twitter
    For Quick Alerts
    ALLOW NOTIFICATIONS  
    For Daily Alerts

    28 ವರ್ಷಗಳ ಬಳಿಕ ಮತ್ತೆ ಒಂದಾಗಲಿರುವ ರಜಿನಿಕಾಂತ್- ಇಳಯರಾಜ: ನಿರ್ದೇಶಕ ಯಾರು?

    |

    ಸೂಪರ್‌ಸ್ಟಾರ್ ರಜಿನಿಕಾಂತ್ ನಟಿಸಿದ ಸಿನಿಮಾ 'ಅಣ್ಣಾತ್ತೆ' ರಿಲೀಸ್ ಆಗಿದೆ. ಶಿವ ನಿರ್ದೇಶಿಸಿದ ಈ ಸಿನಿಮಾ ಫಸ್ಟ್‌ ಡೇ ಫಸ್ಟ್ ಶೋನೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ರಜಿನಿಕಾಂತ್ 'ಅಣ್ಣಾತ್ತೆ' ವಿಮರ್ಶಕರ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ರಜಿನಿ ಸಿನಿಮಾ ಮಾಡಿದ ಮೋಡಿಗೆ ಟೀಕೆ ಮಾಡಿದವರೇ ದಂಗಾಗಿ ಹೋಗಿದ್ದರು. ದೀಪಾವಳಿಗೆ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗೇ ಸದ್ದು ಮಾಡಿತ್ತು.

    'ಅಣ್ಣಾತ್ತೆ' ಸಿನಿಮಾ ಬಳಿಕ ಸೂಪರ್‌ಸ್ಟಾರ್ ರಜಿನಿಕಾಂತ್ ಹೊಸ ಸಿನಿಮಾ ಯಾವುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ತಮಿಳಿನ ದೊಡ್ಡ ದೊಡ್ಡ ನಿರ್ದೇಶಕರು ಈಗಾಗಲೇ ರಜಿನಿಕಾಂತ್‌ಗೆ ಕತೆಗಳನ್ನು ಹೇಳಿದ್ದಾರೆ. ಆದರೆ, ಅವರೆಲ್ಲರಿಗಿಂತ ಒಂದು ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಯಾಕಂದ್ರೆ, ಈ ಸಿನಿಮಾ ಬರೋಬ್ಬರಿ 28 ವರ್ಷಗಳ ಬಳಿಕ ರಜಿನಿ ಹಾಗೂ ಇಳಯರಾಜರನ್ನು ಮತ್ತೆ ಸೇರಿಸುತ್ತಿದೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಹಾಗಿದ್ದರೆ, ಆ ಸಿನಿಮಾ ಯಾವುದು? ನಿರ್ದೇಶಕ ಯಾರು ಅನ್ನುವುದನ್ನು ತಿಳಿಯರು ಮುಂದೆ ಓದಿ..

    ರಜಿನಿ 169ನೇ ಚಿತ್ರದಲ್ಲಿ ಇಳಯರಾಜ?

    ರಜಿನಿ 169ನೇ ಚಿತ್ರದಲ್ಲಿ ಇಳಯರಾಜ?

    ಕೆಲವು ದಿನಗಳ ಹಿಂದಷ್ಟೇ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಜಿನಿಕಾಂತ್ ಹೊಸ ಸಿನಿಮಾವನ್ನು ಘೋಷಣೆ ಮಾಡಿರಲಿಲ್ಲ. ಆದರೆ, ಸಾಕಷ್ಟು ನಿರ್ದೇಶಕರು ರಜಿನಿಗೆ ಈಗಾಗಲೇ ಕಥೆ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದರೂ, ರಜಿನಿ ಮಾತ್ರ ಸೈಲೆಂಟ್ ಆಗಿದ್ದರು. ಆದ್ರೀಗ ಕಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ರಜಿನಿ 169ನೇ ಸಿನಿಮಾಗೆ ಇಳಯರಾಜ ಸಂಗೀತ ನೀಡಲಿದ್ದಾರೆ ಎನ್ನಲಾಗುತ್ತಿದೆ. ಹಾಗೇನಾದರೂ, ಇಬ್ಬರೂ ಗ್ರೀನ್ ಸಿಗ್ನಲ್ ಕೊಟ್ಟು ಸಿನಿಮಾಗೆ ಜೈ ಅಂದರೆ 28 ವರ್ಷಗಳ ಬಳಿಕ ಮತ್ತೆ ಒಂದಾದಂತಾಗುತ್ತೆ.

    ರಜನಿ, ಇಳಯರಾಜ ಜೊತೆ ಆರ್ ಬಲ್ಕಿ ನಿರ್ದೇಶಕ

    ರಜನಿ, ಇಳಯರಾಜ ಜೊತೆ ಆರ್ ಬಲ್ಕಿ ನಿರ್ದೇಶಕ

    ಚೀನಿಕಮ್, ಪಾ, ಶಮಿತಾಬ್ ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ವಿಶಿಷ್ಟ ಸಿನಿಮಾಗಳ ನಿರ್ದೇಶಕ ಆರ್ ಬಲ್ಕಿ. ವಿಶಿಷ್ಟ ಸಿನಿಮಾಗಳನ್ನು ನಿರ್ದೇಶಿಸಿರುವ ಈ ನಿರ್ದೇಶಕ ಈಗಾಲೇ ರಜಿನಿಕಾಂತ್ ಕಥೆಯನ್ನು ಹೇಳಿದ್ದಾರೆ. ಬಲ್ಕಿ ಹೇಳಿದ ಕತೆ ಸೂಪರ್‌ಸ್ಟಾರ್‌ಗೆ ಇಷ್ಟ ಆಗಿದೆ. ಇನ್ನೊಂದು ಕಡೆ ನಿರ್ದೇಶಕ ಬಲ್ಕಿಗೆ ಇಳಯರಾಜ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್. ಹೀಗಾಗಿ ನಿರ್ದೇಶಕ ಬಲ್ಕಿಗೆ ರಜಿನಿ ಗ್ರೀನ್ ಸಿಗ್ನಲ್ ನೀಡಿದರೆ 28 ವರ್ಷಗಳ ಬಳಿಕ ಇಳಯರಾಜ ತಲೈವಾಗೆ ಸಂಗೀತ ನೀಡುವುದು ಕನ್ಫರ್ಮ್ ಆಗುತ್ತೆ.

    1994ರಲ್ಲಿ ರಜಿನಿ ಸಿನಿಮಾಗೆ ಸಂಗೀತ ನೀಡಿದ್ದೇ ಕೊನೆ

    1994ರಲ್ಲಿ ರಜಿನಿ ಸಿನಿಮಾಗೆ ಸಂಗೀತ ನೀಡಿದ್ದೇ ಕೊನೆ

    1994ರಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗೆ ಟ್ಯೂನ್ ಹಾಕಿದ್ದರು. 'ವೀರ' ಅನ್ನುವ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದು ಬಿಟ್ಟರೆ, ಮತ್ತೆ ಈ ಜೋಡಿ ಒಂದಾಗಿರಲಿಲ್ಲ. ನಿರ್ದೇಶಕ ಆರ್. ಬಲ್ಕಿ ಪ್ರಾಜೆಕ್ಟ್‌ ಟೇಕ್ ಆಫ್ ಅದರೆ, ರಜಿನಿಕಾಂತ್ ವೃತ್ತಿ ಜೀವನದಲ್ಲಿಯೇ ವಿಶಿಷ್ಟವಾದ ಸಿನಿಮಾವನ್ನು ಅಭಿಮಾನಿಗಳು ನೋಡಬಹುದು.

    ರಜಿನಿಗಾಗಿ ಕ್ಯೂ ನಿಂತಿರುವ ನಿರ್ದೇಶಕರು ಯಾರು?

    ರಜಿನಿಗಾಗಿ ಕ್ಯೂ ನಿಂತಿರುವ ನಿರ್ದೇಶಕರು ಯಾರು?

    ಸೂಪರ್‌ಸ್ಟಾರ್ ರಜಿನಿಕಾಂತ್ ಸಿನಿಮಾ ನಿರ್ದೇಶನ ಮಾಡುವುದೇ ಒಂದು ಸಾಧನೆ. ಅದರಲ್ಲೂ 'ಅಣ್ಣಾತ್ತೆ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಮೇಲೆ ಕಾಲಿವುಡ್ ನಿರ್ದೇಶಕರು ರಜಿನಿಗಾಗಿ ಕ್ಯೂ ನಿಂತಿದ್ದಾರಂತೆ. ಕಾರ್ತಿಕ್ ಸುಬ್ಬರಾಜು, ಪಾಂಡಿರಾಜ, ವೆಂಕಟ್ ಪ್ರಭು ಹಾಗೂ ಕೆ. ಎಸ್ ರವಿಕುಮಾರ್ ಈಗಾಗಲೇ ತಲೈವಾಗೆ ಕಥೆ ಹೇಳಿದ್ದಾರಂತೆ. ಆದರೆ, ರಜಿನಿಕಾಂತ್ ಅವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನುವುದು ಈಗ ಕುತೂಹಲ ಕೆರಳಿಸಿದೆ.

    English summary
    Superstar Rajinikanth and Ilayaraja will reunite after 28 years for director R Balki. Filmmaker R. Balki met Rajini and narrated a story to him and also met music composer Ilayaraja in his Rajini project.
    Tuesday, December 21, 2021, 9:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X