ಮತ್ತೆ ಕಿಚ್ಚ ಸುದೀಪ್ ಗೆ ಆಫರ್ ನೀಡಿದ ರಾಜಮೌಳಿ
ಆಗ ಬಂದಿದ್ದ 'ಈಗ' ಸಿನಿಮಾ ಸುದೀಪ್ ಕೆರಿಯರ್ ನಲ್ಲಿ ದೊಡ್ಡ ಹೆಸರು ತಂದು ಕೊಟ್ಟಿತ್ತು. ನಿರ್ದೇಶಕ ರಾಜಮೌಳಿ ನಟ ಸುದೀಪ್ ಪ್ರತಿಭೆಯನ್ನ ಅದ್ಭುತವಾಗಿ ಬಳಸಿಕೊಂಡಿದ್ದರು.
'ಈಗ' ಸಿನಿಮಾದ ನಂತರ 'ಬಾಹುಬಲಿ 'ದಿ ಬಿಗಿನಿಂಗ್' ಸಿನಿಮಾದಲ್ಲಿಯೂ ಸುದೀಪ್ ಒಂದು ಪಾತ್ರ ಮಾಡಿದ್ದರು. ಆ ಸಿನಿಮಾದ ನಂತರ ಇದೀಗ ಮತ್ತೊಂದು ಸಿನಿಮಾಗಾಗಿ ಸುದೀಪ್ ಗೆ ರಾಜಮೌಳಿ ಆಫರ್ ನೀಡಿದ್ದಾರಂತೆ.
'ಆರ್ ಆರ್ ಆರ್' ರಾಜಮೌಳಿ ಸದ್ಯ ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ಸಿನಿಮಾದ ಒಂದು ಪಾತ್ರದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ಮಾತಿದೆ. ತೆಲುಗಿನ ಕೆಲವು ವೆಬ್ ಸೈಟ್ ಗಳು ಈ ಬಗ್ಗೆ ವರದಿ ಮಾಡಿದೆ.

ಸಿನಿಮಾದಲ್ಲಿ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 'ವೀರ ಮದಕರಿ' ಹಾಗೂ 'ಕೆಂಪೇಗೌಡ' ಸಿನಿಮಾಗಳಲ್ಲಿ ಸುದೀಪ್ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೆ ಕಾಯಬೇಕಾಗಿದೆ.
ರಾಮ್ ಚರಣ್ ತೇಜ ಹಾಗೂ ಜೂನಿಯರ್ ಎಸ್ ಟಿ ಆರ್ 'ಆರ್ ಆರ್ ಆರ್' ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ.


Click it and Unblock the Notifications











