುಬಲಿ' ಸರಣಿಗಾಗಿ 5 ವರ್ಷ ಮುಡಿಪಾಗಿಟ್ಟಿದ್ದರು. ಇನ್ನು ಕೊರೋನಾ ಹಾವಳಿಯಿಂದ 'RRR' ಶೂಟಿಂಗ್ ಮತ್ತಷ್ಟು ತಡವಾಗಿ ಜ್ಯೂ. ಎನ್‌ಟಿಆರ್‌ ಹಾಗೂ ರಾಮ್‌ಚರಣ್ ಮೂರ್ನಾಲ್ಕು ವರ್ಷ ಬೇರೆ ಸಿನಿಮಾಗಳಲ್ಲಿ ನಟಿಸದಂತಾಯಿತು. 2018ರಲ್ಲಿ ಶುರುವಾದ ಸಿನಿಮಾ ರಿಲೀಸ್ ಆಗಿದ್ದು ಮಾತ್ರ 2022ರ ಮಾರ್ಚ್‌ನಲ್ಲಿ. ಇದೀಗ ರಾಜಮೌಳಿ ಮುಂದಿನ ಚಿತ್ರಕ್ಕಾಗಿ ಎಷ್ಟು ವರ್ಷ ತೆಗದುಕೊಳ್ಳುತ್ತಾರೋ ಎನ್ನುವ ಲೆಕ್ಕಾಚಾರ ಶುರುವಾಗಿದೆ.

SSMB29; Strong Buzz That Rajamouli And Mahesh Babu Movie Going To Be 3 Parts

ಮಹೇಶ್ ಬಾಬು ಹಾಗೂ ರಾಜಮೌಳಿ ಕ್ರೇಜಿ ಕಾಂಬಿನೇಷನ್‌ ಸಿನಿಮಾ ಯಾವಾಗ ಶುರುವಾಗುತ್ತದೆ ಎನ್ನುವ ಖಚಿತ ಮಾಹಿತಿ ಇಲ್ಲ. ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆಯಿದೆ. ಇನ್ನು 3 ಭಾಗಗಳಾಗಿ ಬರುವ ಚಿತ್ರಕ್ಕೆ ಟಾಲಿವುಡ್ ಸೂಪರ್ ಸ್ಟಾರ್ ಬರೋಬ್ಬರಿ 10 ವರ್ಷ ಕಾಲ್‌ಶೀಟ್ ಕೊಡ್ತಾರೆ ಎನ್ನಲಾಗ್ತಿದೆ. ಇಷ್ಟು ವರ್ಷಗಳ ಕಾಲ ಬೇರೆ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸದಂತೆ ಮೌಳಿ ಲಾಕ್ ಮಾಡ್ತಾರೆ ಎನ್ನಲಾಗ್ತಿದೆ.

ಜಂಗಲ್ ಅಡ್ವೆಂಚರಸ್ ಡ್ರಾಮಾ ಆಗಿ ಈ ಚಿತ್ರವನ್ನು ರಾಜಮೌಳಿ ತೆರೆಗೆ ತರುತ್ತಿದ್ದಾರೆ. ಚಿತ್ರದಲ್ಲಿ ಹನುಮಂತನಂತೆ ಬಲಶಾಲಿಯಾದ, ಸಾಹಸಗಳನ್ನು ಮಾಡುವ, ಎಲ್ಲದಕ್ಕೂ ಸಿದ್ಧನಿರುವ, ಸ್ವಾಮಿ ಭಕ್ತಿ, ವಿಶ್ವಾಸದಿಂದ ಇರುವ ನಾಯಕನ ಪಾತ್ರದಲ್ಲಿ ಮಹೇಶ್ ಬಾಬು ನಟಿಸುತ್ತಾರೆ ಎನ್ನಲಾಗ್ತಿದೆ. ಹಾಗಾಗಿ ಚಿತ್ರದಲ್ಲಿ ಮಹೇಶ್ ಬಾಬು ಬಹಳ ಇಷ್ಟಪಡುವಂತಹ ಪಾತ್ರವೊಂದು ಈ ಚಿತ್ರದಲ್ಲಿ ಇರುತ್ತೆ. ಆ ಪಾತ್ರವನ್ನು ಯಾರು ಮಾಡಬಹುದು ಎನ್ನುವ ಲೆಕ್ಕಾಚಾರವೂ ನಡೀತಿದೆ.

SSMB29; Strong Buzz That Rajamouli And Mahesh Babu Movie Going To Be 3 Parts

'RRR' ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮುರಂ ಭೀಮ್ ರಿಯಲ್‌ ಲೈಫ್‌ನಿಂದ ಒಂದು ಕಾಲ್ಪನಿಕ ಕಥೆ ಮಾಡಿ ಮೌಳಿ ಸಕ್ಸಸ್ ಕಂಡಿದ್ದಾರೆ. ಈಗ ಅದೇ ರೀತಿ ಹನುಮಂತನಿಂದ ಪ್ರೇರಣೆಗೊಂಡು ಮುಂದಿನ ಚಿತ್ರಕ್ಕೆ ಕೈ ಹಾಕಿದ್ದಾರೆ ಅನ್ನುವ ಗುಸುಗುಸು ಶುರುವಾಗಿದೆ. ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದಲ್ಲಿ ಟಾಲಿವುಡ್, ಬಾಲಿವುಡ್ ಹಾಗೂ ಹಾಲಿವುಡ್ ಕಲಾವಿದರು ತಂತ್ರಜ್ಞರು ಕೆಲಸ ಮಾಡಲಿದ್ದಾರೆ.

More from Filmibeat

English summary
SSMB29; Strong Buzz That Rajamouli And Mahesh Babu Movie Going To Be 3 Parts. The total budget of the film was estimated to be around Rs 2100 crores. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X