ಚಿರಂಜೀವಿ 151ನೇ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ!
ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151ನೇ ಚಿತ್ರ 'ಉಯ್ಯಾಲವಾಡ ನರಸಿಂಹ' ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದ್ರೆ, ಈ ಸುದ್ದಿಯನ್ನ ಚಿತ್ರತಂಡ ತಳ್ಳಿ ಹಾಕಿದೆ.
ಚಿರಂಜೀವಿಯ ಮುಂದಿನ ಸಿನಿಮಾ ಸ್ವತಂತ್ರ ಹೋರಾಟಗಾರನ ಕಥೆಯಾಗಿದ್ದು, ಈ ಚಿತ್ರದಲ್ಲಿ ಕನ್ನಡದ ಸುದೀಪ್ ಪಾಳೇಗಾರನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಚಿತ್ರತಂಡ ನಿರಾಸೆ ಮೂಡಿಸಿದೆ.

ಹೌದು, ತೆಲುಗು ಮಾಧ್ಯಮಗಳ ವರದಿ ಪ್ರಕಾರ ಚಿರು-151ನೇ ಚಿತ್ರಕ್ಕೆ ಕಲಾವಿದರು ಆಯ್ಕೆ ಆಗಿಲ್ಲವಂತೆ. ಕನ್ನಡದ ಸುದೀಪ್, ತಮಿಳಿನ ಶಿವಕಾರ್ತಿಕೇಯನ್ ಮತ್ತು ಹಿಂದಿಯ ಅಮಿತಾಬ್ ಬಚ್ಚನ್ ಅವರಿಗೂ ಈ ಚಿತ್ರದಲ್ಲಿ ನಟಿಸಲು ಆಫರ್ ಮಾಡಲಾಗಿದೆ ಎನ್ನಲಾಗಿತ್ತು.
ಆದ್ರೆ, ಚಿತ್ರತಂಡ ಹೇಳಿರುವ ಪ್ರಕಾರ ''ಅಮಿತಾಬ್ ಬಚ್ಚನ್ ಅವರಿಗೆ ಈ ಚಿತ್ರದಲ್ಲಿ ನಟಿಸಲು ಆಫರ್ ಮಾಡಲಾಗಿದೆ. ಬಟ್, ಸುದೀಪ್ ಮತ್ತು ಶಿವಕಾರ್ತಿಕೇಯನ್ ಅವರಿಗೆ ಮಾಡಿಲ್ಲ. ಇದು ಕೇವಲ ಗಾಸಿಪ್ ಅಷ್ಟೇ ಎಂದಿದ್ದಾರಂತೆ. ಉಳಿದಂತೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಅಕ್ಟೋಬರ್ ನಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರಂತೆ.


Click it and Unblock the Notifications











