ಶಿವಣ್ಣ ಮಗಳ ಮದುವೆಯಲ್ಲಿ ಸುದೀಪ್-ಪುನೀತ್ ಮಾಡಿದ್ದೇನು?
ನಿಮಗೆ ನೆನಪಿದ್ಯಾ....ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರದ ಫಸ್ಟ್ ಶೋ ನಡೆಯುತ್ತಿರುವಾಗ, ಇಂಟರ್ವಲ್ ನಲ್ಲಿ ಸುದೀಪ್ ಅಭಿನಯದ 'ರನ್ನ' ಟ್ರೈಲರ್ ಪ್ಲೇ ಮಾಡಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.
ಸಾಲದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ವಿರುದ್ಧ ಸುದೀಪ್ ಫ್ಯಾನ್ಸ್, ಸುದೀಪ್ ವಿರುದ್ಧ ಅಪ್ಪು ಫ್ಯಾನ್ಸ್ ಮಾತಿನ ಚಕಮಕಿ ನಡೆಸುತ್ತಲೇ ಇರುತ್ತಾರೆ. ['ರಣವಿಕ್ರಮ' ನಡುವೆ 'ರನ್ನ'ನ ಕಂಡು ರೊಚ್ಚಿಗೆದ್ದ ಅಭಿಮಾನಿಗಳು]
ಹೀಗಿರುವಾಗಲೇ ಇತ್ತೀಚೆಗಷ್ಟೇ ನಡೆದ ಶಿವರಾಜ್ ಕುಮಾರ್ ಅವರ ಮಗಳ ಮದುವೆ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸುದೀಪ್ ಮುಖಾಮುಖಿ ಆದರು. ಆಗ ಇಬ್ಬರು ಮಾಡಿದ್ದೇನು? ಮುಂದೆ ಓದಿ......

ಅಪ್ಪು-ಸುದೀಪ್ ಗೆ ಆಗ್ಬರಲ್ಲ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಕಿಚ್ಚ ಸುದೀಪ್ ಅವರಿಗೂ ಆಗ್ಬರಲ್ಲ ಅಂತ ಗಾಂಧಿನಗರದಲ್ಲಿ ಯಾರು ಹಬ್ಬಿಸಿದರೋ ಗೊತ್ತಿಲ್ಲ. ಆದ್ರೆ, ಇಬ್ಬರ ಫ್ಯಾನ್ಸ್ ಮಾತ್ರ ಸದಾ ಕಚ್ಚಾಡುತ್ತಲೇ ಇರುತ್ತಾರೆ. ಹೀಗೆ ಕಿತ್ತಾಡುವ ಮುನ್ನ, ಶಿವಣ್ಣ ಮಗಳ ಮದುವೆಯಲ್ಲಿ ಇಬ್ಬರು ನಟರು ಏನು ಮಾಡಿದ್ರು ಅಂತ ಕೇಳಿ.....

ಸುದೀಪ್ ಗೆ ಅಪ್ಪು ಅಪ್ಪುಗೆ
ಶಿವಣ್ಣ ಮಗಳು ಡಾ.ನಿರುಪಮ ಮದುವೆಗೆ ಆಗಮಿಸಿದ ಕಿಚ್ಚ ಸುದೀಪ್ ರನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೈ ಕುಲುಕಿ, ಅಪ್ಪುಗೆ ನೀಡಿದ್ದಾರೆ. [ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

ಕೊಠಡಿಯಲ್ಲಿ ಇಬ್ಬರ ಸಮ್ಮಿಲನ
ಸಾರ್ವಜನಿಕವಾಗಿ ಪುನೀತ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ವಧು-ವರರಿಗೆ ಶುಭಾಶಯ ನೀಡಿದ ಬಳಿಕ ಮದುವೆ ಮಂಟಪದಿಂದ ನಿರ್ಗಮಿಸಿದ ಸುದೀಪ್ ಕೊಠಡಿಯೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಸುದೀಪ್ ರನ್ನ ಖುದ್ದಾಗಿ ಭೇಟಿ ಮಾಡಿದ್ದಾರೆ ಪುನೀತ್ ರಾಜ್ ಕುಮಾರ್.

ಕೆ.ಪಿ.ಶ್ರೀಕಾಂತ್ ಖುಷ್.!
ಇಬ್ಬರ ದೋಸ್ತಿಯನ್ನ ಕಂಡು ಶಿವರಾಜ್ ಕುಮಾರ್ ಗೆ ಆಪ್ತರಾಗಿರುವ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಫುಲ್ ಖುಷ್ ಆಗಿದ್ದಾರೆ. ನಾಯಕ ನಟರೆಲ್ಲರೂ ಹೀಗೆ ಒಟ್ಟಿಗೆ ಬಂದರೆ, ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಎನ್ನುತ್ತಾರೆ ಕೆ.ಪಿ.ಶ್ರೀಕಾಂತ್. [ಚಿತ್ರಗಳು: ಶಿವಣ್ಣನ ಮಗಳ ಆರತಕ್ಷತೆಯಲ್ಲಿ ಗಣ್ಯಾತಿಗಣ್ಯರ ದಂಡು]

ಸುದೀಪ್ ಮನೆಗೆ ಹೋಗಿ ಆಮಂತ್ರಣ ನೀಡಿದ್ದರು ಶಿವಣ್ಣ
ಎಲ್ಲಾ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟು, ಸುದೀಪ್ ಮನೆಗೆ ಸ್ವತಃ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ತೆರಳಿ ಮಗಳ ಮದುವೆಗೆ ಆಹ್ವಾನಿಸಿದ್ದರು. ಶಿವಣ್ಣನ ಸ್ನೇಹಕ್ಕೆ ಬೆಲೆಕೊಟ್ಟ ಸುದೀಪ್, ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ಮದುವೆಗೆ ಆಗಮಸಿದರು. [ಶಿವಣ್ಣನ ಮಗಳ ಮದುವೆಗೆ ಬಂದು ಆಶೀರ್ವದಿಸಿದ ಕಿಚ್ಚ]


Click it and Unblock the Notifications











