ತೆಲುಗು ಸಿನಿಮಾದಲ್ಲಿ ಸುದೀಪ್: ವಿಜಯ್ ಸೇತುಪತಿ ಜೊತೆ ಜುಗಲ್‌ಬಂಧಿ

'ವಿಕ್ರಾಂತ್ ರೋಣ' ಸಿನಿಮಾ ಹಿಟ್ ಆದ ಬಳಿಕ ಸುದೀಪ್ ಮುಂದಿನ ನಡೆ ಏನಾಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಈ ನಡುವೆ ಇನ್ಯಾವ ಸಿನಿಮಾವನ್ನು ಸುದೀಪ್ ಒಪ್ಪಿಕೊಳ್ಳಬಹುದು ಎಂಬ ಕುತೂಹಲ ಸಹಜವಾಗಿದೆ. 'ವಿಕ್ರಾಂತ್ ರೋಣ' ನಿರ್ದೇಶಕ ಅನುಪ್ ಭಂಡಾರಿ ನಿರ್ದೇಶಿಸಲಿರುವ 'ಬಿಲ್ಲ ರಂಗ ಭಾಷಾ' ಸಿನಿಮಾವನ್ನು ಘೋಷಿಸಿದ್ದಾರಾದರೂ ಈ ಸಿನಿಮಾ ಸೆಟ್ಟೇರುವುದು ತುಸು ತಡ. ಇದಕ್ಕೆ ಉತ್ತರ ದೊರಕಿದೆ. ಸುದೀಪ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ವಿಶೇಷವೆಂದರೆ ಬಹಳ ದಿನಗಳ ಬಳಿಕ ಸುದೀಪ್ ತೆಲುಗು ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ನಾಯಕನಾಗಿ ಅವರು ಹೊಸ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ 'ರಾಕ್ಷಸುಡು' ಸಿನಿಮಾದ ಎರಡನೇ ಭಾಗ ರೆಡಿಯಾಗುತ್ತಿದ್ದು, ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 2019 ರಲ್ಲಿ ಬಿಡುಗಡೆ ಆಗಿದ್ದ 'ರಾಕ್ಷಸುಡು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ಸಿನಿಮಾದ ಎರಡನೇ ಭಾಗ ತಯಾರಾಗುತ್ತಿದ್ದು, ಮುಖ್ಯ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ನಾಯಕಿ ಯಾರು?

ನಾಯಕಿ ಯಾರು?

'ರಾಕ್ಷಸುಡು' ಸಿನಿಮಾ ನಿರ್ದೇಶನ ಮಾಡಿದ್ದ ರಮೇಶ್ ವರ್ಮಾ ಅವರೇ 'ರಾಕ್ಷಸುಡು 2 ' ಸಿನಿಮಾ ನಿರ್ದೇಶಿಸಲಿದ್ದು ಸಿನಿಮಾಕ್ಕಾಗಿ ಸೂಕ್ತ ನಾಯಕನ ಹುಡುಕಾಡದಲ್ಲಿದ್ದರು. ಸುದೀಪ್‌ಗೆ ಈ ಚಿತ್ರಕತೆ ಇಷ್ಟವಾದ ಕಾರಣ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಸಿನಿಮಾದಲ್ಲಿ ಸುದೀಪ್‌ ಜೊತೆಗೆ ಮಾಳವಿಕಾ ಮೋಹನನ್ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ವಿಲನ್ ಪಾತ್ರಕ್ಕೂ ಭರ್ಜರಿ ನಟನನ್ನೇ ರಮೇಶ್ ವರ್ಮಾ ಕರೆತಂದಿದ್ದಾರೆ.

ವಿಜಯ್ ಸೇತುಪತಿ ವಿಲನ್

ವಿಜಯ್ ಸೇತುಪತಿ ವಿಲನ್

ಸಿನಿಮಾದ ವಿಲನ್ ಪಾತ್ರಕ್ಕೆ ವಿಜಯ್ ಸೇತುಪತಿಯನ್ನು ರಮೇಶ್ ವರ್ಮಾ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. 'ರಾಕ್ಷಸುಡು' ಸಿನಿಮಾ ಹೀರೋ ಮತ್ತು ವಿಲನ್ ನಡುವಿನ ಕಠಿಣ ಸ್ಪರ್ಧೆಯುಳ್ಳ ಸಿನಿಮಾ ಆಗಿದ್ದು, ಹೀರೋ ಮತ್ತು ವಿಲನ್ ಇಬ್ಬರಿಗೂ ದೊಡ್ಡ ಮಟ್ಟದ ಸ್ಕೋಪ್ ಇರುವ ರೀತಿಯ ಸಿನಿಮಾ 'ರಾಕ್ಷಸುಡು' ಹಾಗಾಗಿ ಈ ಸಿನಿಮಾಕ್ಕೆ ಸಹ ಪವರ್‌ಫುಲ್ ವಿಲನ್ ಅನ್ನೇ ರಮೇಶ್ ವರ್ಮಾ ಕರೆತರುತ್ತಿದ್ದಾರೆ.

ವೆಂಕಟ್ ಪ್ರಭು ಜೊತೆ ಹೊಸ ಸಿನಿಮಾ

ವೆಂಕಟ್ ಪ್ರಭು ಜೊತೆ ಹೊಸ ಸಿನಿಮಾ

ಸುದೀಪ್ ಪ್ರಸ್ತುತ 'ವಿಕ್ರಾಂತ್ ರೋಣ' ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. 'ರಾಕ್ಷಸುಡು' ಸಿನಿಮಾಕ್ಕೆ ಮುನ್ನ ತಮಿಳಿನ ಮತ್ತೊಬ್ಬ ನಿರ್ದೇಶಕನ ಜೊತೆ ಸುದೀಪ್ ಸಿನಿಮಾ ಮಾಡಲಿದ್ದಾರೆ. 'ಗೋವಾ', 'ಮಂಕಾತ್ತ', 'ಮಾನಾಡು' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನೀಡಿರುವ ವೆಂಕಟ್ ಪ್ರಭು ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ. ವೆಂಕಟ್ ಪ್ರಭು ಪ್ರಸ್ತುತ ನಾಗ ಚೈತನ್ಯ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆ ಸಿನಿಮಾದ ಬಳಿಕ ಸುದೀಪ್‌ಗೆ ಸಿನಿಮಾ ಮಾಡಲಿದ್ದಾರೆ.

ಎರಡು ಸಿನಿಮಾ ಬಳಿಕ 'ಬಿಲ್ಲ ರಂಗ ಭಾಷಾ'

ಎರಡು ಸಿನಿಮಾ ಬಳಿಕ 'ಬಿಲ್ಲ ರಂಗ ಭಾಷಾ'

ತೆಲುಗಿನ 'ರಾಕ್ಷಸುಡು' ಸಿನಿಮಾ ತಮಿಳುನ 'ರಾಚ್ಚಸನ್' ಸಿನಿಮಾದ ರೀಮೇಕ್ ಆಗಿತ್ತು. ಆದರೆ ಈಗ 'ರಾಕ್ಷಸುಡು 2' ಸಿನಿಮಾವನ್ನು ಮೊದಲ ಸಿನಿಮಾಕ್ಕಿಂತಲೂ ಭಿನ್ನವಾಗಿ ನಿರ್ಮಿಸಲಾಗುತ್ತಿದೆ. ಮೊದಲ ಸಿನಿಮಾ ರೀಮೇಕ್ ಆಗಿದ್ದರೂ 'ರಾಕ್ಷಸುಡು 2' ಸ್ವಮೇಕ್ ಆಗಿರಲಿದೆ ಎನ್ನಲಾಗುತ್ತಿದೆ. ವೆಂಕಟ್ ಪ್ರಭು ಸಿನಿಮಾ ಹಾಗೂ 'ರಾಕ್ಷಸುಡು 2' ಬಳಿಕ ಸುದೀಪ್ ನಟನೆಯ 'ಬಿಲ್ಲಾ ರಂಗ ಭಾಷಾ' ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

Recommended Video

Dhananjay | ಕಾಳೇನಹಳ್ಳಿ ಧನಂಜಯ ನಟರಾಕ್ಷಸ ಆಗಿದ್ಹೇಗೆ..? | Head Bush | Filmibeat Kannada

More from Filmibeat

English summary
Kannada star actor Sudeep to act with Vijay Sethupathi in a Telugu movie. It will be sequel of Telugu movie Rakshasudu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X