'ಆದಿಪುರುಷ್' ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ: ರಾವಣನ ಸಹೋದರನಾಗಿ ನಟನೆ
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದ ಚಿತ್ರತಂಡ ಸದ್ಯ ಕೊರೊನಾ ಕಾರಣ ಬ್ರೇಕ್ ಹಾಕಿದೆ. ಈ ನಡುವೆ ಆದಿಪುರುಷ್ ಬಗ್ಗೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ.
ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆ ಎನ್ನವ ಸುದ್ದಿ ವೈರಲ್ ಆಗಿದೆ. ಸುದೀಪ್ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ತಮಿಳು ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯ 3ಡಿ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಬೆನ್ನಲ್ಲೇ ಈಗ ಪ್ರಭಾಸ್ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ನಿಜಕ್ಕೂ ಸೂದೀಪ್ ಆದಿಪುರುಷ್ ಚಿತ್ರದಲ್ಲಿ ನಟಿಸುತ್ತಾರಾ? ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಇಲ್ಲಿದೆ ಮಾಹಿತಿ...

ಆದಿಪುರುಷ್ ಚಿತ್ರದಲ್ಲಿ ಸುದೀಪ್?
ಬಾಲಿವುಡ್ ನಿರ್ದೇಶಕ ಓಂ ರಾವತ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಕನ್ನಡದ ಖ್ಯಾತ ನಟ ಸುದೀಪ್ ಅವರನ್ನು ಸಂಪರ್ಕ ಮಾಡಿದೆ ಸಿನಿಮಾತಂಡ ಎನ್ನುವ ಮಾಹಿತಿ ಹರಿದಾಡುತ್ತಿದೆ.

ವಿಭೀಷಣ ಪಾತ್ರದಲ್ಲಿ ಸುದೀಪ್
ಆದಿಪುರುಷ್ ಸಿನಿಮಾದಲ್ಲಿ ರಾವಣನ ಕಿರಿಯ ಸಹೋದರ ವಿಭೀಷಣ ಪಾತ್ರದಲ್ಲಿ ನಟಿಸಲು ಕಿಚ್ಚನಿಗೆ ಆಫರ್ ಮಾಡಿದ್ದಾರಂತೆ. ಆದರೆ ಕಿಚ್ಚನ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಅಥವಾ ತಿರಸ್ಕರಿಸಿದ್ದಾರಾ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ. ಒಂದು ವೇಳೆ ಸುದೀಪ್ ನಟಿಸಲು ಒಪ್ಪಿಕೊಂಡಿದ್ದೆ ಆಗಿದ್ದರೆ ನಟ ಸೈಫ್ ಅಲಿ ಖಾನ್ ಸಹೋದರನಾಗಿ ಬಣ್ಣಹಚ್ಚಲಿದ್ದಾರೆ. ಈ ಬಗ್ಗೆ ಸಿನಿಮಾತಂಡ ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಿದೆ.

ಕೃತಿ ಸನೂನ್ ನಾಯಕಿ
ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯಾಗಿ ನಟಿ ಕೃತಿ ಸನೂನ್ ಬಣ್ಣಹಚ್ಚುತ್ತಿದ್ದಾರೆ. ಮೊದಲ ಬಾರಿಗೆ ಕೃತಿ ಪ್ರಭಾಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದು, ಸೀತೆಯಾಗಿ ಅಭಿಮಾನಿಗಳ ಮುಂದೆ ಬರಲು ಉತ್ಸುಕರಾಗಿದ್ದಾರೆ.
Recommended Video

ಮುಂಬೈ ನಲ್ಲಿ ಚಿತ್ರೀಕರಣ
ಆದಿಪುರುಷ್ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಮುಂಬೈನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಕೊರೊನಾ ಬ್ರೇಕ್ ಹಾಕಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಆದಿಪುರುಷ್ ಚಿತ್ರದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದುಕೊಂಡ ಪ್ರಕಾರವೇ ಚಿತ್ರೀಕರಣ ನಡೆದಿದ್ದರೆ ಬೇಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಲು ಚಿತ್ರತಂಡ ತಯಾರಾಗಿತ್ತು. ಆದರೆ ಕೊರೊನಾ ಅಡ್ಡಿ ಪಡಿಸಿದ ಪರಿಣಾಮ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.


Click it and Unblock the Notifications











