ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಹೀರೋಯಿನ್ ಅವರೇನಾ?
ಸೌತ್ ಇಂಡಿಯಾದ ಸ್ಟಾರ್ ಐಕಾನ್ ಎನಿಸಿಕೊಂಡಿರುವ ನಟ ವಿಜಯ್ ದೇವರಕೊಂಡ ಈಗ ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಚಾರ್ಮಿ ಮತ್ತು ಪೂರಿ ನಿರ್ಮಿಸುತ್ತಿರುವ 'ಜನಗಣಮನ' ಚಿತ್ರದಲ್ಲಿ ದೇವರಕೊಂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ದೇವರಕೊಂಡ ಅವರಿಗೆ ಯಾರು ನಾಯಕಿಯಾಗಿ ಬರಬಹುದು ಎಂಬ ಕುತೂಹಲ ಕಾಡ್ತಿದೆ. ವಿಜಯ್ ಜೊತೆ ಈ ನಟಿಯನ್ನ ನೋಡಬೇಕು, ಈ ಹೀರೋಯಿನ್ ಇದ್ದರೇ ಚೆಂದ ಎನ್ನುವ ಅಭಿಮಾನಿಗಳಿದ್ದಾರೆ.
ಆದ್ರೆ, ಅಭಿಮಾನಿಗಳ ಲೆಕ್ಕಾಚಾರವನ್ನೇ ಉಲ್ಟಾ ಮಾಡಿರುವ ಪೂರಿ ಜಗನ್ನಾಥ್ ಮತ್ತು ಚಾರ್ಮಿ, ದೇವರಕೊಂಡಗಾಗಿ ಚೆಂದದ ಗೊಂಬೆಯನ್ನ ಕರೆತರಲು ಸಜ್ಜಾಗಿದ್ದಾರೆ. ಯಾರದು? ಮುಂದೆ ಓದಿ....

ಯಾರೂ ನಿರೀಕ್ಷೆ ಮಾಡಿರಲಿಲ್ಲ
ವಿಜಯ್ ದೇವರಕೊಂಡ ಜೊತೆ ಮುಂದಿನ ಸಿನಿಮಾದಲ್ಲಿ ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್ ಹೀಗೆ ಸೌತ್ ಇಂಡಸ್ಟ್ರಿಯವರು ಯಾರೋ ಒಬ್ಬರು ನಾಯಕಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಯಾರ ನಿರೀಕ್ಷೆಗೆ ನಿಲುಕದ ಹೆಸರು ಈಗ ಕೇಳಿ ಬಂದಿದೆ. ಬಾಲಿವುಡ್ ಚೆಲುವೆಯೊಬ್ಬರನ್ನ ಸೌತ್ ಗೆ ಕರೆತರುವ ಪ್ಲಾನ್ ಆಗಿದೆ.

ದೇವರಕೊಂಡ ಜೊತೆ ಶ್ರೀದೇವಿ ಮಗಳು
ಪೂರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ 'ಜನಗಣಮನ' ಚಿತ್ರಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರನ್ನ ಕರೆತರುವ ಚಿಂತನೆ ಮಾಡಿದ್ದಾರಂತೆ. ಈ ಮೂಲಕ ಶ್ರೀದೇವಿ ಮಗಳನ್ನ ಸೌತ್ ಇಂಡಸ್ಟ್ರಿಗೆ ಕರೆತರುವ ಪ್ಲಾನ್ ಆಗಿದೆ.

ಜಾಹ್ನವಿ ದೇವರಕೊಂಡಗೆ ಅಭಿಮಾನಿ
ಶ್ರೀದೇವಿ ಮಗಳು ಜಾಹ್ನವಿ ಕಪೂರ್ 'ದಢಕ್' ಎಂಬ ಸಿನಿಮಾ ಮಾಡಿದ್ದರು. ಈ ಮುಂಚೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ''ನಾನು ವಿಜಯ್ ದೇವರಕೊಂಡಗೆ ದೊಡ್ಡ ಅಭಿಮಾನಿ'' ಎಂದು ಜಾಹ್ನವಿ ಹೇಳಿಕೊಂಡಿದ್ದರು. ಇದೀಗ, ತಮ್ಮ ನೆಚ್ಚಿನ ನಟನ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಬಹುಶಃ ಮಿಸ್ ಮಾಡಿಕೊಳ್ಳುವುದಿಲ್ಲ ಅನ್ಸುತ್ತೆ.

ಸೌತ್ ಗೆ ಬರಬೇಕು ಎಂಬ ಆಸೆ
ಜಾಹ್ನವಿ ಕಪೂರ್ ಅವರ ಲಾಂಚ್ ಸೌತ್ ಇಂಡಿಯಾದಲ್ಲೇ ಆಗಬೇಕು ಎಂಬ ಆಸೆ ಹಲವರಿಗಿತ್ತು. ಯಾಕಂದ್ರೆ, ಶ್ರೀದೇವಿ ಎಂಟ್ರಿ ಕೂಡ ಇಲ್ಲೇ ಆಗಿತ್ತು. ಬಟ್, ಜಾಹ್ನವಿ ವಿಷ್ಯದಲ್ಲಿ ಅದು ಆಗಲಿಲ್ಲ. ಈಗ ಇನ್ನೊಂದು ಅವಕಾಶ ಸಿಕ್ಕಿದೆ. ಬಹುಶಃ, ವಿಜಯ್ ದೇವರಕೊಂಡ ಸಿನಿಮಾ ಎಂಬ ಕಾರಣಕ್ಕೆ ಜಾಹ್ನವಿ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ.

ಎರಡನೇ ಸ್ಕ್ರಿಪ್ಟ್ ಇದು
ಅಂದ್ಹಾಗೆ, ಪೂರಿ ಜಗನ್ನಾಥ್ ಈ ಮುಂಚೆಯೇ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಬೇಕಿತ್ತಂತೆ. ಪೂರಿ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಸಿನಿಮಾದಲ್ಲಿ ವಿಜಯ್ ನಾಯಕನಾಗಬೇಕಿತ್ತಂತೆ. ಡೇಟ್ ಸಿಗದ ಕಾರಣ ಆ ಜಾಗಕ್ಕೆ ರಾಮ್ ಬಂದರಂತೆ. ಈಗ ಅದಕ್ಕಿಂತೆ ಹೆಚ್ಚು ಮಾಸ್ ಆಗಿರುವ ಇನ್ನೊಂದು ಸ್ಕ್ರಿಪ್ಟ್ ನಲ್ಲಿ ಇಬ್ಬರು ಒಟ್ಟಾಗಿದ್ದಾರೆ. ಬಹುಶಃ ಇದು 'ಇಸ್ಮಾರ್ಟ್ ಶಂಕರ್' ಚಿತ್ರಕ್ಕಿಂತ ಹೆಚ್ಚು ಮಾಸ್ ಆಗಿರುತ್ತೆ ಎನ್ನಲಾಗುತ್ತಿದೆ.


Click it and Unblock the Notifications











