For Quick Alerts
  ALLOW NOTIFICATIONS  
  For Daily Alerts

  'ದಬಾಂಗ್' ಬಳಿಕ ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಸುದೀಪ್ ವಿಲನ್!

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸಿನಿಮಾದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ದಬಾಂಗ್ 3 ತೆರೆಕಾಣುತ್ತಿದ್ದು, ಭಾರಿ ನಿರೀಕ್ಷೆ ಹುಟ್ಟಿಸಿದೆ.

  ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಸುದೀಪ್ ದಬಾಂಗ್ ಚಿತ್ರದಲ್ಲಿ ವಿಲನ್ ಆಗಿರುವುದು ಈ ಚಿತ್ರಕ್ಕೆ ಧಮ್ ಹೆಚ್ಚಿಸಿದೆ. ಸ್ವತಃ ಸಲ್ಮಾನ್ ಖಾನ್ ಕೂಡ ಈ ಅಂಶವನ್ನ ಒಪ್ಪಿಕೊಂಡಿದ್ದಾರೆ.

  ಬೆಂಗಳೂರಲ್ಲೂ ಸಲ್ಮಾನ್ ಗೆ ಕಾಡಿತು ಕಿರಿಕಿರಿ ಉಂಟು ಮಾಡುವ 'ಆ ಪ್ರಶ್ನೆ'!ಬೆಂಗಳೂರಲ್ಲೂ ಸಲ್ಮಾನ್ ಗೆ ಕಾಡಿತು ಕಿರಿಕಿರಿ ಉಂಟು ಮಾಡುವ 'ಆ ಪ್ರಶ್ನೆ'!

  ಇದೀಗ, ದಬಾಂಗ್ ಬಳಿಕ ಮತ್ತೊಂದು ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದು ಆ ಚಿತ್ರ? ಮುಂದೆ ಓದಿ...

  ಸಿಂಬು ಚಿತ್ರಕ್ಕೆ ಸುದೀಪ್ ವಿಲನ್!

  ಸಿಂಬು ಚಿತ್ರಕ್ಕೆ ಸುದೀಪ್ ವಿಲನ್!

  ಕಾವೇರಿ ವಿವಾದದ ಸಂದರ್ಭದಲ್ಲಿ ಉತ್ತಮ ನಿರ್ಧಾರ ಘೋಷಿಸಿ ಕರ್ನಾಟಕದ ಗಮನ ಸೆಳೆದಿದ್ದ ತಮಿಳು ನಟ ಸಿಂಬು ಅವರ ಮುಂದಿನ ಚಿತ್ರದಲ್ಲಿ, ಕನ್ನಡ ನಟ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಕುರಿತು ಮಾತುಕತೆ ಮುಗಿದಿದ್ದು, ಅಧಿಕೃತವಾಗಿ ಪ್ರಕಟಿಸಬೇಕಾಗಿದೆ ಎನ್ನಲಾಗಿದೆ.

  'ಪುಲಿ' ಬಳಿಕ ಮತ್ತೊಂದು ಚಿತ್ರ

  'ಪುಲಿ' ಬಳಿಕ ಮತ್ತೊಂದು ಚಿತ್ರ

  ಈ ಹಿಂದೆ ಇಳಯದಳಪತಿ ವಿಜಯ್ ನಟಿಸಿದ್ದ ಪುಲಿ ಸಿನಿಮಾದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಅದಾದ ಬಳಿಕ ಈಗ ಮತ್ತೊಂದು ತಮಿಳು ಚಿತ್ರದಲ್ಲಿ ಪೂರ್ಣ ಪ್ರಮಾಣದ ವಿಲನ್ ಆಗಿ ನಟಿಸುವ ಆಫರ್ ಬಂದಿದೆಯಂತೆ. ಆದರೆ, ಇದು ಅಧಿಕೃತವಾಗದೆ ಇರುವುದು ಕುತೂಹಲ ಮೂಡಿಸಿದೆ.

  ಸುದೀಪ್-ಸಮಂತಾ ಕುರಿತು ಅಚ್ಚರಿ ಸುದ್ದಿ: ನಿಜ ಆದ್ರೆ ಫ್ಯಾನ್ಸ್ ಫುಲ್ ಖುಷ್ಸುದೀಪ್-ಸಮಂತಾ ಕುರಿತು ಅಚ್ಚರಿ ಸುದ್ದಿ: ನಿಜ ಆದ್ರೆ ಫ್ಯಾನ್ಸ್ ಫುಲ್ ಖುಷ್

  ಸುದೀಪ್ ಮಾಡ್ತಾರಾ?

  ಸುದೀಪ್ ಮಾಡ್ತಾರಾ?

  ಸಲ್ಮಾನ್ ಖಾನ್ ದಬಾಂಗ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ, ಎಲ್ಲರ ಗಮನ ಸೆಳೆಯುತ್ತಿರುವ ಸುದೀಪ್, ಸಿಂಬು ಚಿತ್ರದಲ್ಲಿ ಖಳನಾಯಕನಾಗಲು ಗ್ರೀನ್ ಸಿಗ್ನಲ್ ಕೊಡ್ತಾರಾ ಎನ್ನುವುದು ಸದ್ಯಕ್ಕೆ ಅನುಮಾನ. ಆದರೆ, ತಮಿಳು ಚಿತ್ರರಂಗದಲ್ಲಿ ಇಂತಹದೊಂದು ಸುದ್ದಿ ಮಾತ್ರ ಸದ್ದು ಮಾಡ್ತಿದೆ.

  ಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟಸುದೀಪ್ 'ಫ್ಯಾಂಟಮ್' ಸಿನಿಮಾಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಖ್ಯಾತ ನಟ

  ಕೋಟಿಗೊಬ್ಬ-3 ಮಾಡಬೇಕಿದೆ

  ಕೋಟಿಗೊಬ್ಬ-3 ಮಾಡಬೇಕಿದೆ

  ದಬಾಂಗ್ ಸಿನಿಮಾ ರಿಲೀಸ್ ಆದ ಬಳಿಕ ಕೋಟಿಗೊಬ್ಬ 3 ಸಿನಿಮಾ ಮುಗಿಸಲಿದ್ದಾರೆ. ಈ ನಡುವೆ ಅನೂಪ್ ಭಂಡಾರಿ ಜೊತೆ ಫ್ಯಾಂಟಮ್ ಎಂಬ ಸಿನಿಮಾ ಘೋಷಿಸಿದ್ದಾರೆ. ಅದಾದ ಮೇಲೆ ಬಿಲ್ಲಾ ರಂಗ ಬಾದ್ ಶಾ ಚಿತ್ರ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಜೊತೆಯಲ್ಲೂ ಒಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.

  English summary
  Kannada Super star Kiccha sudeep set to play negative role in Idhu Namma Aalu actor Simbu's new movie?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X