»   » ‘ ಶುರುವಿನಲ್ಲೇ ಸುಧಾ ಮದುವೆ ಕ್ಲೈಮ್ಯಾಕ್ಸ್‌ ಗೊತ್ತಿತ್ತು ’

‘ ಶುರುವಿನಲ್ಲೇ ಸುಧಾ ಮದುವೆ ಕ್ಲೈಮ್ಯಾಕ್ಸ್‌ ಗೊತ್ತಿತ್ತು ’

Subscribe to Filmibeat Kannada

ಇದು ಹೀಗೇ ಕೊನೆಯಾಗುತ್ತೆ ಎಂದು ಅಂದೇ ಅಂದುಕೊಂಡಿದ್ದೆ !

ಸುಧಾರಾಣಿಯವರ ಮರು ಮದುವೆ ಕುರಿತು ಹರಿದು ಬರುತ್ತಿರುವ ಅನ್ನಿಸಿಕೆಗಳಲ್ಲಿ ಗಮನ ಸೆಳೆಯುವಂಥಾ ಅಭಿಪ್ರಾಯ ಇಲ್ಲಿದೆ. ಸುಧಾರಾಣಿ ಹಾಗೂ ಡಾ. ಸಂಜಯ್‌ರ ವೈವಾಹಿಕ ಜೀವನ ಸೋಡಾ ಚೀಟಿಯಲ್ಲೇ ಕೊನೆಯಾಗುತ್ತದೆಂದು ಅವರು ಮದುವೆಯಾದಾಗಲೇ ನಾನು ನಿರೀಕ್ಷಿಸಿದ್ದೆ ಎಂದು ಸ್ವಾಮಿ ಬಾಳೆ ಬರೆದಿದ್ದಾರೆ. ಅವರ ಅನ್ನಿಸಿಕೆಗಳು ಅಮೆರಿಕದ ಹುಡುಗನ ಕುರಿತು ಕನಸು ಕಾಣುವ ಹುಡುಗಿಯರಿಗೆ ವಾಸ್ತವವನ್ನು ಕುರಿತ ಪಾಠವಾಗಲೂಬಹುದು.

ಅಮೆರಿಕ ಕನಸಲ್ಲ . ಮಸಾಲೆ ದೋಸೆ, ಬೈಟು ಕಾಫಿ, ಗೆಳೆಯರೊಂದಿಗೆ ಹರಟೆಯಂಥಾ ಕನಸುಗಳಲ್ಲಿ ಗಿಟ್ಟುವುದಿಲ್ಲ . ಅದೊಂದು ಯಾಂತ್ರಿಕ ಜಗತ್ತು . ಭಾವನೆಗಳಿಲ್ಲದ ವಿಶ್ವ ಅಂದರೂ ಸರಿಯೇ. ಇಂಥಾ ಸ್ಥಳದಲ್ಲಿ ಕನಸುಗಳನ್ನು ಕಟ್ಟಿಕೊಂಡು ಬರುವ ಹುಡುಗಿಗೆ ನಿರಾಶೆಯಾಗುವುದು ಖಂಡಿತ ಎಂದು ಸುಧಾರಾಣಿಯವರ ವಿವಾಹ ವೈಫಲ್ಯಕ್ಕೆ ಅವರು ಕಾರಣಗಳನ್ನು ವಿಶ್ಲೇಷಿಸಿದ್ದಾರೆ.

ಅಮೆರಿಕದಲ್ಲಿ ರಸ ರಹಿತ ಜೀವನವನ್ನು ನಡೆಸುವುದು ಸುಧಾರಾಣಿ ಅವರಿಗೆ ಕಷ್ಟವಾಗಿರುವುದು ತೀರಾ ಸಹಜ .ಅಮೆರಿಕದಲ್ಲೇ ಹುಟ್ಟಿ ಬೆಳೆದ ವೈದ್ಯ ಸಂಜಯ್‌ ಅವರನ್ನು ಹೊಂದಿಕೊಳ್ಳುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರಿಗೆ ಸೋಡಾಚೀಟಿ ಹೊರತು ಬೇರೆ ಆಯ್ಕೆಯಿರಲಿಲ್ಲ .

ಸುಧಾರಾಣಿ/ಸಂಜಯ್‌ರ ವಿವಾಹ ವೈಫಲ್ಯದ ಬಗ್ಗೆ ನನಗೆ ವಿಷಾದವಿದೆ. ಅದೇನೇ ಇದ್ದರೂ, ನಟನೆಯನ್ನು ತೊರೆದು ಅಮೆರಿಕದಲ್ಲೇ ಉಳಿಯುವ ತಪ್ಪು ಆಯ್ಕೆಯ ಬದಲು ಸುಧಾರಾಣಿ ಕೊನೆಗೂ ತಮ್ಮ ಜೀವನಕ್ಕೆ ಸರಿಯಾದ ದಿಕ್ಕನ್ನೇ ಕಂಡುಕೊಂಡಿದ್ದಾರೆ. ಮುಂದಿನ ಬೆಂಗಳೂರಿನಲ್ಲಿನ ಅವರ ಜೀವನ, ಸಿನಿಮಾ ಭವಿಷ್ಯ ಸಂತೋಷಕರವಾಗಿರಲಿ ಎಂದು ಸ್ವಾಮಿ ಬಾಳೆ ಹಾರೈಸಿದ್ದಾರೆ.

ಅಮೆರಿಕದ ಹುಡುಗನನ್ನು ಮದುವೆಯಾಗಿ ಅಲ್ಲಿಗೆ ಹಾರುವ ಕನಸು ಹೊತ್ತ ನಮ್ಮ ಬಹುತೇಕ ಹುಡುಗಿಯರದು ನುಣ್ಣಗಿನ ದೂರದ ಬೆಟ್ಟ ದ ಭ್ರಮೆ. ಅಂದಮಾತ್ರಕ್ಕೆ ಅಮೆರಿಕದ ಹುಡುಗನನ್ನು ಬಯಸುವುದು ತಪ್ಪಲ್ಲ . ಆದರೆ, ಅಲ್ಲಿನ ಪರಿಸರ- ಸಮಾಜದ ಬಗ್ಗೆ ತಿಳಿವಳಿಕೆ ಹಾಗೂ ಅಲ್ಲಿನ ಪರಿಸರಕ್ಕೆ ನಮ್ಮ ಮನೋಭಾವ ಹೊಂದಿಕೊಳ್ಳುತ್ತದೆಯೇ ಎನ್ನುವ ಆತ್ಮ ವಿಶ್ಲೇಷಣೆ ಒಳ್ಳೆಯದು. ಇಲ್ಲದೆ ಹೋದಲ್ಲಿ ಸುಧಾರಾಣಿ ಅವರ ಕತೆ ಮರುಕಳಿಸುತ್ತದೆ. ಸುಧಾರಾಣಿ ನಮ್ಮ ಹುಡುಗಿಯರಿಗೆ ಪಾಠವಾಗಲಿ.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada