ಜುಲೈನಲ್ಲಿ 'ಕೋಟಿಗೊಬ್ಬ 2' ನೋಡೋಕೆ ನೀವ್ ರೆಡಿನಾ?
ಕಿಚ್ಚ ಸುದೀಪ್ ಹಾಗೂ ನಿತ್ಯ ಮೆನನ್ ಅಭಿನಯದ ಬಹುನಿರೀಕ್ಷಿತ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ತೆರೆಗೆ ಬರಲು ತಯಾರಾಗಿದೆ. 'ಲಿಂಗಾ' ಖ್ಯಾತಿಯ ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿರುವ ಚಿತ್ರ ಮುಂದಿನ ತಿಂಗಳು ತೆರೆ ಕಾಣಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿರುವ ಈ ಸಿನಿಮಾ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ.[ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ]

ಅಂದಹಾಗೆ ಮುಂದಿನ ತಿಂಗಳು ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಕಬಾಲಿ' ಸಿನಿಮಾ ತೆರೆ ಕಾಣುತ್ತಿರುವುದರಿಂದ ಅದನ್ನು ನೋಡಿಕೊಂಡು 'ಕೋಟಿಗೊಬ್ಬ 2' ಚಿತ್ರದ ದಿನಾಂಕ ನಿಗದಿಪಡಿಸಲಾಗುವುದು ಎಂದಿದ್ದಾರೆ ಚಿತ್ರದ ನಿರ್ಮಾಪಕರು.
ಜುಲೈ 1 ರಂದು ರಜನಿಕಾಂತ್ ಅಭಿನಯದ 'ಕಬಾಲಿ' ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ 'ಕಬಾಲಿ' ಬಿಡುಗಡೆ ಮುಂದಕ್ಕೆ ಹೋಗಿದ್ದು, ಜುಲೈ 15 ಕ್ಕೆ ತೆರೆ ಕಾಣಲಿದೆಯಂತೆ.[ರಿಲೀಸ್ ಗೂ ಮುನ್ನ ದಾಖಲೆ ಮೊತ್ತಕ್ಕೆ ಮಾರಾಟವಾದ ಕಿಚ್ಚನ ಚಿತ್ರ]

ಇದೇ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಚಿತ್ರಮಂದಿರಕ್ಕಾಗಿ ಗುದ್ದಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಜುಲೈ 15ರ ನಂತರ ಒಳ್ಳೆ ದಿನಾಂಕ ನೋಡಿಕೊಂಡು 'ಕೋಟಿಗೊಬ್ಬ 2' ಚಿತ್ರ ಬಿಡುಗಡೆ ಆಗಲಿದೆ.
ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಕಿಚ್ಚ ಸುದೀಪ್ ಅವರಿಗೆ ಈ ಚಿತ್ರದ ನಟನೆಗಾಗಿ ನೀಡಬೇಕಿದ್ದ ಸಂಭಾವನೆಯಲ್ಲಿ ಇನ್ನು ಕೊಂಚ ಬಾಕಿ ಇದ್ದು, ಅದನ್ನು ಕೇಳದೇ ಸುದೀಪ್ ಅವರು ಇಡೀ ಚಿತ್ರದ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು ಅವರು.

ಒಟ್ನಲ್ಲಿ ಮುಂದಿನ ತಿಂಗಳಲ್ಲಿ ಸುದೀಪ್ ಅವರ ಸಿನಿಮಾ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಲಿದ್ದು, ಅಭಿಮಾನಿಗಳು ಕೂಡ ಚಿತ್ರದ ಬಿಡುಗಡೆಗೆ ಕಾತರದಿಂದ ಕಾದು ಕುಳಿತಿದ್ದಾರೆ.


Click it and Unblock the Notifications











