For Quick Alerts
  ALLOW NOTIFICATIONS  
  For Daily Alerts

  ಶಂಕರ್-ರಾಮ್ ಚರಣ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಿಚ್ಚ ಸುದೀಪ್?

  |

  ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮೊದಲ ಬಾರಿಗೆ ತೆಲುಗು ಸ್ಟಾರ್ ರಾಮ್ ಚರಣ್‌ಗೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಪ್ಯಾನ್ ಇಂಡಿಯಾ 3ಡಿ ಸಿನಿಮಾ ಯಾವಾಗ ಸೆಟ್ಟೇರಲಿದೆ, ಯಾರೆಲ್ಲ ಕಲಾವಿದರು ಬಣ್ಣಹಚ್ಚಲಿದ್ದಾರೆ ಎನ್ನುವುದು ದಕ್ಷಿಣ ಭಾರತೀಯ ಸಿನಿ ಪ್ರಿಯರ ಕುತೂಹಲ. ಸದ್ಯ ಶಂಕರ್ ಚಿತ್ರದ ಬಗ್ಗೆ ಹೊಸ ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ಬೇರೆ ಬೇರೆ ಭಾಷೆಯ ಖ್ಯಾತ ಕಲಾವಿದರು ಬಣ್ಣಹಚ್ಚಲಿದ್ದಾರೆ ಎನ್ನವ ಸುದ್ದಿ ವೈರಲ್ ಆಗಿದೆ. ವಿಶೇಷ ಎಂದರೆ ಕನ್ನಡದ ಖ್ಯಾತ ನಟ ಕೂಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮುಂದೆ ಓದಿ...

  ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?ಬಾಲಿವುಡ್ ಸ್ಟಾರ್ ಜೊತೆ ಸಿನಿಮಾ ಘೋಷಿಸಿದ ಶಂಕರ್: ಚಿರು ಪುತ್ರನ ಚಿತ್ರ ಏನಾಯ್ತು?

  ಶಂಕರ್ ಸಿನಿಮಾದಲ್ಲಿ ಸುದೀಪ್

  ಶಂಕರ್ ಸಿನಿಮಾದಲ್ಲಿ ಸುದೀಪ್

  ಕನ್ನಡದಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶಂಕರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೆ ಈ ಬಗ್ಗೆ ಸಿನಿಮಾ ಅಥವಾ ಕಿಚ್ಚ ಸುದೀಪ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  ಅನಾರೋಗ್ಯದಿಂದ ಬಳಲುತ್ತಿರುವ ಸುದೀಪ್

  ಅನಾರೋಗ್ಯದಿಂದ ಬಳಲುತ್ತಿರುವ ಸುದೀಪ್

  ಸುದೀಪ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಚೇತರಿಸಿಕೊಳ್ಳಲು ಇನ್ನು ಸಮಯ ಬೇಕು ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕೊರೊನಾ ಎರಡನೇ ಅಲೆ ಕೂಡ ಹೆಚ್ಚಾಗಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿದೆ. ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಶಂಕರ್ ಸಿನಿಮಾ ಸೆಟ್ಟೇರಲಿದ್ದು, ಕಿಚ್ಚ ನಟಿಸುವ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  ಮೆಗಾ ಕುಟುಂಬದಿಂದ ಮತ್ತೊಮ್ಮೆ ಸರ್ಪ್ರೈಸ್: ಶಂಕರ್ ಪ್ರಾಜೆಕ್ಟ್‌ ಮೇಲೆ ಕಣ್ಣು?ಮೆಗಾ ಕುಟುಂಬದಿಂದ ಮತ್ತೊಮ್ಮೆ ಸರ್ಪ್ರೈಸ್: ಶಂಕರ್ ಪ್ರಾಜೆಕ್ಟ್‌ ಮೇಲೆ ಕಣ್ಣು?

  ಶಂಕರ್ ಸಿನಿಮಾದಲ್ಲಿ ಚಿರಂಜೀವಿ, ಸಲ್ಮಾನ್?

  ಶಂಕರ್ ಸಿನಿಮಾದಲ್ಲಿ ಚಿರಂಜೀವಿ, ಸಲ್ಮಾನ್?

  ಇನ್ನು ತೆಲುಗಿನಿಂದ ಖ್ಯಾತ ನಟ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹಿಂದಿಯಿಂದ ಸಲ್ಮಾನ್ ಖಾನ್ ಶಂಕರ್ ಚಿತ್ರದ ಚಿಕ್ಕ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮತ್ತೋರ್ವ ಖ್ಯಾತ ನಟ ವಿಜಯ್ ಸೇತುಪತಿ ಕೂಡ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  15 ಕೋಟಿ ರೂ.ನಲ್ಲಿ ತಯಾರಾಗುತ್ತಿದೆ ಸಿನಿಮಾ

  15 ಕೋಟಿ ರೂ.ನಲ್ಲಿ ತಯಾರಾಗುತ್ತಿದೆ ಸಿನಿಮಾ

  15ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ 3 ಡಿ ಸಿನಿಮಾಗೆ ದಿಲ್ ರಾಜ್ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಶಂಕರ್ ಮತ್ತು ರಾಮ್ ಚರಣ್ ಸಿನಿಮಾ, ಇದೀಗ ಬೇರ್ ಭಾಷೆಯ ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

  ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಆಗ್ತಾರಾ 'ಕಬೀರ್ ಸಿಂಗ್' ಸುಂದರಿರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಆಗ್ತಾರಾ 'ಕಬೀರ್ ಸಿಂಗ್' ಸುಂದರಿ

  ರಣ್ವೀರ್ ಸಿಂಗ್ ಜೊತೆ ಸಿನಿಮಾ ಅನೌನ್ಸ್ ಮಾಡಿರುವ ಶಂಕರ್

  ರಣ್ವೀರ್ ಸಿಂಗ್ ಜೊತೆ ಸಿನಿಮಾ ಅನೌನ್ಸ್ ಮಾಡಿರುವ ಶಂಕರ್

  ಅಂದಹಾಗೆ ಶಂಕರ್ ಸದ್ಯ ಇಂಡಿಯನ್-2ನಲ್ಲಿ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ನಾಯಕನಾಗಿ ನಟಿಸುತ್ತಿರುವ ಇಂಡಿಯನ್-2 ಚಿತ್ರೀಕರಣ ಮುಗಿಸಿದ ಬಳಿಕ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಾಗಿ ಶಂಕರ್ ಹೇಳಿದ್ದಾರೆ. ಈ ಸಿನಿಮಾ ಜೊತೆಗೆ ಶಂಕರ್ ರಣ್ವೀರ್ ಸಿಂಗ್ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ತಮಿಳಿನ ಸೂಪರ್ ಹಿಟ್ ಅನ್ನಿಯನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದು, ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Kannada Actor Sudeep likely to play guest role in shankar and ram charan pan india movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X