»   » ರೇಪ್ ಬಗ್ಗೆ ಸನ್ನಿ ಲಿಯೋನ್ ಸರ್ಪ್ರೈಸ್ ಕಾಮೆಂಟ್

ರೇಪ್ ಬಗ್ಗೆ ಸನ್ನಿ ಲಿಯೋನ್ ಸರ್ಪ್ರೈಸ್ ಕಾಮೆಂಟ್

Posted By:
Subscribe to Filmibeat Kannada
ಖಾತ್ಯ ನಟಿಯಾಗಿ ಬದಲಾಗುತ್ತಿರುವ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಹೀಗೆ ಹೇಳಬಾರದಿತ್ತು. ಜವಾಬ್ದಾರಿಯುತವಾಗಿ ಮಾತನಾಡಬೇಕಿತ್ತು. ಆದರೆ ಬಾಯ್ತಪ್ಪಿ ಅತ್ಯಾಚಾರದ ಬಗ್ಗೆ ಏನೇ ಹೇಳಲು ಹೋಗಿ ಇನ್ನೇನೋ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ಇಷ್ಟಕ್ಕೂ ಸನ್ನಿ ಹೇಳಿದ್ದೇನೆಂದರೆ, "ರೇಪ್ ಎನ್ನುವುದು ಒಂಥರಾ ಸರ್ಪ್ರೈಸ್ ಸೆಕ್ಸ್ ಇದ್ದಂತೆ" (ಅತ್ಯಾಚಾರ ಎಂಬುದು ಅನಿರೀಕ್ಷಿತ ಲೈಂಗಿಕ ಕ್ರಿಯೆ) ಎಂದಿದ್ದಾರೆ. ಈ ಮೂಲಕ ದೇಶದ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸನ್ನಿ ಹೀಗೆ ಬೇಕಾಬಿಟ್ಟಿ ಹೇಳಿಕೆ ನೀಡಬಾರದಿತ್ತು ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಆಕೆಯ ಮಾತುಗಳಿಗೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ಸನ್ನಿ ಕೊಟ್ಟ ಹೇಳಿಕೆ ಬಿಸಿಬಿಸಿ ಚರ್ಚೆಗೆ ಆಸ್ಪದ ನೀಡಿದ್ದು ವಿವಾದವನ್ನು ಸೃಷ್ಟಿಸಿದೆ.

"Rape is not crime, it is a surprise sex" ಎಂದು ಸನ್ನಿ ಟ್ವೀಟ್ ಮಾಡಿದ್ದೇ ತಡ, ಅದು ರೀಟ್ವೀಟ್ ಆಗಿ ಪ್ರತಿಧ್ವನಿಸಿತು. ಕೂಡಲೆ ಎಚ್ಚೆತ್ತುಕೊಂಡ ಸನ್ನಿ ಅದನ್ನು ಡಿಲೀಟ್ ಮಾಡಿದ್ದಾರೆ. ಅಯ್ಯೋ ನಾನು ಆ ರೀತಿ ಹೇಳಿಕೆ ನೀಡಿಯೇ ಇಲ್ಲ. ಇದು ಯಾರದೋ ಕುತಂತ್ರ ಎಂದು ಜಾರಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ. (ಏಜೆನ್ಸೀಸ್)

English summary
Bollywood actress Sunny Leone made a sensitive comment on rape. The actress tweeted, "Rape is not crime, it is a surprise sex." In no time the starlet realized her mistake and deleted her tweet, but by then it got retweeted by her followers.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada