ಅಬ್ಬಾ..ಸದ್ಯ ಪುನೀತ್-ಸುದೀಪ್ ಗೆ ಕ್ಲ್ಯಾಷ್ ಆಗ್ತಿಲ್ಲ.!

By Suneetha

ಆತ್ಮೀಯ ಗೆಳೆಯರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಿಗ ಬಜೆಟ್ ನ ಸಿನಿಮಾಗಳಾದ 'ಕೋಟಿಗೊಬ್ಬ 2' ಮತ್ತು 'ದೊಡ್ಮನೆ ಹುಡುಗ' ಒಂದೇ ವಾರದಲ್ಲಿ ತೆರೆಕಂಡು ಬಾಕ್ಸಾಫೀಸ್ ನಲ್ಲಿ ಕ್ಲ್ಯಾಷ್ ಆಗುತ್ತೋ ಅಂತ ಅಭಿಮಾನಿಗಳು ಆತಂಕ ಪಟ್ಟಿದ್ದರು.

ಆದರೆ ಇದೀಗ ನಿರ್ದೇಶಕ ದುನಿಯಾ ಸೂರಿ ಅವರು 'ದೊಡ್ಮನೆ ಹುಡುಗ' ಚಿತ್ರದ ಬಿಡುಗಡೆ ಕಾರ್ಯಕ್ರಮವನ್ನು ಪೋಸ್ಟ್ ಪೋನ್ ಮಾಡುವ ಮೂಲಕ ಅಭಿಮಾನಿಗಳು ನಿರಾಳವಾಗಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.['ದೊಡ್ಮನೆ ಹುಡುಗ'ನಿಗೆ 'ಕೋಟಿಗೊಬ್ಬನ' ಸವಾಲ್.?]

Sudeep's 'Kotigobba 2' and Puneeth's 'Dodmane Huduga' not clashing

ಆಗಸ್ಟ್ 11 ಕ್ಕೆ 'ದೊಡ್ಮನೆ ಹುಡುಗ' ಚಿತ್ರವನ್ನು ತೆರೆಗೆ ತರುತ್ತೇವೆ ಎಂದಿದ್ದ ನಿರ್ದೇಶಕ ಸೂರಿ ಅವರು ಇದೀಗ, ಆ ವಾರದಲ್ಲಿ ಸಿನಿಮಾ ತೆರೆಗೆ ಬರೋದು ಕಷ್ಟ. ಇನ್ನೂ ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರೋದ್ರಿಂದ ಆತುರಾತುರವಾಗಿ ತೆರೆಗೆ ತಂದರೆ ಚೆನ್ನಾಗಿರೋಲ್ಲ ಎಂದಿದ್ದಾರೆ.

ಮಾತ್ರವಲ್ಲದೇ ರೆಬೆಲ್ ಸ್ಟಾರ್ ಅಂಬರೀಶ್ ಅವರ ಭಾಗದ ಕೆಲವು ಕೆಲಸಗಳು ಬಾಕಿ ಇವೆ. ಅದನ್ನು ಮುಗಿಸಲು ಕೆಲವು ವಾರ ತೆಗೆದುಕೊಳ್ಳಬಹುದು, ಆದ್ದರಿಂದ ಚಿತ್ರ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ.[ಸುದೀಪ್ ಅಸಾಧಾರಣ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದವರಾರು.?]

Sudeep's 'Kotigobba 2' and Puneeth's 'Dodmane Huduga' not clashing

ಅಂತೂ ಇದೀಗ ಸ್ಟಾರ್ ನಟರ ನಡುವೆ ಬಿಗ್ ಫೈಟ್ ನಡೆಯುತ್ತದೆ ಎಂದು ಅಭಿಮಾನಿಗಳಿದ್ದ ಅನುಮಾನ ದೂರವಾಗಿದ್ದು, ಮೊದಲು ಸುದೀಪ್ ಅವರ 'ಕೋಟಿಗೊಬ್ಬ 2' ಅಂದುಕೊಂಡ ದಿನಾಂಕಕ್ಕೆ ತೆರೆ ಕಾಣುವ ಸಾಧ್ಯತೆ ಹೆಚ್ಚಾಗಿದೆ.

Sudeep's 'Kotigobba 2' and Puneeth's 'Dodmane Huduga' not clashing

ನಿರ್ದೇಶಕ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳಿರುವ 'ಕೋಟಿಗೊಬ್ಬ 2' ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದ್ದು, ತಮಿಳು ವರ್ಷನ್ ಆಡಿಯೋ ಮತ್ತು ಟ್ರೈಲರ್ ಈಗಾಗಲೇ ಬಿಡುಗಡೆ ಆಗಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಆಗಸ್ಟ್ 12, ವರಮಹಾಲಕ್ಷ್ಮಿ ಹಬ್ಬದಂದು 'ಕೋಟಿಗೊಬ್ಬ 2' ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಸೂರಪ್ಪ ಬಾಬು ಯೋಜನೆ ಹಾಕಿಕೊಂಡಿದ್ದಾರೆ.[ಟ್ರೈಲರ್: ಅಭಿಮಾನಿಗಳ ಕುತೂಹಲಕ್ಕೆ ಕಿಚ್ಚು ಹಚ್ಚಿದ ಕಿಚ್ಚ]

ಒಟ್ನಲ್ಲಿ ಸುದೀಪ್-ಪುನೀತ್ ಅಭಿಮಾನಿಗಳಿಗೆ ಮೊದಲು 'ಕೋಟಿಗೊಬ್ಬ'ನ ದರ್ಶನ ಆಗಲಿದ್ದು, ತದನಂತರ 'ದೊಡ್ಮನೆ ಹುಡುಗ'ನ ದರ್ಶನ ಭಾಗ್ಯ ದೊರೆಯಲಿದೆ.

More from Filmibeat

English summary
The clash of two big Kannada films; Sudeep's 'Kotigobba 2' and Puneeth's 'Dodmane Hudga', at the box office is not going to happen. Duniya Soori the director of 'Dodmane Hudga' confirmed that it will not be possible to release the film on August 12 as a lot of post production work is pending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X