For Quick Alerts
  ALLOW NOTIFICATIONS  
  For Daily Alerts

  ದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತ

  |

  ದೊಡ್ಡ ಸ್ಟಾರ್ ನಟನೊಂದಿಗೆ ತೆರೆ ಮೇಲೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾರಿ ಮೊತ್ತವನ್ನೇ ಕೇಳಿದ್ದಾರೆ.

  ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ತೆಲುಗಿನ ದೊಡ್ಡ ನಟ ಬಾಲಕೃಷ್ಣ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ನಟಿಯನ್ನು ಈ ಬಗ್ಗೆ ಸಂಪರ್ಕಿಸಿದಾಗ ಭಾರಿ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಇದು ನಿರ್ಮಾಪಕರ ಹುಬ್ಬೇರುವಂತೆ ಮಾಡಿದೆ.

  ತಮನ್ನಾ ಅವರ ಪ್ರತಿನಿತ್ಯದ ಫುಡ್ ಸ್ಟೈಲ್ ಹೇಗಿರುತ್ತೆ ? | TAMANNAAH | FILMIBEAT KANNADA

  ಹಿರಿಯ ನಟ ಬಾಲಕೃಷ್ಣ ಗೆ ನಾಯಕಿಯಾಗಿ ನಟಿಸಲು ತಮನ್ನಾ ಭಾಟಿಯಾ ಮೂರು ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರಂತೆ. ಅಷ್ಟು ಹಣ ಕೊಟ್ಟರಷ್ಟೆ ಬಾಲಕೃಷ್ಣ ಗೆ ನಾಯಕಿಯಾಗಿ ನಟಿಸ್ತೀನಿ ಎಂದು ಷರತ್ತು ಹಾಕಿದ್ದಾರೆ ತಮನ್ನಾ.

  ಒಳಗಿನ ಕತೆ ಬೇರೆಯೇ ಇದೆ

  ಒಳಗಿನ ಕತೆ ಬೇರೆಯೇ ಇದೆ

  ಆದರೆ ಇದರ ಒಳಕತೆ ಬೇರೆಯೇ ಇದೆ. ಸರಿ ಸುಮಾರು 60 ವರ್ಷ ವಯಸ್ಸಿನ ಬಾಲಕೃಷ್ಣ ಜೊತೆ ನಾಯಕಿಯಾಗಿ ನಟಿಸಲು ಯುವ ನಟಿಯರು ಒಪ್ಪಲಿಲ್ಲವಂತೆ. ಹಾಗಾಗಿ ತಮನ್ನಾ ರನ್ನು ಸಂಪರ್ಕಿಸಿದಾಗ ಆಕೆಯೂ ಮೊದಲಿಗೆ ನಟಿಸುವುದಿಲ್ಲವೆಂದು ಹೇಳಿದ್ದಾರೆ.

  ಬಲವಂತ ಮಾಡಿದ್ದಕ್ಕೆ ದೊಡ್ಡ ಮೊತ್ತದ ಬೇಡಿಕೆ

  ಬಲವಂತ ಮಾಡಿದ್ದಕ್ಕೆ ದೊಡ್ಡ ಮೊತ್ತದ ಬೇಡಿಕೆ

  ಆದರೆ ನಿರ್ಮಾಪಕರು ಬಲವಂತ ಮಾಡಿದಾಗ, ದೊಡ್ಡ ಮೊತ್ತದ ಬೇಡಿಕೆಯನ್ನು ಇಟ್ಟಿದ್ದಾರೆ. ಹಣ ಹೆಚ್ಚಾಯ್ತೆಂದಾದರೂ ತನ್ನನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುವುದು ಬೇಡ ಎಂಬ ತಂತ್ರ ತಮನ್ನಾದು.

  ಬಾಲಕೃಷ್ಣ ಸಿನಿಮಾಗಳಲ್ಲಿ ನಾಯಕಿ ಗ್ಲಾಮರ್ ಗಷ್ಟೆ ಸೀಮಿತ

  ಬಾಲಕೃಷ್ಣ ಸಿನಿಮಾಗಳಲ್ಲಿ ನಾಯಕಿ ಗ್ಲಾಮರ್ ಗಷ್ಟೆ ಸೀಮಿತ

  ಬಾಲಕೃಷ್ಣ ಅವರ ಇತ್ತೀಚಿನ ಸಿನಿಮಾದಲ್ಲಿ ನಾಯಕಿಗೆ ಗ್ಲಾಮರಸ್ ಪಾತ್ರವಿದೆಯಂತೆ. ನಾಯಕನೊಂದಿಗೆ ರೊಮ್ಯಾನ್ಸ್ ದೃಶ್ಯಗಳೂ ಇರಲಿವೆಯಂತೆ. ಹಾಗಾಗಿ ಮಿಲ್ಕಿ ಬ್ಯೂಟಿ ತಮನ್ನಾ ರನ್ನು ಹಣ ಹೆಚ್ಚಾದರೂ ಸಿನಿಮಾಕ್ಕೆ ಸಹಿ ಹಾಕಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ.

  ಸಿನಿಮಾಕ್ಕೆ ತಮನ್ನಾ ಪಡೆಯುವ ಸಂಭಾವನೆ ಎಷ್ಟು?

  ಸಿನಿಮಾಕ್ಕೆ ತಮನ್ನಾ ಪಡೆಯುವ ಸಂಭಾವನೆ ಎಷ್ಟು?

  ತಮನ್ನಾ ಭಾಟಿಯಾ ಸಾಮಾನ್ಯವಾಗಿ ಸಿನಿಮಾ ಒಂದಕ್ಕೆ 1.50-2 ಕೋಟಿ ಸಂಭಾವನೆ ಕೇಳುತ್ತಾರೆ, ಆದರೆ ಬಾಲಕೃಷ್ಣ ಅವರ ಸಿನಿಮಾದಲ್ಲಿ ನಟಿಸಲು ಮೂರು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

  ಯುವ ನಟಿಯರು ನಟಿಸಲು ಒಪ್ಪುತ್ತಿಲ್ಲ

  ಯುವ ನಟಿಯರು ನಟಿಸಲು ಒಪ್ಪುತ್ತಿಲ್ಲ

  ಬಾಲಕೃಷ್ಣ ಸೇರಿದಂತೆ ತೆಲುಗಿನ ಮಾಸ್ ಹೀರೋಗಳ ಚಿತ್ರದಲ್ಲಿ ನಾಯಕಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದಿಲ್ಲ. ಕೇವಲ ಮೈಮಾಟ ಪ್ರದರ್ಶನ ಹಾಡು, ಕುಣಿತಕ್ಕೆ ಮಾತ್ರವೇ ನಾಯಕಿಯರು ಸೀಮಿತವಾಗಿರುತ್ತಾರೆ ಹಾಗಾಗಿ ಬೇಡಿಕೆಯ ಯುವ ನಟಿಯರು ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳಲು ನಿರಾಕರಿಸುತ್ತಿದ್ದಾರೆ.

  English summary
  Actress Tamanna Bhatia asks for big amount of money to act as heroine to a big Telugu star actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X