ಇಂಜಿನಿಯರ್ ಪರೀಕ್ಷೆಯಲ್ಲಿ 98% ಅಂಕ ಪಡೆದ 'ಸನ್ನಿ ಲಿಯೋನ್'ಗೆ ಬಂಧನದ ಭೀತಿ.!

Recommended Video

'ಸನ್ನಿ ಲಿಯೋನ್'ಗೆ ಬಂಧನದ ಭೀತಿ..! | FILMIBEAT KANNADA

ಬಾಲಿವುಡ್ ನಟಿ ಸನ್ನಿ ಲಿಯೋನ್ ಎಷ್ಟು ಓದಿರಬಹುದು ಎಂದು ಅನೇಕರಿಗೆ ಗೊತ್ತಿಲ್ಲ. ದಾಖಲೆಗಳ ಪ್ರಕಾರ ಸನ್ನಿ ಸ್ಕೂಲ್ ಗೆ ಹೋಗಿದ್ದರು ಅಷ್ಟೇ. ಕಾಲೇಜ್ ಗೆ ಹೋಗ್ಲಿಲ್ಲ. ಹಾಗಾಗಿ, ಸನ್ನಿಯ ನಿರ್ದಿಷ್ಟವಾದ ಶಿಕ್ಷಣದ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಸನ್ನಿ ಬಯೋಗ್ರಫಿ ಹುಡುಕಿದಾಗ ಪೀಡಿಯಾಟ್ರಿಕ್ ನರ್ಸಿಂಗ್ (Pediatric Nursing) ಮಾಡಿದ್ದಾರೆ ಎನ್ನಲಾಗಿದೆ.

ಆದ್ರೀಗ, ಜ್ಯೂನಿಯರ್ ಇಂಜಿನಿಯರಿಂಗ್ ಅರ್ಹತಾ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಟಾಪ್ ನಲ್ಲಿ ಪಾಸ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಅರ್ಹತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನ ಪಡೆದು ಅಗ್ರಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸ್ವತಃ ಬಿಹಾರ ಶಿಕ್ಷಣ ಇಲಾಖೆ ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟ ಮಾಡಿದೆ. ಇದನ್ನ ಕಂಡ ನೆಟ್ಟಿಗರು ಅಚ್ಚರಿಗೊಂಡು, ಶಿಕ್ಷಣ ಇಲಾಖೆಗೆ ಕ್ಲಾಸ್ ತಗೊಂಡಿದ್ದಾರೆ. ಮುಂದೆ ಓದಿ......

ಫೇಕ್ ಸನ್ನಿ ಲಿಯೋನ್?

ಫೇಕ್ ಸನ್ನಿ ಲಿಯೋನ್?

ಅಂದ್ಹಾಗೆ, ಇವರು ನಿಜವಾದ ಸನ್ನಿ ಲಿಯೋನ್ ಅಲ್ಲ, ನಕಲಿ ಸನ್ನಿ ಲಿಯೋನ್. ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ವಿಭಾಗ (PHED)ದ ಅರ್ಹತಾ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಹೆಸರಿನಲ್ಲಿ ವಿದ್ಯಾರ್ಥಿಯೊಬ್ಬರು ಪರೀಕ್ಷೆ ಬರೆದಿದ್ದು, ಶೇಕಡಾ 98 ಅಂಕ ಪಡೆದುಕೊಂಡು ಪಾಸ್ ಆಗಿದ್ದಾರೆ ಎಂದು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಟಕವಾಗಿದೆ. ಇದು ಎಷ್ಟು ನಿಜ, ಎಷ್ಟು ಸುಳ್ಳು ಎಂಬುದು ಸದ್ಯ ಚರ್ಚೆಯಾಗ್ತಿದೆ.

ಹೆಸರು ಮಾತ್ರವಲ್ಲ, ಫೋಟೋನು ನಕಲಿ

ಹೆಸರು ಮಾತ್ರವಲ್ಲ, ಫೋಟೋನು ನಕಲಿ

ಬರಿ ಸನ್ನಿ ಲಿಯೋನ್ ಹೆಸರು ಮಾತ್ರವಲ್ಲ, ಹಾಲ್ ಟಿಕೆಟ್ ನಲ್ಲಿ ಮತ್ತು ಪರೀಕ್ಷ ದಾಖಲಾತಿಯಲ್ಲಿ ಸನ್ನಿ ಲಿಯೋನ್ ಫೋಟೋ ಕೂಡ ಇದೆ. ಆದ್ರೆ, ಇದನ್ನ ಯಾವ ಅಧಿಕಾರಿಗಳು ನೋಡಿಲ್ವಾ ಎಂಬ ಅನುಮಾನ ಈಗ ಕಾಡ್ತಿದೆ.

ಮುಜುಗರಕ್ಕೆ ಒಳಗಾದ ಶಿಕ್ಷಣ ಇಲಾಖೆ

ಮುಜುಗರಕ್ಕೆ ಒಳಗಾದ ಶಿಕ್ಷಣ ಇಲಾಖೆ

ಈ ಘಟನೆಯಿಂದ ಬಿಹಾರ ಶಿಕ್ಷಣ ಇಲಾಖೆ ಮುಜುಗರಕ್ಕೆ ಒಳಗಾಗಿದೆ. ಕೇವಲ ಸನ್ನಿ ಲಿಯೋನ್ ಹೆಸರು ಮತ್ತು ಫೋಟೋ ಮಾತ್ರವಲ್ಲ, ಅದೇ ಪಟ್ಟಿಯಲ್ಲಿ ಇನ್ನೊಂದು ಅಭ್ಯರ್ಥಿಯ ಹೆಸರು ಕೂಡ ತಪ್ಪಾಗಿದೆ. ಹೆಸರೇ ಇಲ್ಲದೇ ''bvcxzbnnb'' ನಮೂದಿಸಲಾಗಿದೆ. ಇದು ವೆಬ್ ಸೈಟ್ ನಲ್ಲಿ ಆಗಿರುವ ತಪ್ಪು ಎಂಬುದು ಮೇಲ್ನೊಟಕ್ಕೆ ಗೊತ್ತಾಗ್ತಿದೆ.

ಎಫ್ ಐ ಆರ್ ದಾಖಲು

ಎಫ್ ಐ ಆರ್ ದಾಖಲು

ಇದೀಗ, ಸನ್ನಿ ಲಿಯೋನ್‌ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ವಿರುದ್ಧ ಅಧಿಕಾರಿಗಳು ಎಫ್‌.ಐ.ಆರ್ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಂಧಿಸಿ ಕ್ರಮ ಜರುಗಿಸುವ ಸಾಧ್ಯತೆ ಕೂಡ ಇದೆ. ಇನ್ನು ಅರ್ಹತಾ ಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪ ಇದ್ದರೆ ಫೆಬ್ರವರಿ 18 ರಿಂದ 24ರ ಒಳಗೆ ಆನ್‍ಸೈನ್‍ನಲ್ಲಿ ತಿಳಿಸಬಹುದು ಎಂದು ಸರ್ಕಾರಿ ವೆಬ್ ಸೈಟ್ ಪ್ರಕಟಿಸಿದೆ.

More from Filmibeat

English summary
Out of 17,911 candidates, 642 will be shortlisted based on their score and 'Sunny Leone' is one of the contenders for the government job.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X