'ಅವತಾರ್' ಶೈಲಿಯಲ್ಲಿ ಸಿನಿಮಾ: ಕಿಚ್ಚ ಸುದೀಪ್‌ಗೂ ಬಂತು ಆಫರ್!

ಬರ್ತಡೇ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್‌ಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದ ಅವಕಾಶ ಬಂದಿದೆ. ಕನ್ನಡದ ಸೂಪರ್ ಸ್ಟಾರ್ ನಟ ಈಗಾಗಲೇ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕೊನೆಯದಾಗಿ ಚಿರಂಜೀವಿ ಜೊತೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದರು. ಸಲ್ಮಾನ್ ಖಾನ್ ಜೊತೆ ದಬಾಂಗ್ 3 ಮಾಡಿದ್ದರು. ಅದಕ್ಕೂ ಮುಂಚೆ ವಿಜಯ್ ಜೊತೆ ಪುಲಿ, ಹಾಗೂ ರಾಜಮೌಳಿಯ ಬಾಹುಬಲಿ ಚಿತ್ರದಲ್ಲೂ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದರು.

ಇದೀಗ, ಕಿಚ್ಚ ಸುದೀಪ್ ಗೆ ಇದನ್ನೆಲ್ಲಾ ಮೀರಿದ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವರ್ಚುವಲ್ ತಂತ್ರಜ್ಞಾನದಲ್ಲಿ ಚಿತ್ರವೊಂದು ಬರುತ್ತಿದೆ. ಈ ಚಿತ್ರದಲ್ಲಿ ಕನ್ನಡ ನಟ ಸುದೀಪ್ ನಟಿಸುವ ಸಾಧ್ಯತೆ ಇದೆ. ಮುಂದೆ ಓದಿ....

'ಅವತಾರ್' ಶೈಲಿಯ ಸಿನಿಮಾ

'ಅವತಾರ್' ಶೈಲಿಯ ಸಿನಿಮಾ

2009ರಲ್ಲಿ ಅವತಾರ್ ಸಿನಿಮಾ ಬಂದಿತ್ತು. ಆ ಚಿತ್ರವನ್ನು ವರ್ಚುವಲ್ ತಂತ್ರಜ್ಞಾನ ಬಳಸಿ ಮೇಕಿಂಗ್ ಮಾಡಲಾಗಿತ್ತು. ಇದುವರೆಗೂ ಭಾರತದಲ್ಲಿ ಇಂತಹ ಸಿನಿಮಾ ಬಂದಿಲ್ಲ. ಇದೀಗ, ಅವತಾರ್ ಶೈಲಿಯಲ್ಲಿ ಚಿತ್ರವನ್ನು ಮಾಡಲು ಮಲಯಾಳಂ ನಿರ್ದೇಶಕ ಗೋಕುಲ್ ಭಾಸ್ಕರ್ ಸಜ್ಜಾಗಿದ್ದು, ಈ ಚಿತ್ರದಲ್ಲಿ ಸುದೀಪ್ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪೃಥ್ವಿ ಸುಕುಮಾರನ್ ನಾಯಕ

ಪೃಥ್ವಿ ಸುಕುಮಾರನ್ ನಾಯಕ

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಸಿನಿಮಾ ಹೆಸರು ಸದ್ಯಕ್ಕೆ ಫೈನಲ್ ಆಗಿಲ್ಲ. ಆದರೆ, ಪೋಸ್ಟರ್ ಮೂಲಕ ಭಾರಿ ಕುತೂಹಲ ಮೂಡಿಸಿದೆ.

ಪಂಚ ಭಾಷೆಗಳಲ್ಲಿ ಸಿನಿಮಾ ರಿಲೀಸ್!

ಪಂಚ ಭಾಷೆಗಳಲ್ಲಿ ಸಿನಿಮಾ ರಿಲೀಸ್!

ಅವತಾರ್, ದಿ ಲಯನ್ ಕಿಂಗ್ ಅಂತಹ ಚಿತ್ರಗಳಿಗೆ ಸಮನಾಗಿ ಈ ಚಿತ್ರವನ್ನು ಸಿದ್ದಪಡಿಸಲು ಚಿತ್ರತಂಡ ಯೋಜಿಸಿದೆ. ದೊಡ್ಡ ಬಜೆಟ್‌ನಲ್ಲಿ ತಯಾರಾಗಲಿರುವ ಈ ಚಿತ್ರ ಮಲಯಾಳಂ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆಕಾಣಲಿದೆ ಎಂದು ಸ್ವತಃ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಗೋಕಲ್ ರಾಜ್ ಭಾಸ್ಕರ್ ನಿರ್ದೇಶನ

ಗೋಕಲ್ ರಾಜ್ ಭಾಸ್ಕರ್ ನಿರ್ದೇಶನ

ಗೋಕಲ್ ರಾಜ್ ಭಾಸ್ಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೃಥ್ವಿರಾಜ್ ಪ್ರೊಡಕ್ಷನ್ ಮತ್ತು ಮ್ಯಾಜಿಲ್ ಫ್ರೇಮ್ಸ್ ಅಡಿಯ ಸಿನಿಮಾ ತಯಾರಾಗಲಿದೆ. ನಿರ್ದೇಶಕ ಗೋಕಲ್ ಭಾಸ್ಕರ್ ಅವರೇ ಚಿತ್ರಕಥೆ ಹಾಗೂ ವಿನ್ಯಾಸ ಮಾಡಲಿದ್ದಾರೆ. ಇದಕ್ಕೂ ಮುಂಚೆ 'ಅಯ್ಯಪ್ಪನುಂ ಕೋಶಿಯಂ', 'ಡ್ರೈವಿಂಗ್ ಲೈಸೆನ್ಸ್' ಚಿತ್ರಗಳಲ್ಲಿ ನಟಿಸಿದ್ದ ಪೃಥ್ವಿರಾಜ್ ಅಭಿಮಾನಿಗಳನ್ನು ರಂಜಿಸಿದ್ದರು.

ಸುದೀಪ್ ಕಡೆಯಿಂದ ಪಕ್ಕಾ ಆಗಿಲ್ಲ

ಸುದೀಪ್ ಕಡೆಯಿಂದ ಪಕ್ಕಾ ಆಗಿಲ್ಲ

ವರ್ಚುವಲ್ ಮೇಕಿಂಗ್ ಚಿತ್ರಕ್ಕೆ ಸುದೀಪ್ ಗೆ ಅವಕಾಶ ಬಂದಿರುವುದು ನಿಜ. ಆದರೆ, ಇನ್ನು ಒಪ್ಪಿಗೆ ನೀಡಿಲ್ಲ ಎಂದು ಮೂಲಗಳಿಂದ ತಿಳಿದಿದೆ. ಸದ್ಯ 'ಕೋಟಿಗೊಬ್ಬ-3' ಶೂಟಿಂಗ್ ಮುಗಿಸಿರುವ ಕಿಚ್ಚ, ಅನೂಪ್ ಭಂಡಾರಿ ನಿರ್ದೇಶನದ 'ಫ್ಯಾಂಟಮ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಈ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

More from Filmibeat

English summary
Kannada superstar Kiccha Sudeep has been approached for India's 1st virtual production movie. Prithvi sukumaran will be playing lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X