ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಸುದೀಪ್.!
Recommended Video

ಕೋಟಿಗೊಬ್ಬ 3, ಪೈಲ್ವಾನ್, ದಿ ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ....ಹೀಗೆ ಕನ್ನಡದಲ್ಲೇ ಸಾಲು ಸಾಲು ಸಿನಿಮಾ ಮಾಡ್ತಿರುವ ಕಿಚ್ಚ ಸುದೀಪ್ ಜೊತೆ ಜೊತೆಗೆ ಬೇರೆ ಭಾಷೆಯಲ್ಲೂ ಅಭಿನಯಿಸುತ್ತಾ ಬರ್ತಿದ್ದಾರೆ.
ಕನ್ನಡದ ಇಷ್ಟು ಸಿನಿಮಾಗಳ ಜೊತೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಹಾಲಿವುಡ್ ಸಿನಿಮಾವನ್ನ ಒಪ್ಪಿಕೊಂಡಿದ್ದು, ಆ ಚಿತ್ರದ ಚಿತ್ರೀಕರಣದಲ್ಲೂ ಭಾಗಿಯಾಗಬೇಕಿದೆ.
ಇಷ್ಟರ ಮಧ್ಯೆ ಮತ್ತೊಂದು ಸುದ್ದಿ ಸುದೀಪ್ ಅವರ ಬಗ್ಗೆ ಹರಿದಾಡುತ್ತಿದೆ. ಹೌದು, ಬಾಲಿವುಡ್ ನಿಂದ ಮತ್ತೆ ಕಿಚ್ಚನಿಗೆ ಕರೆ ಬಂದಿದೆಯಂತೆ. ಸೂಪರ್ ಸ್ಟಾರ್ ನಟನೊಂದಿಗೆ ಸ್ಕ್ರೀನ್ ಶೇರ್ ಮಾಡಲು ಆಫರ್ ಮಾಡುತ್ತಿದ್ದಾರಂತೆ. ಅಷ್ಟಕ್ಕೂ, ಆ ಸಿನಿಮಾ ಯಾವುದು.? ಆ ನಟ ಯಾರು ಎಂದು ತಿಳಿಯಲು ಮುಂದೆ ಓದಿ.....

ಅಮಿತಾಬ್ ಜೊತೆ ಮತ್ತೆ ಸುದೀಪ್.?
2010ರಲ್ಲಿ 'ರಣ್' ಎಂಬ ಸಿನಿಮಾದಲ್ಲಿ ಸುದೀಪ್ ಮತ್ತು ಅಮಿತಾಬ್ ಬಚ್ಚನ್ ಒಟ್ಟಿಗೆ ಅಭಿನಯಿಸಿದ್ದರು. ಈಗ ತೆಲುಗಿನ ಸೈರಾ ಚಿತ್ರದಲ್ಲೂ ಚಿರಂಜೀವಿ ಜೊತೆ ಅಮಿತಾಬ್ ಮತ್ತು ಸುದೀಪ್ ತೆರೆಹಂಚಿಕೊಳ್ಳುತ್ತಿದ್ದಾರೆ. ಈಗ ಅಮಿತಾಬ್ ಅಭಿನಯಿಸಲಿರುವ ಹಿಂದಿಯ ಹೊಸ ಚಿತ್ರಕ್ಕೆ ಸುದೀಪ್ ಅವರನ್ನ ಕರೆತರುವ ಪ್ಲಾನ್ ಇದೆಯಂತೆ.

'ಆಂಖೇ 2' ಸಿನಿಮಾಗಾಗಿ ಆಫರ್
2002ರಲ್ಲಿ ತೆರೆಕಂಡಿದ್ದ ಆಂಖೇ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಮಿತಾಬ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸುಶ್ಮಿತಾ ಸೇನ್, ಅರ್ಜುನ ರಾಂಪಾಲ್, ಪರೇಶ್ ರಾವಲ್, ಆಧಿತ್ಯ ಪಾಂಚಲಿ ಅಭಿನಯಿಸಿದ್ದರು. ಇದೀಗ, ಈ ಚಿತ್ರದ ಮುಂದುವರೆದ ಭಾಗ ಮಾಡಲು ಯೋಚಿಸಿದ್ದು, ಈ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗಿದೆ.

ದೊಡ್ಡ ತಾರಬಳಗ ಹೊಂದಿರುವ ಸಿನಿಮಾ
ಅಮಿತಾಭ್ ಬಚ್ಚನ್ ಜೊತೆ ಈಗಾಗಲೇ ಅನಿಲ್ ಕಪೂರ್, ಇಲಿಯಾನಾ, ಅರ್ಜುನ್ ರಾಂಪಾಲ್, ಅರ್ಶದ್ ವಾರ್ಷಿ, ರೆಜಿನಾ ಅಂತಹ ಕಲಾವಿದರು ಅಭಿನಯಿಸಲಿದ್ದಾರೆ. ಇವರ ಪೈಕಿ ಪ್ರಮುಖ ಪಾತ್ರಕ್ಕೆ ಸುದೀಪ್ ಅವರನ್ನ ಸಂಪರ್ಕ ಮಾಡಲಾಗಿದೆಯಂತೆ.

'ದಬಾಂಗ್-3' ಮಾಡ್ತಾರಂತೆ
ಈ ಮಧ್ಯೆ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಚಿತ್ರದಲ್ಲಿ ಸುದೀಪ್ ನಟಿಸಬೇಕಾಗಿದೆಯಂತೆ. ಅದಕ್ಕೂ ಮುಂಚೆ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್ ಅಭಿನಯಿಸ್ತಾರೆ ಎನ್ನಲಾಗಿತ್ತು. ನಂತರ ಆ ಸಿನಿಮಾವನ್ನ ಕಿಚ್ಚ ಮಾಡಿರಲಿಲ್ಲ. ಈಗ ದಬಾಂಗ್ 3 ಮಾಡಬಹುದು ಎನ್ನಲಾಗಿದೆ. ಇದು ಖಚಿತವಿಲ್ಲ.


Click it and Unblock the Notifications











