twitter
    For Quick Alerts
    ALLOW NOTIFICATIONS  
    For Daily Alerts

    ವಿಚಿತ್ರ ಮೂಢನಂಬಿಕೆ ಸುಳಿಯಲ್ಲಿ ಬಾಲಿವುಡ್ ತಾರೆಯರು

    By Srinath
    |

    ಮುಂಬೈ: ಮೂಢನಂಬಿಕೆ ಯಾರಿಗಿಲ್ಲ ಹೇಳಿ. ಮೂಢನಂಬಿಕೆ ಇಲ್ಲ ಅನ್ನುವವರೇ ವಿರಳ. ಜನಸಾಮಾನ್ಯರಲ್ಲಂತೂ ಮೂಢನಂಬಿಕೆಗಳು ತುಂಬಿ ತುಳಿಕುತ್ತಿರುತ್ತವೆ. ಇವುಗಳಲ್ಲಿ ಬಹಳಷ್ಟು ಮೂಢನಂಬಿಕೆಗಳು ಅಸಹಾಯಕತೆಯಿಂದ ಹುಟ್ಟಿರುತ್ತವೆ ಎಂಬುದು ಗಮನಾರ್ಹ. ಆದರೆ ಅದೇನು ಸಕಾರಣವಾಗಿ ಅಥವಾ ಪರಿಸ್ಥಿತಿಯ ವ್ಯಂಗ್ಯವೋ ಅವರವರೇ ಹೇಳಬೇಕು.

    ಆದರೆ ವೈಜ್ಞಾನಿಕವಾಗಿ ವಿಶ್ಲೇಷಿಸಿ ಇದು ಎಷ್ಟರಮಟ್ಟಿಗೆ ನಿಜ ಎಂದು ಪ್ರಶ್ನಿಸುವುದಕ್ಕಿಂತ ಅವರವರ ನಂಬಿಕೆಗೆ ಬಿಡುವುದು ಒಳಿತು. ಅದರಿಂದ ಅವರವರಿಗೆ ಒಳ್ಳೆಯದು ಆಗುತ್ತದೆ ಅನ್ನುವುದಾದರೆ ಬೇಡ ಎನ್ನಲು ದೊಣ್ಣೆನಾಯಕ ಏಕೆ ಬೇಕು?

    ಆದರೆ ಈ ಮೂಢನಂಬಿಕೆ ವಿಷಯಕ್ಕೆ ಬಂದಾಗ ಮತ್ತೊಂದು ವರ್ಗ ಗೋಚರವಾಗುತ್ತದೆ. ಅವರಿಗೆ ಜೀವನದಲ್ಲಿ ಎಲ್ಲ ಇರುತ್ತದೆ. ಸುಖ, ಸಂಪತ್ತು ಎಲ್ಲ ಇರುತ್ತದೆ. ಆದರೆ ಅದರ ಜತೆಗೆ ತುಸು ಹೆಚ್ಚೇ ಅನಿಸುವಷ್ಟು ಈ ಮೂಢನಂಬಿಕೆಯೂ ಅಂಟಿಕೊಂಡಿರುತ್ತದೆ.
    ಅವರೇ so-called Bollywood celebreties.

    ಅದರಲ್ಲೂ ನಮ್ಮ ಚಿತ್ರರಂಗದ ಮಂದಿಗೆ ಇದು ಹೆಚ್ಚು. ಬನ್ನೀ ನೋಡೋಣ ಈ ಮೂಢನಂಬಿಕೆ ಸುಳಿಯಲ್ಲಿ ತೇಲುತ್ತಿರುವ ಬಾಲಿವುಡ್ ತಾರೆಯರನ್ನು... ಅದೃಷ್ಟದ ಬೆನ್ನೇರಿ ಬಾಲಿವುಡ್ ಮಂದಿ ...

    ನಂಬರ್ ಒನ್ ಗೇಮ್

    ನಂಬರ್ ಒನ್ ಗೇಮ್

    ಸದ್ಯಕ್ಕೆ ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ನಂಬರ್ 1. ಆದರೆ ಅವರಿಗೆ ಯಾಕೋ ಈ ನಂಬರ್ ಮೇಲೆ ನಂಬಿಕೆಯಿಲ್ಲ. ಅವರಿಗೆ ನಂಬರ್ 1 ಸ್ಥಾನ ಬೇಕು. ಆದರೆ ಸಂಖ್ಯೆ 1 ಬೇಡ ! ಅವರಿಗಿಷ್ಟವಾದ ಸಂಖ್ಯೆ 555. ಶಾರೂಕ್ ಖಾನ್ ಅವರ ಎಲ್ಲ ಕಾರುಗಳ ನೋಂದಣಿ ಸಂಖ್ಯೆ 555 ಆಗಿದೆ.

    ಮೊದಲ ಬಾದಷಾನ ಮೂಢನಂಬಿಕೆ:

    ಮೊದಲ ಬಾದಷಾನ ಮೂಢನಂಬಿಕೆ:

    ಶಾರೂಕ್ ಇಂದು ಬಾಲಿವುಡ್ ನ ಮೊದಲ ಬಾದ್ ಷಾ ಆಗಿರಬಹುದು. ಆದರೆ ಬಾಲಿವುಡ್ ನಲ್ಲಿ ಮೊದಲು ಬಾದ್ ಷಾ ಆಗಿದ್ದು ಅಮಿತಾಭ್ ಬಚ್ಚನ್. ಆತನಿಗೂ ಮೂಢನಂಬಿಕೆ ಅಂಡಿಕೊಂಡಿತು. ಆ ದುರ್ಭರ ದಿನಗಳಲ್ಲಿ ಅಮಿತಾಭ್ ಅಮಿತಾಭ್ ಆಗಿರಲಿಲ್ಲ ಬಿಡಿ. ಸೋಲಿನ ಸರಪಳಿ ಅವರನ್ನು ಕಟ್ಟಿಹಾಕಿತ್ತು. ಆ ಬಂಧನದಿಂಧ ಬಿಡಿಸಿಕೊಳ್ಳಲು ಜ್ಯೋತಿಷಿಯನ್ನು ಸಂಪರ್ಕಿಸಿದರು.
    ಆಗ ಜ್ಯೋತಿಷಿ ಕೊಟ್ಟ ಸಲಹೆ ಏನು ಗೊತ್ತಾ? 'ನೀಲಿ ಬಣ್ಣದ ಸಫೈರ್ ರಿಂಗ್ ಅನ್ನು ಬಲಗಾಲಿನಿಂದ ತುಳಿಯಿರಿ' ಎಂದು.
    ಮನೆಗೆ ಬಂದವರೇ ಜ್ಯೋತಿಷಿ ಹೇಳಿದಂತೆ ಅಮಿತಾಭ್ ನೀಲಿ ರಿಂಗನ್ನು ತುಳಿದೇ ಬಿಟ್ಟರು. ಆಗ ತೆರೆದುಕೊಂಡ ಅದೃಷ್ಟ ಬಾಗಿಲಿನಿಂದ ಒಳಹೊಕ್ಕ ಅಮಿತಾಭ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ನೀಲಿ ರಿಂಗು ತುಳಿಯುತ್ತಿದ್ದಂತೆ KBC ಅವರು ಕಂಡ ಮೊದಲ ಯಶಸ್ಸು.

    ಈದ್ ಅಂದರೆ ಭಯ-ಭಕ್ತಿ ಜಾಸ್ತಿ:

    ಈದ್ ಅಂದರೆ ಭಯ-ಭಕ್ತಿ ಜಾಸ್ತಿ:

    ಹಬ್ಬದ ಪವಿತ್ರ/ಶುಭ ದಿನದಂದೇ ತನ್ನ ಹೊಸ ಸಿನಿಮಾಗಳು ಬಿಡುಗಡೆ ಆಗಬೇಕು ಎಂಬುದು ಸಲ್ಮಾನ್ ಖಾನ್ (ಮೂಢ) ಷರತ್ತು. ಜತೆಗೆ, ನೀಲಿ ಸಫೈರ್ ಬ್ರೇಸ್ ಲೆಟ್ ಅನ್ನು ಮುಂಗೈನಲ್ಲಿ ಝಳಪಿಸುತ್ತಿರುತ್ತಾರೆ.

    ಶೀಲಾ ಕಿ ಜವಾನಿಯ ಅಜ್ಮೀರ್ ಪ್ರೇಮ:

    ಶೀಲಾ ಕಿ ಜವಾನಿಯ ಅಜ್ಮೀರ್ ಪ್ರೇಮ:

    ಶೀಲಾ ಕಿ ಜವಾನಿ ಖ್ಯಾತಿಯ ಕತ್ರಿನಾ ಕೈಫ್ ಸೊಂಟವನ್ನು ಯಾರು ತಾನೇ ಮರೆಯುತ್ತಾರೆ ಹೇಳಿ. ಇಂತಿಪ್ಪ ಕತ್ರಿನಾ ತನ್ನ ಮೊದಲಾ ಚಿತ್ರದಲ್ಲೇ ಸೊಂಟದ ಕೆಳಗೆ ಚಿಕ್ಕ ಚಡ್ಡಿ ನೇತಾಡಿಸಿಕೊಂಡು ಮೆರೆದಿದ್ದಳು. ಅದನ್ನು ನೋಡಿ ಸಿನಿಮಾ ಮಂದಿ ಬಾಯಿ ಚಪ್ಪರಿಸಿದ್ದರು. ಆದರೆ ಅಜ್ಮೀರ್ ದಲ್ಲಿರುವ ಖ್ವಾಜಾ ಮೊಯಿನುದ್ದೀನ್ ಬಳಿ ಈ ಚಿತ್ರದ ಶೂಟಿಂಗ್ ನಡೆಯುವಾಗ ಅಜ್ಮೀರ್ ಮೌಲ್ವಿಗಳು ಕತ್ರಿನಾ ಧರಿಸಿದ್ದ ಚಿಕ್ಕ ಚಡ್ಡಿಯತ್ತ ಕೆಂಗಣ್ಣು ಬೀರಿದ್ದರು.
    ಆದರೆ ತುಂಡುಡುಗೆಯ ಕತ್ರಿನಾಗೆ ಅಜ್ಮೀರ್ ಮೌಲ್ವಿಗಳ ಬಗ್ಗೆ ಸ್ವಲ್ಪವೂ ಬೇಜಾರಿಲ್ಲ. Infact ತನ್ನ ಯಾವುದೇ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ಸೈಲೆಂಟಾಗಿ ಅಲ್ಲಿನ ದರ್ಗಾಕ್ಕೆ ತೆರಳಿ ಒಂದು ಸಲಾಂ ಹಾಕಿ ಬರುತ್ತಾಳೆ. ಹಾಗೆ ಮಾಡುವುದರಿಂದ ತನ್ನ ಅದೃಷ್ಟ ಖುಲಾಯಿಸಿದೆ ಎಂಬುದು ಕತ್ರಿನಾ (ಮೂಢ) ನಂಬಿಕೆ.

    ವಿದ್ಯಾಳನ್ನು ಕಾಡುವ ಕಾಡಿಗೆ:

    ವಿದ್ಯಾಳನ್ನು ಕಾಡುವ ಕಾಡಿಗೆ:

    'ಡರ್ಟಿ ಪಿಕ್ಚರ್' ಖ್ಯಾತಿಯ ವಿದ್ಯಾ ಬಾಲನ್ ಗೊತ್ತಲ್ಲಾ? ದಕ್ಷಿಣ ಭಾರತದ ಈ ಕಣ್ಮಣಿಯು ಕಣ್ಣಿಗೆ ತೀಡುವ ಕಾಡಿಗೆ ಹಷ್ಮಿ ಬ್ರಾಂಡಿನದ್ದೇ ಆಗಬೇಕು ಅಂತ ಹಠ ಹಿಡೀತಾಳೆ. ಇದನ್ನು ತಯಾರಿಸುವುದು ಪಾಕಿಸ್ತಾನದಲ್ಲಿ ಮಾತ್ರ. 'ಹಷ್ಮಿ ಕಾಡಿಗೆ ಹಚ್ಚಿಕೊಂಡರೆ ನನಗೆ ಅದೃಷ್ಟ ಖುಲಾಯಿಸುತ್ತದೆ' ಎಂದು ಕಣ್ಮಿಟಿಕಿಸುತ್ತಾಳೆ ತುಂಟಿ.

    ಮೇರುತಾರೆಗೆ ವಿಪರೀತ ಮೂಢನಂಬಿಕೆ ಗೀಳು:

    ಮೇರುತಾರೆಗೆ ವಿಪರೀತ ಮೂಢನಂಬಿಕೆ ಗೀಳು:

    ದಿವಂಗತ ನಂದಮೂರಿ ತಾರಕ ರಾಮಾರಾವ್ ಅವರನ್ನು ಯಾರು ತಾನೇ ಮರೆಯಲು ಸಾಧ್ಯ. ಅವರಿಗೆ ವಿಪರೀತ ಅನಿಸುವಷ್ಟು ಮೂಢನಂಬಿಕೆಯ ಗೀಳು ಇತ್ತು. ಕಿವಿಗೆ ಮುರುಕು ಧರಿಸುತ್ತಿದ್ದರು. ವಿಶೇಷ ಸಂದರ್ಭಗಳಲ್ಲಿ ವಿವೇಕಾನಂದರ ಮಾದರಿ ಮುಂಡಾಸು ಧರಿಸುತ್ತಿದ್ದರು. ನೆಲದ ಮೇಲೆ ಮಲಗುತ್ತಿದ್ದರು. ಬೆಳಗಿನ ಜಾವ 3 ಗಂಟೆಗೆಲ್ಲ ನಿದ್ದೆ ಶಾಸ್ತ್ರ ಮುಗಿಸಿಬಿಡುತ್ತಿದ್ದರು.

     ಹೆಸರಿಗೆ ಒತ್ತು/ ಕುತ್ತು:

    ಹೆಸರಿಗೆ ಒತ್ತು/ ಕುತ್ತು:

    ಹೌದು ಅಪ್ಪ-ಅಮ್ಮ ಇಷ್ಟಪಟ್ಟು ಇಟ್ಟ ಹೆಸರಿಗೇ ಕುತ್ತು ತರುವವರೂ ಇದ್ದಾರೆ. ಆದರೆ ಹಾಗೆ ಹೆಸರು ಬದಲಿಸಿಕೊಂಡು ದೊಡ್ಡ ತಾರೆಯಾಗಿ ಅದೇ ಅಪ್ಪ-ಅಮ್ಮ ಹೆಮ್ಮೆ ಪಡುವಂತೆ ಸಾಧನೆ ಮಾಡುವವರೂ ಇದ್ದಾರೆ. ಅದೆಲ್ಲಾ ಮೂಢನಂಬಿಕೆಯ ಪರಿಣಾಮ. ಅಜಯ್ ದೇವಗನ್ ಇದ್ದಾರಲ್ಲಾ? ಅವರ ಮೊದಲಾ ಹೆಸರು ವಿಶಾಲ್! ಆದರೆ ಇನ್ನೇನು ಬಾಲಿವುಡ್ ಗೆ ಎಂಟ್ರಿ ಹಾಕಬೇಕು ಅನ್ನುವಷ್ಟರಲ್ಲಿ ಆ ಹೆಸರಿಗೆ ತಿಲಾಂಜಲಿಯಿಟ್ಟು ಅಜಯ್ ದೇವಗನ್ ಆಗಿಬಿಟ್ಟರು. ಅಷ್ಟೇ ಅಲ್ಲ ಜ್ಯೋತಿಷಿಯೊಬ್ಬರ ಮಾತು ಕೇಳಿ ತಮ್ಮ ಹೆಸರಿನಲ್ಲಿದ್ದ ಒಂದು a ಅನ್ನು ಕಿತ್ತು ಹಾಕಿ Ajay Devgn ಆಗಿಬಿಟ್ಟರು.

    ಬಾಲಿವುಡ್ ಅಮೀರನ ಸಣ್ಣ ಮೂಢನಂಬಿಕೆ!

    ಬಾಲಿವುಡ್ ಅಮೀರನ ಸಣ್ಣ ಮೂಢನಂಬಿಕೆ!

    ಸಲ್ಮಾನ್ ಹಾದಿಯಲ್ಲಿ ಹಬ್ಬ-ಹರಿ ದಿನಕ್ಕೆ ಜೋತುಬೀಳುವವರು ಅಮೀರ್ ಖಾನ್. ಡಿಸೆಂಬರ್ ಮಾಸ ಅಂದರೆ ಅಮೀರ್ ಖಾನ್ ಗೆ ಅದೇನೋ ಅಭಿಮಾನ/ಪ್ರೀತಿ. ಹಾಗಾಗಿಯೇ ಡಿಸೆಂಬರ್ ತಿಂಗಳಿನಲ್ಲಿಯೇ ಹೊಸ ಯೋಜನೆಗೆ ಕೈಹಾಕುತ್ತಾರೆ. ತಲಾಶ್, 3 ಈಡಿಯಟ್ಸ್, ಗಜನಿ, ತಾರೆ ಜಮೀನ್ ಪರ್ ಇವೆಲ್ಲಾ ಬಿಡುಗಡೆಯಾಗಿದ್ದು ಡಿಸೆಂಬರಿನಲ್ಲೇ. ಅದು ಬಾಲಿವುಡ್ ಅಮೀರನ ಸಣ್ಣ ಮೂಢನಂಬಿಕೆ!

    English summary
    Superstitiously superstars in Bollywood astrology galores. For exapmle Number one isn't enough for Shah Rukh Khan. Reportedly, all of SRK’s cars bear the registration number 555. The Badshah refuses to possess a four wheeler that doesn’t have his lucky number inscribed.
    Wednesday, March 13, 2013, 14:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X