For Quick Alerts
  ALLOW NOTIFICATIONS  
  For Daily Alerts

  ಕೆ.ಜಿ.ಎಫ್ ಹಾಡಿನಲ್ಲಿ ಸೊಂಟ ಬಳುಕಿಸಲು ತಮನ್ನಾ ಪಡೆದ ಸಂಭಾವನೆ ಇಷ್ಟೇನಾ.?

  By Bharath Kumar
  |
  KGF Kannada Movie : ಒಂದೇ ಹಾಡಿಗೆ ಇಷ್ಟು ಸಂಭಾವನೆ ಪಡೆದ್ರಾ ತಮನ್ನಾ..!? | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಇತ್ತೀಚಿಗಷ್ಟೆ ಸದ್ದು ಮಾಡಿದ್ದು ಐಟಂ ಸಾಂಗ್ ವಿಚಾರದಲ್ಲಿ. ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಬಹುಭಾಷೆ ತಾರೆ ತಮನ್ನಾ ಹೆಜ್ಜೆ ಹಾಕಿದ್ದರು.

  ಯಶ್ ಜೊತೆ ತಮನ್ನಾ ಅಭಿನಯಿಸುವುದನ್ನಂತೂ ನೋಡಿಲ್ಲ, ಆದ್ರೆ, ಹಾಡಿನಲ್ಲಿ ನೋಡುವ ಅವಕಾಶವಾದರೂ ಸಿಕ್ತು ಎಂಬ ಖುಷಿ ರಾಕಿಂಗ್ ಸ್ಟಾರ್ ಅಭಿಮಾನಿಗಳದ್ದು.

  ಆದ್ರೀಗ, ಸ್ಯಾಂಡಲ್ ವುಡ್ ಗಲ್ಲಿಯಲ್ಲಿ ಒಂದೇ ಚರ್ಚೆ. 'ಕೆಜಿಎಫ್' ಚಿತ್ರದಲ್ಲಿ ತಮನ್ನಾ ಡ್ಯಾನ್ಸ್ ಮಾಡಿದ್ದಕ್ಕೆ ಅವರಿಗೆ ಎಷ್ಟು ಸಂಭಾವನೆ ಕೊಡಲಾಯಿತು ಎನ್ನುವುದು. ಸದ್ಯದ ಮಾಹಿತಿ ಪ್ರಕಾರ ಅತಿ ದೊಡ್ಡ ಮೊತ್ತವನ್ನ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನ ಕೇಳಿದ ಮತ್ತೆ ಕೆಲವರು ತಮನ್ನಾಗೆ ಕೊಟ್ಟಿದ್ದು ಇಷ್ಟೇನಾ.? ಮುಂದೆ ಓದಿ....

  'ಜೋಕೆ' ಹಾಡಿಗೆ ತಮನ್ನಾ ಹೆಜ್ಜೆ

  'ಜೋಕೆ' ಹಾಡಿಗೆ ತಮನ್ನಾ ಹೆಜ್ಜೆ

  1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡನ್ನ ಇದೀಗ 'ಕೆ.ಜಿ.ಎಫ್' ಸಿನಿಮಾದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ. ಮಿಲ್ಕಿ ಬ್ಯೂಟಿ ತಮನ್ನಾ ಯಶ್ ಜೊತೆ ಸೇರಿ ಸೊಂಟು ಬಳುಕಿಸಿದ್ದಾರೆ.

  'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು

  ಈ ಹಾಡಿಗಾಗಿ ತಮನ್ನಾ ಪಡೆದಿದ್ದೆಷ್ಟು.?

  ಈ ಹಾಡಿಗಾಗಿ ತಮನ್ನಾ ಪಡೆದಿದ್ದೆಷ್ಟು.?

  ಅಂದ್ಹಾಗೆ, ಈ ಹಾಡು ಚಿತ್ರದಲ್ಲಿ ನಾಲ್ಕು ನಿಮಿಷ ಬರಲಿದೆ. ನಾಲ್ಕು ನಿಮಿಷದ ಈ ಹಾಡಿಗಾಗಿ ತಮನ್ನಾ ಪಡೆದಿದ್ದು ಬರೋಬ್ಬರಿ 40 ಲಕ್ಷ ಎಂದು ಹೇಳಲಾಗುತ್ತಿದೆ. ಇದನ್ನ ಕಂಡು ಗಾಂಧಿನಗರದ ಮಂದಿ ಬಾಯಿ ಮೇಲೆ ಬೆರೆಳಿಟ್ಟುಕೊಂಡು ಆಶ್ಚರ್ಯದಿಂದ ನೋಡುವಂತಾಗಿದ್ದಾರೆ.

  ಯಶ್ ಜೊತೆಗೆ ಹೆಜ್ಜೆ ಹಾಕಲು ಓಡಿ ಬಂದ ತಮನ್ನಾ ಯಶ್ ಜೊತೆಗೆ ಹೆಜ್ಜೆ ಹಾಕಲು ಓಡಿ ಬಂದ ತಮನ್ನಾ

  ಈ ಹಿಂದಿನ ಚಿತ್ರಕ್ಕೆ ಹೋಲಿಸಿಕೊಂಡ್ರೆ ಕಮ್ಮಿ

  ಈ ಹಿಂದಿನ ಚಿತ್ರಕ್ಕೆ ಹೋಲಿಸಿಕೊಂಡ್ರೆ ಕಮ್ಮಿ

  ಪರಭಾಷೆ ನಟಿಯರು ಕನ್ನಡ ಸಿನಿಮಾದಲ್ಲಿ ಹೆಜ್ಜೆ ಹಾಕಲು ದೊಡ್ಡ ಮೊತ್ತವನ್ನ ನೀಡುವ ಸಂಪ್ರದಾಯ ನಮ್ಮಲ್ಲಿದೆ. ಸ್ಟಾರ್ ನಟಿಯೊಬ್ಬರು ಐಟಂ ನಂಬರ್ ಅಥವಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ರೆ, ಅವರ ಸಂಭಾವನೆ ಕೋಟಿಗಟ್ಟಲೆ ಇರುತ್ತೆ ಎಂಬ ಮಾತಿದೆ. ಆ ಕೋಟಿಗೆ ಹೋಲಿಸಿಕೊಂಡ್ರೆ ಇದು ತುಂಬಾ ಕಡಿಮೆ ಆಯಿತಲ್ವಾ ಎಂಬ ಕುತೂಹಲ.

  'ಜಾಗ್ವಾರ್'ಗಾಗಿ ತಮನ್ನಾಗೆ ಸಿಕ್ಕಿದ್ದೆಷ್ಟು.?

  'ಜಾಗ್ವಾರ್'ಗಾಗಿ ತಮನ್ನಾಗೆ ಸಿಕ್ಕಿದ್ದೆಷ್ಟು.?

  ಕೆಜಿಎಫ್ ಚಿತ್ರಕ್ಕೂ ಮೊದಲು ನಿಖಿಲ್ ಕುಮಾರ್ ಅಭಿನಯಿಸಿದ್ದ 'ಜಾಗ್ವಾರ್' ಚಿತ್ರದ ಐಟಂ ಸಾಂಗ್ ನಲ್ಲಿ ನಟಿ ತಮನ್ನಾ ಭಾಟಿಯಾಗೆ ಸ್ಟೆಪ್ ಹಾಕಿದ್ದರು. ಈ ಹಾಡಿಗಾಗಿ ತಮನ್ನಾಗೆ ನೀಡಿರುವ ಸಂಭಾವನೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಅಂತ ವರದಿ ಆಗಿತ್ತು. ಅದು ಎಷ್ಟು ನಿಜವೋ ಗೊತ್ತೇ ಆಗಲಿಲ್ಲ.

  'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?'ಜಾಗ್ವಾರ್' ಚಿತ್ರದ ಐಟಂ ಸಾಂಗ್ ಗಾಗಿ ತಮನ್ನಾ ಪಡೆದ ಸಂಭಾವನೆ ಎಷ್ಟು?

  ಕೆಜಿಎಫ್ ಶೂಟಿಂಗ್ ಮುಕ್ತಾಯ

  ಕೆಜಿಎಫ್ ಶೂಟಿಂಗ್ ಮುಕ್ತಾಯ

  ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸದ್ಯ, ಆಡಿಯೋ ರಿಲೀಸ್ ಮಾಡುವ ಯೋಚನೆಯಲ್ಲಿರುವ ಚಿತ್ರತಂಡ ಇದೇ ವರ್ಷದಲ್ಲಿ ಸಿನಿಮಾ ಬಿಡುಗಡೆ ಮಾಡಲಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಈ ಸಿನಿಮಾ ಸಿದ್ಧವಾಗ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ.

  ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!

  English summary
  According to the latest buzz, Popular Actress Tamannaah Bhatia has received Rs. 40 lakhs as remuneration for shaking legs in an item song for rocking star yash starrer 'KGF'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X