ಕೇರಳ ಜನತೆಗಾಗಿ ಗರಿಷ್ಠ ಮೊತ್ತ ನೀಡಿದ್ರಾ ಸನ್ನಿ: ನೀಲಿತಾರೆಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ.!

By Bharath Kumar

ಕರ್ನಾಟದಲ್ಲಿ ಕೊಡಗು ಜಿಲ್ಲೆಯಾದಂತೆ ಕೇರಳ ರಾಜ್ಯದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಇಡೀ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಬಾಲಿವುಡ್ ನಟರು ಮನಸ್ಸು ಮಾಡಿದ್ರೆ ಇಡೀ ಕೇರಳ ರಾಜ್ಯವನ್ನ ಮತ್ತೆ ಹೊಸದಾಗಿ ನಿರ್ಮಾಣ ಮಾಡಬಹುದು. ಅಷ್ಟು ಹಣ ಅವರ ಬಳಿ ಇದೆ. ಆದ್ರೆ, ಯಾರೊಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಹೀಗಿರುವಾಗ, ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅತಿ ದೊಡ್ಡ ಮೊತ್ತವನ್ನ ಕೇರಳ ಜನರಿಗಾಗಿ ನೀಡಿದ್ದಾರೆ ಎಂಬ ಸುದ್ದಿ ಈಗ ಕೇಂದ್ರ ಬಿಂದುವಾಗಿದೆ.

ಸನ್ನಿ ಲಿಯೋನ್ ಅವರನ್ನ ಬೈಯ್ದುಕೊಂಡವರು ಇದ್ದಾರೆ. ಸ್ಟಾರ್ ನಟ-ನಟಿಯರನ್ನ ಇಷ್ಟಪಡುವ ಜನರು ಸನ್ನಿಯನ್ನ ದ್ವೇಷಿಸಿರುವ ಉದಾಹರಣೆಯೂ ಇದೆ. ಆದ್ರೆ, ಸಂಕಷ್ಟ ಸ್ಥಿತಿಯಲ್ಲಿರುವ ಕೇರಳಗೆ ಸನ್ನಿ ಬಹುದೊಡ್ಡ ಸಹಾಯ ಧನ ನೀಡಿದ್ದಾರೆ ಎನ್ನುವುದು ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಅಷ್ಟಕ್ಕೂ, ಸನ್ನಿ ನೀಡಿದ ಹಣವೆಷ್ಟು.? ಮುಂದೆ ಓದಿ.....

5 ಕೋಟಿ ನೀಡಿದ್ದಾರೆ ಎಂಬ ಸುದ್ದಿ.!

5 ಕೋಟಿ ನೀಡಿದ್ದಾರೆ ಎಂಬ ಸುದ್ದಿ.!

ಹಾಟ್ ಬಾಂಬ್ ಸನ್ನಿ ಲಿಯೋನ್ ಕೇರಳ ಸಂತ್ರಸ್ಥರಿಗಾಗಿ ಬರೋಬ್ಬರಿ 5 ಕೋಟಿ ಹಣ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಎಲ್ಲಿಯೂ ಬಹಿರಂಗವಾಗಿ ಅಥವಾ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದ್ರೆ, ಮಲಯಾಳಂ ಚಿತ್ರ ನಿರ್ದೇಶಕರೊಬ್ಬರು ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಚರ್ಚೆಯಾಗುತ್ತಿದೆ.

ಸನ್ನಿಯ ಕೆಲಸಕ್ಕೆ ಭಾರಿ ಮೆಚ್ಚುಗೆ

ಸನ್ನಿಯ ಕೆಲಸಕ್ಕೆ ಭಾರಿ ಮೆಚ್ಚುಗೆ

''ಕೇರಳ ಜನರಿಗಾಗಿ ನೀವು 5 ಕೋಟಿ ನೀಡಿರುವುದಕ್ಕೆ ನಿಜಕ್ಕೂ ನಿಮಗೆ ತುಂಬಾ ಧನ್ಯವಾದಗಳು. ನಮ್ಮ ಕಷ್ಟದ ಸಮಯದಲ್ಲಿ ನೀವು ನೀಡಿದ ಈ ಕೊಡುಗೆಯನ್ನು ಕೇರಳಿಗರು ಎಂದಿಗೂ ಮರೆಯುವುದಿಲ್ಲ. ನಾನು ಈ ಸಮಯದಲ್ಲಿ ನಿಮಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಇಂದಿನಿಂದ ನಾನು ಹಲವು ವರ್ಷಗಳ ಕಾಲ ನಾನು ಸನ್ನಿ ಲಿಯೋನ್ ಅಭಿಮಾನಿಯಾಗಿರುತ್ತೇನೆ ಎಂಬ ಭಾವ ನನ್ನಲ್ಲಿ ಮೂಡುತ್ತಿದೆ. ಕೇರಳ ನಿಮಗೆ ಚಿರ ಋಣಿಯಾಗಿರುತ್ತದೆ ಎಂದು ಅಜಯ್ ದೇವಲೋಕ ಬರೆದುಕೊಂಡಿದ್ದಾರೆ.

ನಿಜಾನೋ ಸುಳ್ಳೋ.?

ನಿಜಾನೋ ಸುಳ್ಳೋ.?

ಸನ್ನಿ ಲಿಯೋನ್ ಕೇರಳ ಸಂತ್ರಸ್ಥರಿಗೆ ಧನಸಹಾಯ ಮಾಡಿದ್ದಾರೆ ಎಂಬುದು ಖುಷಿ ನೀಡಿದೆ. ಆದ್ರೆ, 5 ಕೋಟಿಯ ಹಣ ಎಂಬುದು ಸ್ವಲ್ಪ ಆಶ್ಚರ್ಯ ಉಂಟು ಮಾಡಿದೆ. ಯಾಕಂದ್ರೆ, ಯಾವ ಸಿನಿಮಾ ನಟರು ಇಷ್ಟು ದೊಡ್ಡ ಮಟ್ಟದ ಹಣವನ್ನ ನೀಡಿಲ್ಲ. ಮತ್ತು ಇಷ್ಟು ದೊಡ್ಡ ಮೊತ್ತವನ್ನ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ, ಇದು ಸುಳ್ಳು ಸುದ್ದಿ ಎಂದು ಹೇಳುತ್ತಿರುವವರು ಇದ್ದಾರೆ. ಇದು ನಿಜಾ ಎಂದು ಸನ್ನಿ ಬಗ್ಗೆ ಹೊಗಳುತ್ತಿದ್ದವರು ಇದ್ದಾರೆ. ಸ್ವತಃ ಸನ್ನಿಯೇ ಖಚಿತ ಪಡಿಸುವವರಿಗೆ ಈ ಸುದ್ದಿಯನ್ನ ನಂಬುವಂತಿಲ್ಲ.

ಯಾವ ನಟರು ಎಷ್ಟು ಕೊಟ್ಟಿದ್ದಾರೆ.?

ಯಾವ ನಟರು ಎಷ್ಟು ಕೊಟ್ಟಿದ್ದಾರೆ.?

ದಕ್ಷಿಣ ಭಾರತದಲ್ಲಿ ಅಲ್ಲು ಅರ್ಜುನ್ 25 ಲಕ್ಷ, ಕಾರ್ತಿ ಹಾಗೂ ಸೂರ್ಯ ತಲಾ 25 ಲಕ್ಷ, ಮೋಹನ್ ಲಾಲ್ 25, ಕಮಲ್ ಹಾಸನ್ 25 ಲಕ್ಷ, ನಾಗಾರ್ಜುನ 28 ಲಕ್ಷ, ಮಹೇಶ್ ಬಾಬು 25 ಲಕ್ಷ, ಪ್ರಭಾಸ್ 25 ಲಕ್ಷ, ಎನ್.ಟಿ.ಆರ್ 25 ಲಕ್ಷ, ಚಿರಂಜೀವಿ 25 ಲಕ್ಷ, ರಾಮ್ ಚರಣ್ ಮತ್ತು ಪತ್ನಿ ಸೇರಿ 35 ಲಕ್ಷ, ಕಲ್ಯಾಣ್ ರಾಮ್ 10 ಲಕ್ಷ ಸೇರಿದಂತೆ ಸಾಕಷ್ಟು ನಟರು ಕೇರಳ ಜನರಿಗೆ ನೆರವು ನೀಡಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

More from Filmibeat

English summary
Malayalam director ajay devaloka wrote in his facebook page 'bollywood actor sunny leone has donates 5 crore to kerala flood'.ಕೇರಳ ರಾಜ್ಯಕ್ಕೆ ಸನ್ನು ಲಿಯೋನ್ 5 ಕೋಟಿ ನೀಡಿದ್ದಾರೆ ಎಂದು ಮಲಯಾಳಂ ನಿರ್ದೇಶಕ ಪೋಸ್ಟ್ ಮಾಡಿದ್ದಾರೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X