»   » ನಟಿ ಸನ್ನಿ ಲಿಯೋನ್ ಅಂಡರ್ ವೇರ್ ಕದ್ದವನಾರು?

ನಟಿ ಸನ್ನಿ ಲಿಯೋನ್ ಅಂಡರ್ ವೇರ್ ಕದ್ದವನಾರು?

By: ರವಿಕಿಶೋರ್
Subscribe to Filmibeat Kannada

ತಮ್ಮ ಮಾದಕ ಚೆಲುವಿಗೆ ಹೆಸರಾಗಿರುವ ಬಾಲಿವುಡ್ ತಾರೆ ಸನ್ನಿ ಲಿಯೋನ್. ನೀಲಿವುಡ್ ಚಿತ್ರಗಳಿಂದ ಬಾಲಿವುಡ್ ಚಿತ್ರಗಳಿಗೆ ಸನ್ನಿ ಅಡಿಯಿಟ್ಟಿದ್ದೇ ಒಂದು ರೋಚಕ ಕಥೆ. ಇತ್ತೀಚೆಗೆ ಸನ್ನಿ ಲಿಯೋನ್ ಅವರ ದುಬಾರಿ ಒಡವೆ ಅದರ ಜೊತೆಗೆ ಬೆಲೆಬಾಳುವ ಒಳಉಡುಪುಗಳು ಮಾಯವಾಗಿವೆ.

'ರಾಗಿಣಿ ಎಂಎಂಎಸ್ 2' ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಅದರಲ್ಲೂ ಸನ್ನಿ ಅವರ ಒಳಉಡುಪು ಬಹಳ ದುಬಾರಿ ಎನ್ನುತ್ತವೆ ಮೂಲಗಳು. ಈ ಸಂಬಂಧ 'ಮಿಡ್ ಡೇ' ಪತ್ರಿಕೆ ಒಂದು ರಸವತ್ತಾದ ವರದಿಯನ್ನೂ ಪ್ರಕಟಿಸಿದೆ. ಅದರ ಪ್ರಕಾರ... [2014ರ ಕನ್ನಡದ ಮೋಸ್ಟ್ ಹಾಟ್ ಐಟಂಗಳು]


'ರಾಗಿಣಿ ಎಂಎಂಎಸ್ 2' ಚಿತ್ರೀಕರಣಕ್ಕಾಗಿ ಈ ವಿಶೇಷ ಒಳಉಡುಪನ್ನು ಸ್ಪೆಷಲ್ ಆಗಿ ಆರ್ಡರ್ ಕೊಟ್ಟು ತರಿಸಲಾಗಿತ್ತಂತೆ. ಅದರ ಬೆಲೆ ಸುಮಾರು ರು.50 ಸಾವಿರ. ಇನ್ನೇನು ಈ ಟೂ ಪೀಸ್ ಚಿತ್ರೀಕರಣಕ್ಕೆ ಸನ್ನಿ ತಯಾರಾಗಬೇಕು ಆದರೆ ಒಳಉಡುಪುಗಳು ನಾಪತ್ತೆ. ಬಳಿಕ ಆನ್ ಲೈನ್ ನಲ್ಲಿ ಇನ್ನೊಂದು ಹೊಸ ಪೀಸ್ ತರಿಸಿ ಚಿತ್ರೀಕರಿಸಲಾಯಿತಂತೆ.

ಸನ್ನಿ ಲಿಯೋನ್ ಒಳಉಡುಪು ಕಾಣೆಯಾದ ಮೇಲೆ ಎತ್ತೆಚ್ಚುಕೊಂಡ ಚಿತ್ರತಂಡ ಈಗ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದೆಯಂತೆ. ಏನೇ ಆಗಲಿ ಹೋದ ವಸ್ತು ಮತ್ತೆ ಸಿಗುತ್ತದೆಯೇ? ಬಹುಶಃ ಕದ್ದವ ಸನ್ನಿಯ ಹಳೆಯ ಅಭಿಮಾನಿ ಇರಬೇಕು ಎಂಬುದು ಚಿತ್ರತಂಡದ ಅಭಿಪ್ರಾಯ. ಇಲ್ಲ ಬಿಟ್ಟಿ ಪ್ರಚಾರಕ್ಕಾಗಿ ಹೀಗೆ ಹೇಳುತ್ತಿದ್ದಾರೋ ಏನೋ.

ಈ ಹಿಂದೊಮ್ಮೆ 'ಕ್ಯಾ ಸೂಪರ್ ಕೂಲ್ ಹೈ ಹಮ್' ಚಿತ್ರೀಕರಣದಲ್ಲಿ ನಟಿ ಸರಹ್ ಜೇನ್ ಡಯಾಸ್ ಅವರ ಒಳಉಡುಪುಗಳು ಮಂಗಮಾಯವಾಗಿದ್ದವು. ಒಳಉಡುಪುಗಳನ್ನು ಕದಿಯುವ ವಿಕೃತ ಅಭಿಮಾನಿಗಳೂ ಇರುತ್ತಾರೆ ಎಂಬ ಬಗ್ಗೆ ತಾರೆಗಳು ಕೊಂಚ ಹುಷಾರಾಗಿರುವುದು ಒಳಿತು.

English summary
If reports are to be believed, undergarments of actress Sunny Leone got stolen during a film shoot. A Mid-Day report says that Sunny's expensive designer lingerie' disappeared from the sets of 'Ragini MMS-2'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada