»   » ಭಾರತೀಯ ಸಂಸ್ಕೃತಿ ವಿರುದ್ಧ ನಟಸಿದ್ದೇನೆ: ಸನ್ನಿ ಲಿಯೋನ್

ಭಾರತೀಯ ಸಂಸ್ಕೃತಿ ವಿರುದ್ಧ ನಟಸಿದ್ದೇನೆ: ಸನ್ನಿ ಲಿಯೋನ್

Posted By:
Subscribe to Filmibeat Kannada

ಬಾಲಿವುಡ್ ಚಿತ್ರ 'ಜಿಸ್ಮ್-2' ಮೂಲಕ ಭಾರತೀಯ ಪ್ರೇಕ್ಷಕರನ್ನು ರಂಜಿಸಲು ತೆರೆಯ ಮೇಲೆ ಬರುತ್ತಿರುವ ವಯಸ್ಕರ ಚಿತ್ರಗಳ ಇಂಡೋ-ಕೆನಡಿಯನ್ ತಾರೆ ಸನ್ನಿ ಲಿಯೋನ್ ಈಗ ಭಾರಿ ಸುದ್ದಿಯಲ್ಲಿದ್ದಾರೆ. "ನಾನು 'ಜಿಸ್ಮ್-2' ಚಿತ್ರದಲ್ಲಿ ಭಾರತೀಯ ಸಂಸ್ಕೃತಿಗೆ ವಿರುಧ್ಧವಾಗಿಯೇ ಎಲ್ಲವನ್ನೂ ಮಾಡಿದ್ದೇನೆ" ಎಂಬ ಬಾಣವನ್ನು ಬಿಟ್ಟಿದ್ದಾರೆ ಸನ್ನಿ ಲಿಯೋನ್. ಅವರ ಈ ಹೇಳಿಕೆ ಪ್ರಚಾರಕ್ಕೆ ಅನುಕಾಲವಾಗಲೆಂದೇ ಇರಬಹುದು ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ.

ಹಿಂದಿ ರಿಯಾಲಿಟಿ ಶೋ 'ಬಿಗ್ ಬಾಸ್' ಮೂಲಕ ಭಾರತೀಯ ಸಿನಿಪ್ರಿಯರನ್ನು ತಮ್ಮತ್ತ ಆಕರ್ಷಿಸಿದ ಈ ಪೋಲಿ ತಾರೆ, ಇದೀಗ ಬಾಲಿವುಡ್ ಚಿತ್ರರಂಗವನ್ನೇ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ. ವಿದೇಶದಲ್ಲಿ ವಯಸ್ಕರ ಚಿತ್ರಗಳಿಗೆ ಪ್ರಸಿದ್ಧಿ ಪಡೆದಿರುವ ಭಾರತೀಯ ಮೂಲದ ವಿದೇಶಿ ನಟಿಯೊಬ್ಬರು ಇದೇ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಿಸಿ, ಅದೂ ನಾಯಕಿಯಾಗಿ ನಟಿಸಿ ಜನರಿಗೆ ಬೆರಗನ್ನು ಮೂಡಿಸಿದ್ದಾರೆ.

ಸನ್ನಿ ಲಿಯೋನ್ ರನ್ನು ಬಾಲಿವುಡ್ ಚಿತ್ರದ ಮೂಲಕ ನೋಡಲು ಪ್ರೇಕ್ಷಕರಿಗೆ ಇರುವ ಭಾರಿ ಕುತೂಹಲದಷ್ಟೇ, ಭಾರತೀಯ ಪ್ರೇಕ್ಷಕರು ತಮ್ಮ ನಟನೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಸ್ವತಃ ಸನ್ನಿಗೂ ಇದೆಯಂತೆ. ಏಕೆಂದರೆ, ಕೇವಲ ನೀಲಿ ಚಿತ್ರಗಳಲ್ಲಿ ನಟಿಸಿದ್ದ ಸನ್ನಿಗೆ ಭಾರತೀಯ ಪರಂಪರೆ, ಸಂಸ್ಕೃತಿ ಆಧಾರದ ಮೇಲೆ ನಿರ್ಮಾಣವಾಗುವು ಹಿಂದಿ ಚಿತ್ರಗಳು ಹೊಸದು. ಈ ವಿಷಯ ಅರಿತೇ ಸನ್ನಿ, ನಾನು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದನ್ನೇ ಮಾಡಿದ್ದೇನೆ ಎಂದಿರುವುದು.

ಪ್ರೇಕ್ಷಕರು ಯಾರೇ ಆಗಲಿ, ಸನ್ನಿ ಲಿಯೋನ್ ರನ್ನು ಇಷ್ಟಪಡುಬಹುದು ಅಥವಾ ದೂಷಿಸಬಹುದು. ಆದರೆ ಅವರನ್ನು ಉದಾಸೀನ ಮಾಡಲು ಸಾಧ್ಯವೇ ಇಲ್ಲ. ಕಾರಣ, ಸನ್ನಿ ಈಗಾಗಲೇ ಸಾಕಷ್ಟು ಜನ ಭಾರತೀಯ ಪ್ರೇಕ್ಷಕರಿಗೆ 'ಬಿಗ್ ಬಾಸ್' ಶೋ ಮೂಲಕ ಚಿರಪರಿಚಿತರು. ಈ ಚಿತ್ರದಲ್ಲಿ ತಾವು ಬಹಳಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದರೂ, ಸಂಪ್ರದಾಯಸ್ಥ ಭಾರತೀಯ ಪ್ರೇಕ್ಷಕರು ತಮ್ಮನ್ನು ಒಪ್ಪಿಕೊಳ್ಳುತ್ತಾರೆ ಎಂಬುದು ಸನ್ನಿ ಅನಿಸಿಕೆ.

ಸನ್ನಿಯ ಅಮೇರಿಕನ್ ಸ್ನೇಹಿತರು ಈ 'ಜಿಸ್ಮ್-2' ಚಿತ್ರ ನೋಡಲು ಭಾರಿ ಕಾತರ ವ್ಯಕ್ತಪಡಿಸಿದ್ದಾರಂತೆ. " ನನ್ನ ಎಲ್ಲಾ ಸ್ನೇಹಿತರ ಬಳಗ ಜಿಸ್ಮ್ -2 ನೋಡಿ ಥ್ರಿಲ್ ಅನುಭವಿಸಲು ರೆಡಿಯಿದ್ದಾರೆ. ಆದರೆ ಅವರಿಗೆ ಹಿಂದಿ ಅರ್ಥವಾಗುವುದಿಲ್ಲ. ಹೀಗಾಗಿ ಸಬ್ ಟೈಟಲ್ ನೊಂದಿಗೆ ಈ ಚಿತ್ರ ಬಿಡುಗಡೆಯಾಗಲಿ ಎಂಬ ಆಸೆ ನನ್ನದು" ಎಂಬುದು ಸನ್ನಿ ಅಂಬೋಣ. ನಾಳೆ (03 ಆಗಸ್ಟ್ 2012) ಸನ್ನಿ ನಟನೆಯ 'ಜಿಸ್ಮ್-2' ಬಿಡುಗಡೆಯಾಗಲಿದೆ. ಎಲ್ಲರಲ್ಲೂ ತೀವ್ರ ಕುತೂಹಲವಿದೆ. (ಏಜೆನ್ಸೀಸ್)

English summary
Sunny Leone is now set to begin a new innings as she makes her Hindi film debut in Jism 2, which releases tomorrow on 03 August 2012. An Indo-Canadian adult movie actress, Sunny Leone is very excited about her Bollywood movie debut, and believes generally conservative Indian audiences are ready to accept her. 
 
Please Wait while comments are loading...