ವಾರೆವ್ಹಾ.. ಅಜಿತ್ ರೀತಿ ಕಾರ್ ರೇಸ್ ಅಖಾಡಕ್ಕೆ ಕಿಚ್ಚ ಸುದೀಪ್ ಎಂಟ್ರಿ?

ನಟ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅದರ ನಡುವೆ ಬಿಗ್‌ಬಾಸ್ ನಿರೂಪಕರಾಗಿ ಮುಂದುವರೆಯುತ್ತಿದ್ದಾರೆ. ಸೀಸನ್ 12ರ ಸಾರಥ್ಯ ಯಾರು ವಹಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು. ಅದಕ್ಕೆ ಈಗ ಬ್ರೇಕ್ ಬಿದ್ದಿದೆ. ಅಧಿಕೃತವಾಗಿ ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಇದೀಗ ಹೊಸ ಪ್ರಪಂಚಕ್ಕೆ ಸುದೀಪ್ ಎಂಟ್ರಿ ಕೊಡ್ತಾರೆ ಎನ್ನಲಾಗ್ತಿದೆ.

ಸಿನಿಮಾ ಬಿಟ್ರೆ ಕ್ರಿಕೆಟ್ ಅಂದರೆ ಕಿಚ್ಚನಿಗೆ ಅಚ್ಚುಮೆಚ್ಚು. ರಾಜ್‌ಕಪ್, ಸಿಸಿಎಲ್, ಕೆಸಿಸಿ ಹೀಗೆ ಎಲ್ಲಾ ತರಹದ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಗಳಲ್ಲಿ ಕಿಚ್ಚ ಭಾಗವಹಿಸಿದ್ದಾರೆ. ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಿರುವುದು ಇದೆ. ಸುದೀಪ್ ಸಕಲ ಕಲಾ ವಲ್ಲಭ. ನಟನೆ, ಗಾಯನ, ನಿರ್ದೇಶನ, ನಿರೂಪಣೆ, ಅಡುಗೆ ಮಾಡುವುದು ಹೀಗೆ ಸಾಕಷ್ಟು ಕಲೆಗಳನ್ನು ಸುದೀಪ್ ಒಲಿಸಿಕೊಂಡಿದ್ದಾರೆ. ಸಿನಿಮಾ, ಟಿವಿ, ಕ್ರಿಕೆಟ್ ಬಳಿಕ ಸುದೀಪ್ ಕಾರ್‌ ರೇಸ್ ಟ್ರ್ಯಾಕ್‌ಗೆ ಇಳಿಯುತ್ತಿದ್ದಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

Sudeep Returns as Bigg Boss Host Likely to Join Indian Racing Festival as Bengaluru Team Co-Owner

ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಾಡಿರುವ ಪೋಸ್ಟ್‌ವೊಂದು ಇಂತಹ ಚರ್ಚೆಗೆ ಕಾರಣವಾಗಿದೆ. ಶೀಘ್ರದಲ್ಲೇ ರೇಸಿಂಗ್ ಫೆಸ್ಟಿವಲ್ ನಡೆಯಲಿದೆ. ಕಳೆದ ಬಾಲಿವುಡ್ ನಟ ಅರ್ಜುನ್ ಕಪೂರ್(ಸ್ಪೀಡ್ ಡೆಮೊನ್ಸ್ ಡೆಲ್ಲಿ), ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ(ಕೊಲ್ಕತ್ತಾ ರಾಯಲ್ ಟೈಗರ್ಸ್), ತೆಲುಗು ನಟ ನಾಗಚೈತನ್ಯಾ(ಹೈದರಾಬಾದ್ ಬ್ಲ್ಯಾಕ್ ಬರ್ಡ್ಸ್) ಸಹ ಮಾಲೀಕರಾಗಿ ತಂಡಗಳನ್ನು ಬೆಂಬಲಿಸುತ್ತಿದ್ದಾರೆ. ಇದೀಗ ನಟ ಸುದೀಪ್ ಕೂಡ ಪ್ರತಿಷ್ಠಿತ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) 2025ರಲ್ಲಿ ಬೆಂಗಳೂರು ಫ್ರಾಂಚೈಸಿಯ ಹೊಸ ತಂಡದ ಸಹ ಮಾಲೀಕರಾಗಿ ಮೋಟಾರ್ ಸ್ಪೋರ್ಟ್ಸ್ ಜಗತ್ತಿಗೆ ಪ್ರವೇಶಿಸಲಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಮೊದಲ 2 ಟೂರ್ನಿಗಳಲ್ಲಿ 6 ತಂಡಗಳು ಭಾಗವಹಿಸಿದ್ದವು. ಕಳೆದ ವರ್ಷ 8 ತಂಡಗಳಾಗಿ ರೇಸ್ ನಡೆದಿತ್ತು. ಆಗಸ್ಟ್‌ನಿಂದ ನವೆಂಬರ್‌ವರೆಗೆ ನಡೆಯಲಿದೆ. ಸುದೀಪ್ ಎಂಟ್ರಿಯಿಂದ ಅವರ ಅಭಿಮಾನಿಗಳಿಗೂ ಈ ರೇಸ್ ಬಗ್ಗೆ ಕುತೂಹಲ ಮೂಡುವ ಸಾಧ್ಯತೆಯಿದೆ.

ರೇಸಿಂಗ್ ಫೆಸ್ಟಿವಲ್ ಕ್ರೇಜ್ ಹೆಚ್ಚಿಸಲು ಸೆಲೆಬ್ರೆಟಿಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಬಾರಿ ಬೆಂಗಳೂರಿನಲ್ಲಿ ಹವಾ ಎಬ್ಬಿಸಲು ಕಿಚ್ಚ ಸುದೀಪ್ ಬರುವ ನಿರೀಕ್ಷೆಯಿದೆ.

ಇದೆಲ್ಲದರ ನಡುವೆ ಸುದೀಪ್ ಬಿಗ್‌ಬಾಸ್ ಶೋಗೆ ಮತ್ತೆ ಮರಳಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ. ಸೀಸನ್ 11 ಮುಗಿಯುವ ಮುನ್ನ ಬಿಗ್‌ಬಾಸ್‌ಗೆ ಸುದೀಪ್ ಗುಡ್‌ಬೈ ಹೇಳಿದ್ದರು. ಇದೇ ಕೊನೆ, ನಾನು ಮತ್ತೆ ಶೋ ನಿರೂಪಣೆ ಮಾಡಲ್ಲ ಎಂದಿದ್ದರು. ಆದರೆ ಬಿಗ್‌ಬಾಸ್ ಆಯೋಜಕರು ಕಿಚ್ಚನ ಮನವೊಲಿಸುವಲ್ಲಿ ಸಫಲರಾಗಿದ್ದಾರೆ. ಹಾಗಾಗಿ ಸುದೀಪ್ ಮತ್ತೆ ಬಿಗ್‌ಬಾಸ್ ವೇದಿಕೆ ಏರಲು ಒಪ್ಪಿದ್ದಾರೆ. ಒಂದಲ್ಲ ಇನ್ನು 4 ಸೀಸನ್‌ಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಸಿನಿಮಾಗಳ ವಿಷಯಕ್ಕೆ ಬಂದರೆ ಸುದೀಪ್ ಸದ್ಯ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷದ ಕೊನೆಗೆ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ಇದೆ. ಇನ್ನು 'ಮ್ಯಾಕ್ಸ್' ನಿರ್ದೇಶಕ ವಿಜಯ್ ಕಾರ್ತಿಯೇಯನ್ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಪಕ್ಕಾ ಆಗಿದೆ. ಈ ವಾರವೇ ಆ ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತದೆ. ಸೆಪ್ಟೆಂಬರ್ ಅಂತ್ಯಕ್ಕೆ ಬಿಗ್‌ಬಾಸ್ ಸೀಸನ್ 12 ಆರಂಭವಾಗಲಿದೆ.

More from Filmibeat

English summary
Kiccha Sudeep returns to Bigg Boss for Season 12 after previously bidding farewell
Read more about: sudeep sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X