ಬಿಗ್ ಬಾಸ್ ಶಶಿ ಡಬಲ್ ಗೇಮ್ : ಬೈದವನನ್ನು ಬಂಧು ಎಂದ ಸುದೀಪ್!

Recommended Video

Bigg Boss Kannada Season 6: ಬಿಗ್ ಬಾಸ್ ಶಶಿ ಡಬಲ್ ಗೇಮ್ : ಬೈದವನನ್ನು ಬಂಧು ಎಂದ ಸುದೀಪ್!

ಕೆಲ ದಿನಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಒಂದು ಗಾಸಿಪ್ ಹರಿದಾಡಿತ್ತು. ನಟ ಸುದೀಪ್ ಬಗ್ಗೆ ಬಿಗ್ ಬಾಸ್ ಆರರ ವಿಜೇತ ಶಶಿ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಆರೋಪ ಇತ್ತು. ಈ ವಿಷಯದ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ರನ್ನು 'ನೀವೇ ನನ್ನ ಸ್ಫೂರ್ತಿ... ಸರ್ ನೀವು ಸೂಪರ್..' ಎಂದೆಲ್ಲ ತರ ತರವಾಗಿ ಹೊಗಳಿದ್ದ ಶಶಿ ಈಗ ವರಸೆ ಬದಲಿಸಿದ್ದಾನೆ. ಕುಡಿತ ಮತ್ತಿನಲ್ಲಿ ಶಶಿ ನಟ ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಲೇಖನವೊಂದು ಪ್ರಕಟ ಆಗಿತ್ತು.

ಈ ವಿಷಯ ಸುದ್ದಿಯಾದರೂ, ಸುದೀಪ್ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇತ್ತೀಚಿಗೆ ಟಿವಿ 5 ಸುದ್ದಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಈ ವಿಚಾರವಾಗಿ ಸುದೀಪ್ ಮಾತನಾಡಿದ್ದಾರೆ....

ಪ್ರತಿಕ್ರಿಯೆ ನೀಡಿದರೆ ಅನಾಹುತ ಆಗುತ್ತದೆ

ಪ್ರತಿಕ್ರಿಯೆ ನೀಡಿದರೆ ಅನಾಹುತ ಆಗುತ್ತದೆ

ಬಿಗ್ ಬಾಸ್ ಶಶಿ ವಿವಾದದ ವಿಷಯವಾಗಿ ಸುದೀಪ್ ಮಾತನಾಡಿದ್ದಾರೆ. ಇಷ್ಟು ದಿನ ಪ್ರತಿಕ್ರಿಯೆ ನೀಡದೆ ಇರುವ ಕಾರಣವನ್ನು ಹೇಳಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರೆ ಅನಾಹುತ ಆಗುತ್ತದೆ ಎಂಬ ಕಾರಣಕ್ಕೆ ಕಿಚ್ಚ ಇಷ್ಟು ದಿನ ಸುಮ್ಮನೆ ಇದ್ದರಂತೆ.

ವಿಷಯ ಏಕೆ ದೊಡ್ಡದು ಮಾಡಬೇಕು ?

ವಿಷಯ ಏಕೆ ದೊಡ್ಡದು ಮಾಡಬೇಕು ?

''ಅವರು ಚೆನ್ನಾಗಿ ಇರಬೇಕು.. ಬಾಳಿ ಬದುಕಬೇಕು.. ಎಂಬ ಕಾರಣಕ್ಕೆ ಈ ವಿಷಯವನ್ನು ದೊಡ್ಡದು ಮಾಡಲಿಲ್ಲ, ಏಕೆ ಸುಮ್ಮನೆ ಇಂತಹ ಸಂಗತಿಗಳನ್ನು ದೊಡ್ಡದು ಮಾಡಬೇಕು?'' ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಶಶಿ ಏನೇ ಹೇಳಿದ್ದರೂ, ಅವರು ಚೆನ್ನಾಗಿ ಇರಲಿ.. ಇನ್ನು ಬೆಳೆಯಲಿ ಎಂದು ಸುದೀಪ್ ಶುಭ ಹಾರೈಸಿದ್ದಾರೆ.

ನಮ್ಮನ್ನು ಪ್ರೀತಿಸುವವರು ಸುಮ್ಮನೆ ಇರವುದಿಲ್ಲ

ನಮ್ಮನ್ನು ಪ್ರೀತಿಸುವವರು ಸುಮ್ಮನೆ ಇರವುದಿಲ್ಲ

ಸುದೀಪ್ ಬಗ್ಗೆ ಏನೇ ಸಣ್ಣ ಪುಟ್ಟ ವಿಷಯಗಳ ಬಂದರೂ ಅವರ ಅಭಿಮಾನಿಗಳು ತೊಡೆ ತಟ್ಟಿ ನಿಲ್ಲುತ್ತಾರೆ. ಹೀಗಿರುವಾಗ, ಶಶಿ ವಿಷಯ ತಿಳಿದಿದ್ದರೆ, ಅದರ ಪರಿಣಾಮ ಏನಾಗಬೇಕು. ಶಶಿ ಮಾಡಿದ ಕೆಲಸ ತಿಳಿದರೆ, ತಮ್ಮನ್ನು ಪ್ರೀತಿಸುವವರು ಸುಮ್ಮನೆ ಇರವುದಿಲ್ಲ ಎಂದು ಸುದೀಪ್ ಈ ಘಟನೆಯನ್ನು ಬಹಿರಂಗ ಪಡಿಸಿರಲಿಲ್ಲವಂತೆ.

ನಾಯಿ ತನ್ನ ಬುದ್ದಿ ತೋರಿಸುತ್ತದೆ

ನಾಯಿ ತನ್ನ ಬುದ್ದಿ ತೋರಿಸುತ್ತದೆ

''ನಾಯಿ ಕಾಲೆತ್ತಿ ಕಲ್ಲಿನ ಮೇಲೆ ಉಚ್ಚೆ ಮಾಡಿದರೆ, ಕಲ್ಲಿನ ತೂಕ ಕಡಿಮೆ ಆಗುವುದಿಲ್ಲ. ನಾಯಿ ತನ್ನ ಬುದ್ದಿ ತೋರಿಸುತ್ತದೆ... ಕಲ್ಲು ಒಣಗಿದ ಮೇಲೆ ತನ್ನ ವ್ಯಕ್ತಿತ್ವ ತೋರಿಸುತ್ತದೆ...'' ಎಂದು ಶಶಿಗೆ ತಮ್ಮ ಕಟುವಾದ ಮಾತಿನ ಮೂಲಕವೇ ಪೆಟ್ಟು ಕೊಟ್ಟಿದ್ದಾರೆ ಸುದೀಪ್. ಡಬಲ್ ಗೇಮ್ ಮಾಡಿದ ಶಶಿಗೆ ಕಿಚ್ಚ ಈ ರೀತಿ ಮಂಗಳಾರತಿ ಮಾಡಿದ್ದಾರೆ.

ಏನಿದು ಘಟನೆ..? ಹಿಂದೆ ಏನಾಗಿತ್ತು..?

ಏನಿದು ಘಟನೆ..? ಹಿಂದೆ ಏನಾಗಿತ್ತು..?

ಬಿಗ್ ಬಾಸ್ ಆರರ ಸ್ಪರ್ಧಿ ನಯನ ಮನೆಯಲ್ಲಿ ಒಂದು ಪಾರ್ಟಿ ಏರ್ಪಾಡು ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಸುದೀಪ್ ಬಗ್ಗೆ ಶಶಿ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದ. ಅಲ್ಲಿದ್ದ ಯಾರೋ ಶಶಿಗೆ ತಿಳಿಯದ ಹಾಗೆ, ವಿಡಿಯೋ ಮಾಡಿದ್ದರು.... ಆ ವಿಡಿಯೋ ನೇರವಾಗಿ ಸುದೀಪ್ ಮೊಬೈಲ್ ತಲುಪಿತ್ತು.

ಎಚ್ಚರಿಕೆ ನೀಡಿ ಸುಮ್ಮನಾದ ಸುದೀಪ್

ಎಚ್ಚರಿಕೆ ನೀಡಿ ಸುಮ್ಮನಾದ ಸುದೀಪ್

ಶಶಿ ಮಾತನಾಡಿದ ವಿಡಿಯೋ ನೋಡಿದ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಆ ವಿಡಿಯೋವನ್ನು ಎಲ್ಲಿಯೂ ಬಹಿರಂಗ ಆಗದೆ ಇರುವ ಹಾಗೆ ನೋಡಿಕೊಂಡಿದ್ದಾರೆ. ಸುದೀಪ್ ಗೆ ವಿಷಯ ತಿಳಿದಿದೆ ಎಂದಾಗ ಬೆಣ್ಣೆ ಸವರಲು ಶಶಿ ಪ್ರಯತ್ನ ಮಾಡಿದರೂ, ಸುದೀಪ್ ಅವಕ್ಕೆ ಅವಕಾಶ ನೀಡಿಲ್ಲ.

More from Filmibeat

English summary
Kannada actor Sudeep spoke about Bigg Boss kannada 6 winner Shashi controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X