»   » ಸುದೀಪ್ ಪ್ರೊಡ್ಯೂಸರ್: 'ಡ್ರಾಮಾ ಜೂನಿಯರ್ಸ್ ಚಿತ್ರಾಲಿ' ಹೀರೋಯಿನ್!

ಸುದೀಪ್ ಪ್ರೊಡ್ಯೂಸರ್: 'ಡ್ರಾಮಾ ಜೂನಿಯರ್ಸ್ ಚಿತ್ರಾಲಿ' ಹೀರೋಯಿನ್!

Written By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅತ್ತ ಸ್ಯಾಂಡಲ್ ವುಡ್, ಇತ್ತ ಕಿರುತೆರೆ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸುದೀಪ್ ಹಾಗೂ ಉಪೇಂದ್ರ ಅಭಿನಯದ 'ಮುಕುಂದ ಮುರಾರಿ' ಚಿತ್ರ ಬಿಡುಗಡೆಯಾಗಿತ್ತು. ಈಗ 'ಹೆಬ್ಬುಲಿ' ಚಿತ್ರದ ಶೂಟಿಂಗ್ ಗೆ ಮತ್ತೆ ಹಾಜರಾಗಿದ್ದಾರೆ.

ಹೀಗೆ, ದೊಡ್ಡ ದೊಡ್ಡ ಸಿನಿಮಾಗಳ ಜೊತೆಯಲ್ಲಿ ಕಿರುತೆರೆಯಲ್ಲೂ ಸುದೀಪ್ ಎಂಟರ್ ಟೈನ್ ಮಾಡುತ್ತಾ ಬಂದಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೇ ಸುದೀಪ್ ಈಗ, 'ಬಿಗ್ ಬಾಸ್ ಕನ್ನಡ-4' ರಿಯಾಲಿಟಿ ಶೋ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಎಲ್ಲ ಬ್ಯುಸಿ ಶೆಡ್ಯೂಲ್ ನಲ್ಲೂ ಸುದೀಪ್ ಹೊಸ ಯೋಜನೆಯೊಂದನ್ನ ಕೈಗೆತ್ತಿಕೊಂಡಿದ್ದಾರಂತೆ. ಅದೇನಪ್ಪಾ ಅಂದ್ರೆ, 'ಡ್ರಾಮಾ ಜೂನಿಯರ್ಸ್' ನಲ್ಲಿ ವಿನ್ನರ್ ಆಗಿರುವ ಚಿತ್ರಾಲಿ ಜೊತೆ ಸಿರಿಯಲ್ ವೊಂದನ್ನ ಮಾಡಲಿದ್ದಾರಂತೆ. ಹೀಗಂತಾ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಸುದ್ದಿಯೊಂದು ಸಿಕ್ಕಾಪಟ್ಟೆ ರೌಂಡ್ ಹೊಡಿತಿದೆ.['ಡ್ರಾಮಾ' ಕ್ವೀನ್, 'ಬಾರ್ಬಿ ಡಾಲ್' ಚಿತ್ರಾಲಿ ಬಗ್ಗೆ ನಿಮಗೆಷ್ಟು ಗೊತ್ತು?]

ಅಷ್ಟಕ್ಕೂ, ಚಿತ್ರಾಲಿ ಹಾಗೂ ಸುದೀಪ್ ಕಾಂಬಿನೇಷನ್ ನಲ್ಲಿ ಶುರುವಾಗಲಿರುವ ಆ ಹೊಸ ಪ್ರಾಜೆಕ್ಟ್ ಯಾವುದು ಅಂತ ಮುಂದೆ ಓದಿ....

ಸುದೀಪ್ ಹೊಸ ಪ್ರಾಜೆಕ್ಟ್

ಬಿಗ್ ಬಾಸ್ ಕನ್ನಡ ಹಾಗೂ ಸಿನಿಮಾಗಳ ಮಧ್ಯೆ ಸುದೀಪ್ ಹೊಸ ಯೋಜನೆಯನ್ನ ಹಾಕಿಕೊಂಡಿದ್ದಾರಂತೆ.

ಧಾರವಾಹಿ ನಿರ್ಮಾಣದಲ್ಲಿ ಕಿಚ್ಚ

ಮೂಲಗಳ ಪ್ರಕಾರ, ಸುದೀಪ್ ಕಿರುತೆರೆಯಲ್ಲಿ ಧಾರವಾಹಿವೊಂದನ್ನ ನಿರ್ಮಾಣ ಮಾಡಲಿದ್ದಾರಂತೆ. ತಮ್ಮ ಹೋಮ್ ಪ್ರೊಡಕ್ಷನ್ ಆಗಿರುವ 'ಕಿಚ್ಚ ಕ್ರಿಯೇಷನ್ಸ್' ಅಡಿಯಲ್ಲಿ ಈ ಸಿರಿಯಲ್ ಮೂಡಿಬರಲಿದೆಯಂತೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ತಯಾರಿ ಕೂಡ ನಡೆಯುತ್ತಿದೆಯಂತೆ.

ಕಿಚ್ಚ-ಚಿತ್ರಾಲಿ ಕಾಂಬಿನೇಷನ್

ಈ ಧಾರವಾಹಿಯಲ್ಲಿ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ವಿನ್ನರ್ ಚಿತ್ರಾಲಿ ಪ್ರಮುಖ ಪಾತ್ರವನ್ನ ಮಾಡಲಿದ್ದಾರಂತೆ.

ಕಿಚ್ಚನಿಗೂ ಕಿರುತೆರೆಗೆ ಸಂಬಂಧ

ದಿನದಿಂದ ದಿನಕ್ಕೆ ಸುದೀಪ್ ಗೂ ಹಾಗೂ ಕಿರುತೆರೆಗೂ ಸಂಬಂಧ ಗಟ್ಟಿಯಾಗುತ್ತಿದೆ. ಈ ಮುಂಚೆ 'ಪ್ಯಾಟೇ ಹುಡ್ಗೀರ್ ಹಳ್ಳಿ ಲೈಪ್' ರಿಯಾಲಿಟಿ ಶೋ ನಿರೂಪಣೆ ಮಾಡಿದ್ದ ಅನುಭವ ಸುದೀಪ್ ಗಿದೆ. ಇನ್ನೂ ಸತತ ನಾಲ್ಕು ವರ್ಷದಿಂದ ಬಿಗ್ ಬಾಸ್ ಕಾರ್ಯಕ್ರಮವನ್ನ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

ಕ್ರೇಜ್ ಹೆಚ್ಚಾಗಿದೆ

ಚಿತ್ರಾಲಿ ಹಾಗೂ ಸುದೀಪ್ ಪ್ರಾಜೆಕ್ಟ್ ನ ಎಲ್ಲ ಕೆಲಸಗಳು ಅಂತಿಮ ಘಟ್ಟದಲ್ಲಿದೆ. ಯಾವ ವಾಹಿನಿಯಲ್ಲಿ? ಯಾರು ನಿರ್ದೇಶನ ಮಾಡಲಿದ್ದಾರೆ? ಯಾವಾಗನಿಂದ ಶುರು ಅಂತ ಅಧೀಕೃತವಾಗಿ ಗೊತ್ತಾಗಬೇಕಿದೆ.

English summary
Sandalwood actor Kiccha Sudeep will soon produce a serial Under the his Kiccha creations. which will be featured 'Drama juniors winner Chitrali' in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada