»   » ಕಿಚ್ಚ ಸುದೀಪ್ ಬಗ್ಗೆ ಕೇಳಿಬಂದಿದೆ ಹೊಸ ಸುದ್ದಿ: ಇದು ನಿಜವೇ.?

ಕಿಚ್ಚ ಸುದೀಪ್ ಬಗ್ಗೆ ಕೇಳಿಬಂದಿದೆ ಹೊಸ ಸುದ್ದಿ: ಇದು ನಿಜವೇ.?

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ. ಅದೇನಪ್ಪಾ ಅಂದ್ರೆ, ಕಿಚ್ಚ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರಂತೆ.

ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿರುವ ಕಿಚ್ಚ ಸುದೀಪ್ ಇದೀಗ ಹಾಲಿವುಡ್ ಕಡೆ ಮುಖ ಮಾಡುತ್ತಿದ್ದಾರಂತೆ.

Sudeep in Hollywood Film: Team Kiccha Sudeep tweets

'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಲು ಸುದೀಪ್ ಗೆ ದಾಖಲೆಯ ಸಂಭಾವನೆ!

ಹಾಗಾದ್ರೆ, ಯಾವ ಹಾಲಿವುಡ್ ಚಿತ್ರಕ್ಕೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಕೇಳ್ತಿದ್ದೀರಾ.? ಈ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರ ಇಲ್ಲ.

ಅಷ್ಟಕ್ಕೂ, ''ಹಾಲಿವುಡ್ ಮೂವಿಗೆ ಕಿಚ್ಚ ಸುದೀಪ್ ಸಹಿ ಹಾಕಿದ್ದಾರೆ'' ಎಂಬ 'ಎಕ್ಸ್ ಕ್ಲೂಸಿವ್ ಹಾಗೂ ಹೆಮ್ಮೆಯ ಸುದ್ದಿ'ಯನ್ನ ನೀಡಿರುವವರು 'ಟೀಮ್ ಕಿಚ್ಚ ಸುದೀಪ್' ಎಂಬ ಟ್ವಿಟ್ಟರ್ ಖಾತೆ. ಇದರೊಂದಿಗೆ ಜುಲೈ 7 ರಂದು ಲಂಡನ್ ನಲ್ಲಿ ಶೂಟಿಂಗ್ ಆರಂಭ ಎಂದು 'ಟೀಮ್ ಕಿಚ್ಚ ಸುದೀಪ್' ಟ್ವೀಟ್ ಮಾಡಿದೆ.

Sudeep in Hollywood Film: Team Kiccha Sudeep tweets

ನಾಳೆಯೇ ಜುಲೈ 7.! ಹೀಗಿರುವಾಗ, ಯಾವ ಹಾಲಿವುಡ್ ಸಿನಿಮಾದಲ್ಲಿ ಸುದೀಪ್ ನಟಿಸಲು ಒಪ್ಪಿಕೊಂಡಿರಬಹುದು ಎಂದು ಸಹಜವಾಗಿ ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಅಸಲಿಗೆ, ಈ ಸುದ್ದಿ ನಿಜವೋ.. ಅಥವಾ ಜಸ್ಟ್ ಗುಸು ಗುಸುವೋ.. ಎಂದು ಸ್ವತಃ ಸುದೀಪ್ ಸ್ಪಷ್ಟ ಪಡಿಸಬೇಕು.

ಅಂದ್ಹಾಗೆ, ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸುತ್ತಿರುವ 'ದಿ ವಿಲನ್' ಚಿತ್ರದ ಚಿತ್ರೀಕರಣ ಸದ್ಯದಲ್ಲಿಯೇ ಲಂಡನ್ ನಲ್ಲಿ ನಡೆಯಲಿದೆ.

English summary
Team Kiccha Sudeep has taken their Twitter account to share Exclusive and Proud News that Kiccha Sudeep has signed Hollywood Movie. Is this news true.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada