Just In
- 1 hr ago
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- 1 hr ago
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
- 3 hrs ago
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
- 11 hrs ago
ಮತ್ತೆ ಬಾಲಿವುಡ್ಗೆ ಪಯಣ ಬೆಳೆಸಿದ ದುಲ್ಕರ್ ಸಲ್ಮಾನ್
Don't Miss!
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- News
ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
- Automobiles
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- Sports
ಭಾರತ vs ಆಸ್ಟ್ರೇಲಿಯಾ: 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಬ್ಮನ್ ಗಿಲ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ ಬಾಸ್ ಮನೆಗೆ ತೆಲುಗು ಸೂಪರ್ ಸ್ಟಾರ್ ನಟನ ಪತ್ನಿ.!
ಬಿಗ್ ಬಾಸ್ ಕನ್ನಡ 6ನೇ ಆವೃತ್ತಿ ಕಳೆದ ವರ್ಷಾಂತ್ಯದಲ್ಲಿ ಮುಗಿದಿದೆ. ಏಳನೇ ಅವೃತ್ತಿ ಈ ವರ್ಷದ ಅಂತ್ಯಕ್ಕೆ ಆರಂಭವಾಗಲಿದೆ. ಈ ಮಧ್ಯೆ ಸೌತ್ ಇಂಡಿಯಾದಲ್ಲಿ ಮತ್ತೊಂದು ಬಿಗ್ ಬಾಸ್ ಸದ್ದು ಮಾಡ್ತಿದೆ. ಎರಡು ಯಶಸ್ವಿ ಆವೃತ್ತಿಗಳನ್ನ ಮುಗಿಸಿರುವ ತೆಲುಗು ಬಿಗ್ ಬಾಸ್ ಈಗ ಮತ್ತೆ ಸಂಚಲನ ಸೃಷ್ಟಿಸಿದೆ.
ಬಿಗ್ ಬಾಸ್ ಆರಂಭಕ್ಕೆ ಸಮಯವಕಾಶ ಹೆಚ್ಚಿದೆ. ಆದರೂ ಈ ಸೀಸನ್ ನಲ್ಲಿ ಯಾರೆಲ್ಲಾ ಹೋಗಬಹುದು ಎಂಬ ಕೂತೂಹಲ ಮಾತ್ರ ಈಗಲೇ ಶುರುವಾಗಿದೆ.
ಜಾಸ್ತಿ ಮಾತಾಡಿದ್ರೆ ಪವನ್ ಕಲ್ಯಾಣ್ ಡಿವೋರ್ಸ್ ವಿಷ್ಯ ಬಿಚ್ಚಿಡಬೇಕಾಗುತ್ತೆ.!
ಸದ್ಯಕ್ಕೆ ಟಾಲಿವುಡ್ ನಲ್ಲಿ ಬಿಗ್ ಬಾಸ್ ತೆಲುಗು ದೊಡ್ಡ ಸುದ್ದಿಯಾಗಿದ್ದು, ಸೂಪರ್ ಸ್ಟಾರ್ ನಟನ ಪತ್ನಿ ಈ ಸಲ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದರೇ, ಬಿಗ್ ಬಾಸ್ ಶೋ ಇಡೀ ಇಂಡಿಯಾದ ಗಮನ ಸೆಳೆಯಲಿದೆ. ಅಷ್ಟಕ್ಕೂ, ಆ ಸೂಪರ್ ಸ್ಟಾರ್ ಯಾರು? ಆತನ ಪತ್ನಿ ಯಾರು? ಮುಂದೆ ಓದಿ.....

ಬಿಗ್ ಮನೆಗೆ ಪವನ್ ಕಲ್ಯಾಣ್ ಪತ್ನಿ?
ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಈಗ ಭಾರಿ ಸದ್ದು ಮಾಡ್ತಿದೆ. ಸದ್ಯದ ಮಟ್ಟಿಗೆ ರೇಣು ದೇಸಾಯಿ ಬರೋದು ಪಕ್ಕಾ ಎನ್ನಲಾಗಿದೆ. ಆದರೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಡಿವೋರ್ಸ್ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಪವನ್ ಕಲ್ಯಾಣ್ ಮಾಜಿ ಪತ್ನಿ

ರೇಣು ಬಂದ್ರೆ ಫುಲ್ ಟಿ.ಆರ್.ಪಿ
ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದು ದೂರವಾಗಿರುವ ರೇಣು ದೇಸಾಯಿ, ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ. ಪವನ್ ಕಲ್ಯಾಣ್ ವಿರುದ್ಧವೂ ಹಲವು ಹೇಳಿಕೆಗಳನ್ನ ನೀಡಿ ಪವರ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಹೀಗಾಗಿ, ರೇಣು ದೇಸಾಯಿ ಶೋಗೆ ಬಂದರೆ ಟಿ.ಆರ್.ಪಿ ಸುನಾಮಿಯಂತೆ ಬರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

ನಾಗಾರ್ಜುನಗೆ ದೊಡ್ಡ ಆಫರ್
ಮೊದಲ ಆವೃತ್ತಿ ಜೂನಿಯರ್ ಎನ್.ಟಿ.ಆರ್ ನಿರೂಪಣೆ ಮಾಡಿದ್ದರು. ಎರಡನೇ ಆವೃತ್ತಿಯಲ್ಲಿ ನಾನಿ ಆಂಕರಿಂಗ್ ಮಾಡಿದ್ದರು. ಈಗ ಮೂರನೇ ಆವೃತ್ತಿಯಲ್ಲಿ ನಾಗಾರ್ಜುನ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗ್ತಿದೆ. ಈ ಶೋಗಾಗಿ ದೊಡ್ಡ ಮೊತ್ತದ ಅಫರ್ ಮಾಡಲಾಗಿದೆಯಂತೆ. ಅದಕ್ಕೂ ಮುಂಚೆ ಅನುಷ್ಕಾ ಶೆಟ್ಟಿ ಹೆಸರು ಕೂಡ ಕೇಳಿಬಂದಿತ್ತು.
ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್

ಶ್ರೀರೆಡ್ಡಿ ಎಂಟ್ರಿ ಇರುತ್ತಾ?
ಕಳೆದ ಬಾರಿ ಮಿಸ್ ಆಗಿದ್ದ ಶ್ರೀರೆಡ್ಡಿ ಈ ಬಾರಿಯಾದರೂ ಅವಕಾಶ ಗಿಟ್ಟಿಸಿಕೊಳ್ಳುತ್ತಾರಾ ಕಾದುನೋಡಬೇಕಿದೆ. ಇದನ್ನ ಹೊರತುಪಡಿಸಿದ ರೇಣು ದೇಸಾಯಿ ಮಾತ್ರವಲ್ಲ ಮತ್ತಷ್ಟು ವಿವಾದಾತ್ಮಕವಾಗಿ ಸುದ್ದಿಯಾಗಿದ್ದ ಸೆಲೆಬ್ರಿಟಿಗಳು ಮೂರನೇ ಆವೃತ್ತಿಯ ತೆಲುಗು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ಸುಳಿವನ್ನ ಆಯೋಜಕರು ನೀಡಿದ್ದಾರೆ.