»   » ಸುದೀಪ್-ಅಂಬರೀಶ್ ಜೋಡಿಗೆ 26ರ ಯುವಕ ಆಕ್ಷನ್ ಕಟ್.!

ಸುದೀಪ್-ಅಂಬರೀಶ್ ಜೋಡಿಗೆ 26ರ ಯುವಕ ಆಕ್ಷನ್ ಕಟ್.!

Posted By:
Subscribe to Filmibeat Kannada
ಸುದೀಪ್ ಅಂಬರೀಷ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಈ ಯುವಕ | Filmibeat Kannada

'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಜೋಡಿಯಲ್ಲಿ ಒಂದು ಸಿನಿಮಾ ಬರುತ್ತಿದೆ. ಆ ಸಿನಿಮಾಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಎಂಬ ಟೈಟಲ್ ಕೂಡ ಇಡಲಾಗಿದೆ ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದರು.

ಹೊಸ ಪ್ರತಿಭೆಗಳ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಸುದೀಪ್ ಈ ಚಿತ್ರಕ್ಕಾಗಿ ನಿರ್ದೇಶಕರನ್ನ ಹುಡುಕುತ್ತಿದ್ದರು. ಬಹುಶಃ ಸ್ಟಾರ್ ಡೈರೆಕ್ಟರ್ ಗೆ ಈ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶಾಕ್ ಕೊಟ್ಟಿರುವ ಸುದೀಪ್, 26 ವರ್ಷದ ಯುವ ನಿರ್ದೇಶಕನಿಗೆ ಚಾನ್ಸ್ ನೀಡಿದ್ದಾರಂತೆ.

ಹೌದು, ಸುದೀಪ್ ಮತ್ತು ಅಂಬಿ ಜುಗಲ್ ಬಂದಿಯ ಚಿತ್ರಕ್ಕೆ ಯುವ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಲಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಯಂಗ್ ಡೈರೆಕ್ಟರ್ ಕಾಲಿಡುತ್ತಿದ್ದಾರೆ. ಅದು ಯಾರು ಎಂದು ತಿಳಿಯಲು ಮುಂದೆ ಓದಿ.....

ಗುರುದತ್ ಪಾಲಾದ ದೊಡ್ಡ ಸಿನಿಮಾ?

ಸುದೀಪ್ ಮತ್ತು ಅಂಬಿ ಸಿನಿಮಾ ಅಂದ್ಮೇಲೆ ಸ್ಟಾರ್ ನಿರ್ದೇಶಕರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಈ ಎಲ್ಲ ನಿರೀಕ್ಷೆಗೂ ಮೀರಿ ಯುವ ನಿರ್ದೇಶಕ ಗುರು ಅವರಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಲೆಜೆಂಡ್ ನಟರಿಗೆ ನಿರ್ದೇಶನ ಮಾಡುವ ಮೂಲ ತಮ್ಮ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ ಗುರು.

'ಅಂಬಿ ನಿಂಗ್ ವಯಸ್ಸಾಯ್ತೋ' ಈ ಟೈಟಲ್ ಕೊಟ್ಟಿದ್ದು ಯಾರು

ಯಾರು ಈ ಗುರುದತ್?

ಅಂದ್ಹಾಗೆ, ಗುರುದತ್ ಗಣಿಗ ಅಲಿಯಾಸ್ ಗುರು ಸುಮಾರು 9 ವರ್ಷಗಳಿಂದ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 6 ವರ್ಷದಿಂದ ಸುದೀಪ್ ಅವರ ಬಳಿ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ತಮ್ಮ ಸಹ ನಿರ್ದೇಶನ ಮೇಲೆ ನಂಬಿಕೆ ಇಟ್ಟು ಸುದೀಪ್ ಈ ಸಿನಿಮಾ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಸುದೀಪ್ ಪಾತ್ರವೇನು?

'ಅಂಬಿ ನಿಂಗ್ ವಯಸಾಯ್ತೋ' ಚಿತ್ರದಲ್ಲಿ ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುದೀಪ್ ಅವರ ಕಾಣಿಸಿಕೊಳ್ಳುತ್ತಿದ್ದು, ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಬರುವ ಅಂಬರೀಶ್ ಪಾತ್ರವನ್ನ ಸುದೀಪ್ ನಿರ್ವಹಿಸಲಿದ್ದಾರೆ.

ನಾಯಕಿ ಯಾರು?

ಅಂಬರೀಷ್ ಅವರಿಗೆ ನಾಯಕಿಯಾಗಿ ಸುಹಾಸಿನಿ ಅಭಿನಯಿಸುತ್ತಿದ್ದಾರೆ. ಆದ್ರೆ, ಸುದೀಪ್ ಅವರಿಗೆ ನಾಯಕಿ ಯಾರಾಗ್ತಾರೆ ಎಂಬುದು ಕುತೂಹಲವಾಗಿದೆ. ಯಾಕಂದ್ರೆ, ಚಿತ್ರತಂಡ ಕಿಚ್ಚನ ನಾಯಕಿಗಾಗಿ ಹುಡುಕುತ್ತಿದೆ.

ಯಾವಾಗ ಆರಂಭ?

ಸದ್ಯ, ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿರುವ ಚಿತ್ರತಂಡ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ನಲ್ಲಿ ಶೂಟಿಂಗ್ ಶುರು ಮಾಡುವ ತಯಾರಿಯಲ್ಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದು, ಉಳಿದ ತಾಂತ್ರಿಕ ತಂಡವನ್ನ ಸದ್ಯದಲ್ಲೇ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ತಮಿಳು ಚಿತ್ರದ ರೀಮೇಕ್.!

'ಅಂಬಿ ನಿಂಗ್ ವಯಸಾಯ್ತೋ' ಚಿತ್ರ ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಎನ್ನಲಾಗಿದೆ. ಕನ್ನಡದ ನೆಟಿವಿಟಿಗೆ ತಕ್ಕಂತೆ ಬದಲಾವಣೆಯೊಂದಿಗೆ ಸಿನಿಮಾ ಮಾಡಲಿದ್ದಾರೆ.

English summary
Ambareesh and sudeep starring titled 'Ambi Ning Vaiyasayitho' movie will be directed by Gurudtah Ganiga.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X