ಕರಣ್ ಜೋಹರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಸಮಂತಾ!?
ಇತ್ತೀಚೆಗೆ ಸೌತ್ ಮತ್ತು ನಾರ್ತ್ ಸಿನಿಮಾ ಇಂಡಸ್ಟ್ರಿಗಳ ನಡುವೆ ಅಂತಹ ವ್ಯತ್ಯಾಸ ಕಾಣಿಸುತ್ತಿಲ್ಲ. ಅದರಲ್ಲೂ ಹೆಚ್ಚಿನ ನಟ, ನಟಿಯರು ಎಲ್ಲಾ ಕಡೆ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಕಾನ್ಸೆಪ್ಟ್ ಹೆಚ್ಚಾಗಿದ್ದು, ಭಾಷೆಗಳ ಗಡಿ ದಾಟಿಯಾಗಿದೆ. ದಕ್ಷಿಣದ ನಟ, ನಟಿಯರು ಬಾಲಿವುಡ್‌ನಲ್ಲಿ, ಬಾಲಿವುಡ್ ನಟ, ನಟಿಯರು ದಕ್ಷಿಣದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆಯಾಗಿ ಕೆಜಿಎಫ್ ಚಿತ್ರವಿದೆ. ಇನ್ನು ಇತ್ತೀಚಿನ ಉದಾಹರಣೆಯೆಂದರೆ ಶಾರುಖ್ ಖಾನ್ ಅವರ 'ಜವಾನ್' ಸಿನಿಮಾ ಬ್ಲಾಕ್ಬಸ್ಟರ್ ಯಶಸ್ಸು ಪಡೆಯಲು ಕಾರಣ ದಕ್ಷಿಣ ಸಿನಿಮಾರಂಗ. ಇದನ್ನು ಅವರೇ ಹೇಳಿದ್ದಾರೆ. ಈ ಯಶಸ್ಸು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗೆ ಸಲ್ಲಬೇಕು ಎಂದು.

ಸಲ್ಮಾನ್ ಜೊತೆಗೆ ಸಮಂತಾ!
ಸದ್ಯ ಮತ್ತೊಬ್ಬ ದಕ್ಷಿಣ ಭಾರತದ ನಟಿ ಹಿಂದಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಸಿಯಾಸತ್ ಪ್ರಕಟಿಸಿದ ವರದಿಯಂತೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಮುಂಬರುವ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಸಮಂತಾ ರುತ್ ಪ್ರಭು ಜೋಡಿಯಾಗುವ ಸಾಧ್ಯತೆಯಿದೆ. ಶೇರ್ಷಾ ಸಿನಿಮಾದಿಂದ ಖ್ಯಾತರಾದ ನಿರ್ದೇಶಕ ವಿಷ್ಣುವರ್ಧನ್ ಅವರು ಈ ಸಿನಿಮಾ ಮಾಡಲಿದ್ದು, ಸಮಂತಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
"ಇದೊಂದು ವಿಶೇಷ ಪ್ರಾಜೆಕ್ಟ್. ನವೆಂಬರ್ 2023 ರಲ್ಲಿ ಚಲನಚಿತ್ರ ಆರಂಭ ಮಾಡಲು ಚಿತ್ರತಂಡ ತಯಾರಾಗಿದೆ. ಶೇರ್ಷಾ ನಂತರ ಇದು ವಿಷ್ಣುವರ್ಧನ್ ಅವರ ಎರಡನೇ ಹಿಂದಿ ಸಿನಿಮಾವಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸವು ಆಗಸ್ಟ್ 2023 ರಿಂದ ಪ್ರಾರಂಭವಾಗಿದೆ. ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಲಾಗುತ್ತಿದೆ" ಎಂದು ಮೂಲವೊಂದು ತಿಳಿಸಿದೆ.

ಆಗಸ್ಟ್‌ನಲ್ಲಿ ಶುರುವಾದ ಸಿನಿಮಾ ಮಾತುಕತೆ
ಈ ವರ್ಷದ ಆಗಸ್ಟ್‌ನಲ್ಲಿ ಕರಣ್ ಜೋಹಾರ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಮೊದಲ ಬಾರಿಗೆ ಕೇಳಿ ಬಂದಿತ್ತು. 1998 ರ ಚಲನಚಿತ್ರ ಕುಚ್ ಕುಚ್ ಹೋತಾ ಹೈನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಇದಾದ 25 ವರ್ಷಗಳ ನಂತರ ಸಲ್ಮಾನ್ - ಕರಣ್ ಜೋಡಿ ಮತ್ತೆ ಒಂದಾಗಲಿದೆ.
ಪಿಂಕ್ವಿಲ್ಲಾ ವರದಿತಂತೆ "ಕಳೆದ 6 ತಿಂಗಳಿಂದ ಸಲ್ಮಾನ್ ಖಾನ್, ಕರಣ್ ಜೋಹಾರ್ ಮತ್ತು ವಿಷ್ಣುವರ್ಧನ್ ಈ ಬೃಹತ್ ಆಕ್ಷನ್ ಫಿಲಂಗಾಗಿ ಮಾತುಕತೆ ನಡೆಸುತ್ತಿದ್ದಾರೆ. ಎಲ್ಲವೂ ಅಂತಿಮವಾಗಿದೆ. ಇದು ಟೈಗರ್ 3 ರ ನಂತರ ಆರಂಭವಾಗಲಿದೆ. ಚಿತ್ರವು ನವೆಂಬರ್ 2023 ರಲ್ಲಿ ಪ್ರಾರಂಭವಾಗಲಿದೆ. ಸುಮಾರು 7 ರಿಂದ 8 ತಿಂಗಳ ಅವಧಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಹೆಸರಿಡದ ಆಕ್ಷನ್ ಫಿಲಂ 2024 ರ ಅತಿದೊಡ್ಡ ಚಿತ್ರವಾಗಲಿದ್ದು, ಯಾವುದಾದರೂ ದೊಡ್ಡ ಹಬ್ಬಕ್ಕೆ ಬಿಡುಗಡೆಯಾಗಲಿದೆ" ಎಂದಿದೆ.
ನಟ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಟೈಗರ್ 3 ಈ ದೀಪಾವಳಿಯಲ್ಲಿ ಥಿಯೇಟರ್‌ಗಳಿಗೆ ಬಿಡುಗಡೆಯಾಗಲಿದೆ. ಇದಲ್ಲದೆ, ಅವರು ಯಶ್ ರಾಜ್ ಫಿಲಂನ ಟೈಗರ್ ವರ್ಸಸ್ ಪಠಾಣ್ ಸಿನಿಮಾ ಮಾಡಲಿದ್ದಾರೆ. ಇತ್ತ, ನಟಿ ಸಮಂತಾ ಕೊನೆಯದಾಗಿ ವಿಜಯ್ ದೇವರಕೊಂಡ ಜೊತೆಗೆ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಸಿಟಾಡೆಲ್ ಸೀರಿಸ್‌ನ ಭಾರತೀಯ ಆವೃತ್ತಿಯಲ್ಲಿ ವರುಣ್ ಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











