29ರ ಯುವಕನ ಜೊತೆ 43ರ ಸುಶ್ಮಿತಾ ಸೇನ್ ನಿಶ್ಚಿತಾರ್ಥ ಮಾಡಿಕೊಂಡ್ರಾ?
ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಮತ್ತೆ ಖಾಸಗಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಪದೇ ಪದೇ ಬಾಯ್ ಫ್ರೆಂಡ್ ಗಳ ಹೆಸರು ಬದಲಾಗುತ್ತಿದ್ದರೂ ಯಾರ ಜೊತೆಯೂ ಮದುವೆಯಾಗದ ಈ ನಟಿ ಈಗ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್ ನಲ್ಲಿದ್ದಾರೆ.
ಆದ್ರೆ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ನಟಿ ಸುಶ್ಮಿತಾ ಸೇನ್, ರೋಹ್ಮಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ನಲ್ಲಿ ಕೇಳಿ ಬರುತ್ತಿವೆ.
ಟಾಪ್ ಬ್ಯೂಟಿ ಇದುವೆರಗೂ ಮದುವೆಯಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆಗಾಗ ಸುಶ್ಮಿತಾ ಹೆಸರು ಕೆಲವರ ಜೊತೆ ಲಿಂಕ್ ಅಪ್ ಆದರು ಮದುವೆ ವರೆಗೂ ಹೋಗಿರಲ್ಲಿಲ್ಲ. ಆದ್ರೀಗ ಮಾಜಿ ವಿಶ್ವ ಸುಂದರಿಯ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮುಂದೆ ಓದಿ..

ನಿಶ್ಚಿತಾರ್ಥದ ಉಂಗುರ ಧರಿಸಿರುವ ಸುಶ್ಮಿತಾ
ಇತ್ತೀಚಿಗಷ್ಟೆ ಇನ್ಸ್ಟಾಗ್ರಾಮ್ ನಲ್ಲಿ ರೋಹ್ಮಾನ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದರು ಸುಶ್ಮಿತಾ. ಆ ಫೋಟೋದಲ್ಲಿ ಸುಶ್ಮಿತಾ ಕೈ ಬೆರಳಿನಲ್ಲಿ ನೀಲಿ ಸ್ಟೋನ್ ಮತ್ತು ವಜ್ರದ ಹರಳಿರುವ ಉಂಗುರ ಧರಿಸಿದ್ದಾರೆ. ಇದನ್ನ ನೋಡಿದ ನೆಟ್ಟಿಗರು ಮಾಜಿ ವಿಶ್ವಸುಂದರಿ ರೋಹ್ಮಾನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಭಾರಿ ಚರ್ಚೆ ನಡೆಸುತ್ತಿದ್ದಾರೆ.

ಯಾರು ಈ ರೋಹ್ಮಾನ್?
ಅಂದ್ಹಾಗೆ, ರೋಹ್ಮಾನ್ ಶಾಲ್ ಖ್ಯಾತ ಮಾಡೆಲ್. ಈ ಹ್ಯಾಂಡ್ ಸಮ್ ಹುಡುಗ ಸುಶ್ಮಿತಾಗೆ ಜಿಮ್ ನಲ್ಲಿ ಪರಿಚಯವಾಗಿದ್ದಾರಂತೆ. ಅಲ್ಲಿಂದ ಇಬ್ಬರ ಸ್ನೇಹ ಶುರುವಾಗಿದ್ದು, ಈ ಗೆಳೆತನ ಪ್ರೀತಿಗೆ ತಿರುಗಿ ಈಗ ಮದುವೆ ವರೆಗೂ ಬಂದಿದೆ ಎಂದು ಹೇಳಲಾಗುತ್ತಿದೆ.

43 ವರ್ಷದ ಸುಶ್ಮತಾ 29 ವರ್ಷದ ರೋಹ್ಮಾನ್
ಸುಶ್ಮಿತಾ ಸೇನ್ ಅವರಿಗೆ 43 ವರ್ಷ. ಆದ್ರೆ ಗೋಹ್ಮಾನ್ ಇನ್ನು 29ವರ್ಷದ ಯುವಕ. ಇಬ್ಬರ ನಡುವೆ ಬರೊಬ್ಬರಿ 14 ವರ್ಷಗಳ ಅಂತರವಿದೆ. ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇತ್ತೀಚಿಗಷ್ಟೆ 35ವರ್ಷದ ಪ್ರಿಯಾಂಕಾ ಚೋಪ್ರ 25ವರ್ಷದ ನಿಕ್ ಜೋನಸ್ ಜೊತೆ ಮದುವೆಯಾದಾಗಲು ಇಬ್ಬರ ವಯಸ್ಸಿನ ಅಂತರ ಭಾರಿ ಚರ್ಚೆಯಾಗಿತ್ತು.

ಇಬ್ಬರು ಮಕ್ಕಳನ್ನು ದತ್ತು ಪಡೆದಿರುವ ಸುಶ್ಮಿತಾ
ಇನ್ನು ಮದುವೆಯಾಗದ ಸುಶ್ಮಿತಾ ಸೇನ್ ಇಬ್ಬರು ಮಕ್ಕಳನ್ನು ದತ್ತು ಪಡೆದು ಖುಷಿಯಾಗಿದ್ದಾರೆ. 2000ರಲ್ಲಿ ಮೊದಲ ಮಗು ರೆನೀಯನ್ನು ದತ್ತು ಪಡೆದ ಸುಶ್ಮಿತಾ ಆ ನಂತರ ಎರಡನೆ ಮಗು ಅಲಿಶಾ ಅವರನ್ನು ದತ್ತು ಪಡೆದಿದ್ದಾರೆ. ಈ ಇಬ್ಬರು ಮಕ್ಕಳ ಜೊತೆಯೂ ರೋಹ್ಮಾನ್ ಒಡನಾಟ ತುಂಬಾ ಚೆನ್ನಾಗಿದೆಯಂತೆ.

ಮಿಸ್ ಯೂನಿವರ್ಸ್ 1994
1994ರ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಸುಶ್ಮಿತಾ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಕಿರೀಟವನ್ನು ಧರಿಸಿ ಹೆಮ್ಮೆಯಿಂದ ಬೀಗಿದ್ರು. ಮಿಸ್ ಯೂನಿವರ್ಸ್ ಗೆದ್ದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆ ಕೂಡ ಸುಶ್ಮಿತಾ ಅವರಿಗಿದೆ. ಸಾಕಷ್ಟು ಬ್ಯೂಟಿ ಕಾಂಪಿಟೀಷನ್ ನಲ್ಲಿ ಭಾಗಿಯಾಗಿ ಗೆದ್ದಿರುವ ಸುಶ್ಮಿತಾ ಈಗ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ.


Click it and Unblock the Notifications











