ರಾಮ್‌ಚರಣ್- ಶಂಕರ್ ಸಿನಿಮಾ ಟೈಟಲ್ ಇದೇನಾ? ಈ ಟೈಟಲ್‌ಗೂ KGF- 2 ಚಿತ್ರಕ್ಕೂ ಇದೆ ಲಿಂಕ್!
'RRR' ಚಿತ್ರದಲ್ಲಿ ರಾಮರಾಜು ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ ನಟ ರಾಮ್‌ಚರಣ್. ಸದ್ಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಚರಣ್ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. ಇನ್ನು 'RRR' ನಂತರ ಶಂಕರ್ ನಿರ್ದೇಶನದ ಚಿತ್ರದಲ್ಲಿ ಚೆರ್ರಿ ನಟಿಸ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿತ್ತು. ಮಾರ್ಚ್ 27ಕ್ಕೆ ಮೆಗಾಪವರ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೈಟಲ್ ಘೋಷಣೆ ಆಗಲಿದೆ.
ಸೆನ್ಸೇಷನಲ್ ಸಿನಿಮಾಗಳ ಸರದಾರ ಶಂಕ್ ಹಾಗೂ ರಾಮ್‌ಚರನ್ ಕಾಂಬಿನೇಷನ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇದು ಚರಣ್ 15ನೇ ಸಿನಿಮಾ. ಹಾಗಾಗಿ RC15 ಅನ್ನೋ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಶೂಟಿಂಗ್ ನಡೀತಿದೆ. ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದಿದ್ದು ಮುಂದಿನ ವರ್ಷ ಸಂಕ್ರಾಂತಿಗೆ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಕಿಯಾರಾ ಅದ್ವಾನಿ ಚಿತ್ರದಲ್ಲಿ ಚರಣ್ ಜೋಡಿಯಾಗಿ ಮಿಂಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ದಿಲ್ ರಾಜು ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

RC15 ಸಿನಿಮಾ ಶುರುವಾದ ದಿನದಿಂದಲೂ ಟೈಟಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. 'ಆಫೀಸರ್', 'ಸರ್ಕಾರೋಡು', 'ಸಿಟಿಜನ್', 'ವಿಶ್ವಂಬರ' ಹೀಗೆ ಸಾಕಷ್ಟು ಟೈಟಲ್‌ಗಳನ್ನು ಅಭಿಮಾನಿಗಳು ಗೆಸ್ ಮಾಡಿದ್ದರು. ಆದರೆ ಇದೆಲ್ಲವನ್ನು ಬಿಟ್ಟು ಚಿತ್ರತಂಡ ಹೊಸ ಟೈಟಲ್ ಹುಡುಕಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹೊಸದೊಂದು ಟೈಟಲ್ ಈ ಲಿಸ್ಟ್‌ಗೆ ಸೇರಿಕೊಂಡಿದೆ. ಅದೇ ಟೈ ಟಲ್ ಫಿಕ್ಸ್ ಆಗುತ್ತೆ ಎನ್ನಲಾಗ್ತಿದ್ದ, ಈ ಟೈಟಲ್‌ಗೂ 'KGF- 2' ಲಿಂಕ್ ಇದೆ ಎನ್ನುವ ಚರ್ಚೆ ನಡೀತಿದೆ.
ಚರಣ್- ಶಂಕರ್ ಚಿತ್ರಕ್ಕೆ 'ಸಿಇಓ' ಅನ್ನು ಟೈಟಲ್‌ನ ಚಿತ್ರತಂಡ ಫೈನಲ್ ಮಾಡಿದೆ ಎನ್ನುವ ಚರ್ಚೆ ನಡೀತಿದೆ. ಇದನ್ನು ಕೇಳಿ ಮೆಗಾ ಫ್ಯಾನ್ಸ್ ಖುಷಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಟ್ರೆಂಡ್ ಮಾಡುತ್ತಿದ್ದಾರೆ. ಸಿಇಓ ಅಂದ್ರೆ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಎನ್ನುವ ಅರ್ಥ ಇದೆ. ಆದರೆ ಶರಂಕರ್ ಚಿತ್ರದಲ್ಲಿ ಇದಕ್ಕೆ ಬೇರೆ ಅರ್ಥ ಕೊಟ್ಟಿದ್ದಾರಂತೆ. ಚಿತ್ರದಲ್ಲಿ ಚರಣ್ ಚುನಾವಣಾಧಿಕಾರಿಯಾಗಿ ನಟಿಸಿದ್ದು ಸಿಇಓಗೆ ಚೀಫ್ ಎಲೆಕ್ಷನ್ ಆಫೀಸರ್ ಎನ್ನುವ ಅರ್ಥ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ.
ಹಾಗ್ ನೋಡಿದ್ರೆ ಸಿಇಓ ಎನ್ನುವ ಪದ ಹೊಸದೇನು ಅಲ್ಲ. ಆದರೆ 'KGF ಚಾಪ್ಟರ್- 2'ನಲ್ಲಿ ಪ್ರಶಾಂತ್ ನೀಲ್ ಹೊಸ ಅರ್ಥ ಬರುವಂತೆ ಮಾಡಿದ್ದರು. ಜಿಮ್ಮಿ ಕಾರ್ಟರ್ ಎದುರು ಕುಳಿತ ರಾಕಿಭಾಯ್ ನಾನು ಇಂಡಿಯಾಗೆ ಸಿಇಓ ಎಂದು ಹೇಳುವ ಡೈಲಾಗ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಆಗಿನಿಂದಲ ಸಿಇಓ ಎನ್ನುವ ಪದ ಸಖತ್ ಟ್ರೆಂಡ್ ಆಯಿತು. KGF- 2 ಕಲೆಕ್ಷನ್ ನೋಡಿ ಅಭಿಮಾನಿಗಳು ಯಶ್‌ನ ಬಾಕ್ಸಾಫೀಸ್ ಸಿಇಓ ಎಂದು ಕರೆದರು. ಈಗ ಇದೇ ಟೈಟಲ್ ಅನ್ನು ಶಂಕರ್ ತಮ್ಮ ಚಿತ್ರಕ್ಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.

ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಎಲ್ಲಾ ಭಾಷೆಗಳಿಗೂ ಹೊಂದಿಕೆ ಆಗುವಂತೆ ಒಂದೇ ಟೈಟಲ್ ಇಡ್ತಾರೆ. 'ಸಿಇಓ' ಟೈಟಲ್ ಕೂಡ ಅದೇ ರೀತಿ ಚೆನ್ನಾಗಿರುತ್ತದೆ ಅನ್ನೋದು ಅಭಿಮಾನಿಗಳ ಲೆಕ್ಕಾಚಾರ. ಆದರೆ ಶಂಕರ್ ತಲೆಯಲ್ಲಿ ಏನಿದೆಯೋ ಯಾರಿಗೆ ಗೊತ್ತು. ಇನ್ನು ಚಿತ್ರದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರ್ತಿದೆ. ಚುನಾವಣಾ ಅಧಿಕಾರಿ ಆಗಿ ಮಾತ್ರವಲ್ಲದೇ ಸಿಎಂ ಆಗಿಯೂ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ.


Click it and Unblock the Notifications











