For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಇದಕ್ಕೆ ಒಪ್ಪಿದ್ದಾರಾ? ಪ್ರೇಮ್ ಪ್ಲಾನ್ ಠುಸ್ ಪಟಾಕಿ ಆಗ್ಬಿಟ್ರೆ?

  By Harshitha
  |

  ಪ್ರೇಮ್ ಏನೇ ಮಾಡಿದ್ರೂ, ಅದರಲ್ಲಿ ವಿಶೇಷತೆ ಇರೋದ್ರಲ್ಲಿ ಅನುಮಾನ ಬೇಡ. ಅಷ್ಟಿಲ್ದೇ, ಮದ್ದೂರಿನಿಂದ ಬಂದ ಈ ಹಳ್ಳಿ ಹೈದ 'ಹ್ಯಾಟ್ರಿಕ್ ಡೈರೆಕ್ಟರ್' ಆಗ್ತಿರ್ಲಿಲ್ಲ.

  'ಕರಿಯ' ಚಿತ್ರದಲ್ಲಿ ರಿಯಲ್ ರೌಡಿಗಳ ಕಥೆ ಹೆಣೆದಿದ್ದ ಪ್ರೇಮ್, 'ನೀಲಿ ಚಿತ್ರಗಳ ರಾಣಿ' ಸನ್ನಿ ಲಿಯೋನ್, ಮಲ್ಲಿಕಾ ಶೆರಾವತ್, ಯಾನ ಗುಪ್ತಾ ರಂತಹ ಬೆಡಗಿಯರಿಗೆ ಸ್ಯಾಂಡಲ್ ವುಡ್ ನಲ್ಲಿ ರತ್ನಗಂಬಳಿ ಹಾಸಿದವರು.

  ಇಂತಿಪ್ಪ ಪ್ರೇಮ್ ಈಗ ಶಿವರಾಜ್ ಕುಮಾರ್ ಮತ್ತು ಸುದೀಪ್ ರನ್ನ 'ದಿ ವಿಲನ್' ಚಿತ್ರದ ಮೂಲಕ ಒಂದು ಮಾಡ್ತಿದ್ದಾರೆ. 'ದಿ ವಿಲನ್' ಬಗ್ಗೆ ಈಗಾಗಲೇ ಅನೇಕ ಅಂತೆ-ಕಂತೆ ಪುರಾಣಗಳು ಗಾಂಧಿನಗರದ ಅಂಗಳದಲ್ಲಿ ಗಿರಕಿ ಹೊಡೆದಿವೆ.

  ಈಗ ಹೊರ ಬಿದ್ದಿರುವ ಸುದ್ದಿ ಕೇಳಿದ್ರೆ, ಸುದೀಪ್ ಅಭಿಮಾನಿಗಳು ತಲೆ ಕೆರೆದುಕೊಳ್ಳುವುದು ಗ್ಯಾರೆಂಟಿ.! ಮುಂದೆ ಓದಿ....

  ಏನು ಅಂತಹ ಸುದ್ದಿ.?

  ಏನು ಅಂತಹ ಸುದ್ದಿ.?

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ 'ವಿಭಿನ್ನ' ಲುಕ್ ನೀಡಿದವರ ಪೈಕಿ ಪ್ರೇಮ್ ಕೂಡ ಒಬ್ಬರು. ಶಿವಣ್ಣ ಮತ್ತು ಅಪ್ಪು ಲುಕ್ಸ್ ಬಗ್ಗೆ ಎಕ್ಸ್ ಪೆರಿಮೆಂಟ್ ಮಾಡಿದ್ದ ಪ್ರೇಮ್ ಇದೀಗ ಸುದೀಪ್ ಮೇಲೂ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಆ ಪ್ರಯೋಗ ಏನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಸುದೀಪ್ ಗೆ ವಿಗ್ ಹಾಕ್ತಾರಂತೆ ಪ್ರೇಮ್!

  ಸುದೀಪ್ ಗೆ ವಿಗ್ ಹಾಕ್ತಾರಂತೆ ಪ್ರೇಮ್!

  ಸದ್ಯ ಕನ್ನಡ ಸಿನಿ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ ಇದೇ. ಕಿಚ್ಚ ಸುದೀಪ್ ಗಾಗಿ ಪ್ರೇಮ್ ಸ್ಪೆಷಲ್ ವಿಗ್ ರೆಡಿ ಮಾಡಿಸುತ್ತಿದ್ದಾರಂತೆ.! [ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?]

  ವಿಗ್ ಯಾಕೆ?

  ವಿಗ್ ಯಾಕೆ?

  'ದಿ ವಿಲನ್' ಚಿತ್ರದಲ್ಲಿ ಸುದೀಪ್ ಗೆ ಹೊಸ ಇಮೇಜ್ ಕೊಡುವ ಪ್ಲಾನ್ ಪ್ರೇಮ್ ರದ್ದು. ಹೀಗಾಗಿ ಅವರೇ ಖುದ್ದಾಗಿ ಮುಂಬೈಗೆ ತೆರಳಿ ವಿಗ್ ಡಿಸೈನ್ ಮಾಡಿಸಿದ್ದಾರಂತೆ. ['ಕಲಿ' ಹಾಗೆ ಇದು ಕಾಗೆ ಹಾರಿಸೋ ಪ್ರೋಗ್ರಾಂ ಆಗ್ಲಿಲ್ಲಾಂದ್ರೆ ಸಾಕು.!]

  'ವಿಗ್' ಬೆಲೆ ಎಷ್ಟು ಗೊತ್ತಾ?

  'ವಿಗ್' ಬೆಲೆ ಎಷ್ಟು ಗೊತ್ತಾ?

  ಮೂಲಗಳ ಪ್ರಕಾರ, ಸುದೀಪ್ ಗಾಗಿ ತಯಾರಾಗುತ್ತಿರುವ ವಿಗ್ ನ ಬೆಲೆ ಬರೋಬ್ಬರಿ 4 ಲಕ್ಷ ರೂಪಾಯಿ.

  'ಹೆಬ್ಬುಲಿ' ಹೇರ್ ಸ್ಟೈಲ್ ಕಾರಣ ಆಯ್ತಾ?

  'ಹೆಬ್ಬುಲಿ' ಹೇರ್ ಸ್ಟೈಲ್ ಕಾರಣ ಆಯ್ತಾ?

  'ಹೆಬ್ಬುಲಿ' ಚಿತ್ರಕ್ಕಾಗಿ ಸುದೀಪ್ ವಿಭಿನ್ನ ಹೇರ್ ಸ್ಟೈಲ್ ಮಾಡಿಕೊಂಡಿರುವುದು ನಿಮಗೆ ಗೊತ್ತೇ ಇದೆ. 'ಹೆಬ್ಬುಲಿ' ಶೂಟಿಂಗ್ ಮುಗಿದು, ಸುದೀಪ್ ಕೂದಲು ಬೆಳೆಯುವವರೆಗೂ ಕಾಯುವ ಪುರುಸೊತ್ತು ಪ್ರೇಮ್ ಗೆ ಇಲ್ಲ. ಹೀಗಾಗಿ 'ವಿಗ್' ಪ್ಲಾನ್ ಮಾಡಿರಬಹುದು ಎಂಬುದು ಕೆಲವರ ಅನಿಸಿಕೆ.

  ಇದು ಮೊದಲ ಬಾರಿ ಅಲ್ಲ.!

  ಇದು ಮೊದಲ ಬಾರಿ ಅಲ್ಲ.!

  ನಟರಿಗೆ ಪ್ರೇಮ್ ವಿಗ್ ತೊಡಿಸುತ್ತಿರುವುದು ಇದು ಮೊದಲ ಬಾರಿ ಅಲ್ಲ. ಪ್ರೇಮ್ ನಿರ್ದೇಶನದ 'ಜೋಗಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ಲುಕ್ ಹೇಗಿತ್ತು ಅಂತ ಒಮ್ಮೆ ನೆನಪಿಸಿಕೊಳ್ಳಿ....

  'ಜೋಗಯ್ಯ' ಮರೆತಿಲ್ಲ ತಾನೆ.?

  'ಜೋಗಯ್ಯ' ಮರೆತಿಲ್ಲ ತಾನೆ.?

  'ಜೋಗಯ್ಯ' ಚಿತ್ರದಲ್ಲಿ ಶಿವಣ್ಣ ತರಹೇವಾರಿ ಅವತಾರ ತಾಳಲು ಇದೇ ಪ್ರೇಮ್ ಕಾರಣ ಎಂಬುದನ್ನ ನೀವು ಮರೆತಿರಲು ಸಾಧ್ಯವೇ ಇಲ್ಲ.

  ಪುನೀತ್ ರಾಜ್ ಕುಮಾರ್ ರನ್ನೂ ಬಿಟ್ಟಿಲ್ಲ.!

  ಪುನೀತ್ ರಾಜ್ ಕುಮಾರ್ ರನ್ನೂ ಬಿಟ್ಟಿಲ್ಲ.!

  'ರಾಜ್...ದಿ ಶೋ ಮ್ಯಾನ್' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೂ ಪ್ರೇಮ್ ರಿಂದ ವಿಗ್ ಪ್ರಾಪ್ತಿ ಆಗಿತ್ತು.

  ಈಗ ಸುದೀಪ್

  ಈಗ ಸುದೀಪ್

  ಇದೀಗ ಸುದೀಪ್ ಲುಕ್ ಬಗ್ಗೆ ಪ್ರಯೋಗ ಮಾಡಲು ಪ್ರೇಮ್ ಮುಂದಾಗಿದ್ದಾರಂತೆ.

  ಸುದೀಪ್ ವಿಗ್ ತೊಟ್ಟ ಇತಿಹಾಸ ಇಲ್ಲ

  ಸುದೀಪ್ ವಿಗ್ ತೊಟ್ಟ ಇತಿಹಾಸ ಇಲ್ಲ

  ಸಿನಿಮಾಗಳಲ್ಲಿ ಭಿನ್ನ-ವಿಭಿನ್ನ ಹೇರ್ ಸ್ಟೈಲ್ ಮಾಡಿಕೊಳ್ಳುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ ಹೊರತು ಕನ್ನಡ ಚಿತ್ರರಂಗದಲ್ಲಿ ಸುದೀಪ್ ವಿಗ್ ತೊಟ್ಟ ಇತಿಹಾಸ ಇಲ್ಲ. ಕಿಚ್ಚನ ಹುಡುಗರಿಗಂತೂ ಸುದೀಪ್ ಸಿಲ್ಕಿ ಹೇರ್ ಸಖತ್ ಇಷ್ಟ. ಹೀಗಾಗಿ, ಅದಕ್ಕೆ ಕತ್ರಿ ಬೀಳುತ್ತೆ ಅಂದ್ರೂ, ಫ್ಯಾನ್ಸ್ ಗೆ ಬೇಜಾರು.

  'ಪುಲಿ' ಚಿತ್ರದಲ್ಲಿ ವಿಗ್ ಹಾಕಿದ್ರು!

  'ಪುಲಿ' ಚಿತ್ರದಲ್ಲಿ ವಿಗ್ ಹಾಕಿದ್ರು!

  ತಮಿಳಿನ 'ಪುಲಿ' ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದ ಸುದೀಪ್ ಉದ್ದ ಕೂದಲಿನ ವಿಗ್ ತೊಟ್ಟಿದ್ದರು.

  'ದಿ ವಿಲನ್' ಚಿತ್ರಕ್ಕೆ ಸುದೀಪ್ ಒಪ್ಪಿಕೊಳ್ಳುತ್ತಾರಾ.?

  'ದಿ ವಿಲನ್' ಚಿತ್ರಕ್ಕೆ ಸುದೀಪ್ ಒಪ್ಪಿಕೊಳ್ಳುತ್ತಾರಾ.?

  'ಹೆಬ್ಬುಲಿ' ಚಿತ್ರದಲ್ಲಿನ ಸುದೀಪ್ ಹೇರ್ ಸ್ಟೈಲ್ ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ. ಇನ್ನೂ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ವಿಗ್ ತೊಟ್ಟರೆ ಅಭಿಮಾನಿಗಳು ಇಷ್ಟ ಪಡ್ತಾರಾ? ಎಲ್ಲಕ್ಕಿಂತ ಹೆಚ್ಚಾಗಿ ಸುದೀಪ್ ಒಪ್ಪಿಕೊಳ್ತಾರಾ? ಪ್ರೇಮ್ ಪ್ಲಾನ್ ಠುಸ್ ಪಟಾಕಿ ಆದ್ರೆ ಏನ್ ಕಥೆ? ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

  ಶಿವಣ್ಣಗೂ ವಿಗ್ ಇದೆ.!

  ಶಿವಣ್ಣಗೂ ವಿಗ್ ಇದೆ.!

  'ದಿ ವಿಲನ್' ಚಿತ್ರದಲ್ಲಿ ಸುದೀಪ್ ಗೆ ಮಾತ್ರ ಅಲ್ಲ. ಶಿವಣ್ಣಗೂ ವಿಗ್ ತೊಡಿಸಲಿದ್ದಾರೆ ಪ್ರೇಮ್. ಶಿವಣ್ಣ ರವರ ವಿಗ್ ಗೂ ನಾಲ್ಕು ಲಕ್ಷ ರೂಪಾಯಿ ಖರ್ಚಾಗಲಿದ್ಯಂತೆ.

  ಸೆಪ್ಟೆಂಬರ್ ನಿಂದ ಶೂಟಿಂಗ್ ಶುರು

  ಸೆಪ್ಟೆಂಬರ್ ನಿಂದ ಶೂಟಿಂಗ್ ಶುರು

  ಈಗಾಗಲೇ 'ದಿ ವಿಲನ್' ಚಿತ್ರದ ಮುಹೂರ್ತ ನೆರವೇರಿದೆ. ಸೆಪ್ಟೆಂಬರ್ ನಿಂದ ಚಿತ್ರದ ಶೂಟಿಂಗ್ ಶುರು ಆಗಲಿದೆ. ಮೊದಲು ಸುದೀಪ್ ಭಾಗದ ಚಿತ್ರೀಕರಣ ನಡೆಯಲಿದ್ಯಂತೆ.

  ನಾಯಕಿ ಯಾರು?

  ನಾಯಕಿ ಯಾರು?

  ಸಿ.ಆರ್.ಮನೋಹರ್ ಬಂಡವಾಳ ಹಾಕುತ್ತಿರುವ 'ದಿ ವಿಲನ್' ಚಿತ್ರಕ್ಕೆ ತಮನ್ನಾ ನಾಯಕಿ ಅಗಲಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದ್ರೆ, ನಾಯಕಿ ಪಾತ್ರಧಾರಿ ಇನ್ನೂ ಪಕ್ಕಾ ಆಗಿಲ್ಲ.

  English summary
  Kannada Director Prem is all set to transform Kannada Actor Shiva Rajkumar and Kiccha Sudeep's look through unique wigs in his directorial next 'The Villain', which is produced by C.R.Manohar. But will Kiccha Sudeep agree to sport wig? Is a big question as of now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X