For Quick Alerts
  ALLOW NOTIFICATIONS  
  For Daily Alerts

  ಕಥೆ ಕೇಳದೆಯೇ ರವಿ ತೇಜಾ ಚಿತ್ರ ತಿರಸ್ಕರಿಸಿದ ತಮನ್ನಾ: ಕಾರಣವೇನು?

  By Avani Malnad
  |

  ಸಂಭಾವನೆ ಏರಿಸಿಕೊಂಡ ಕಾರಣಕ್ಕೆ ನಟಿ ತಮನ್ನಾ ಭಾಟಿಯಾಗೆ ಡಿಮ್ಯಾಂಡ್ ಕಡಿಮೆಯಾಗಿದೆ ಎಂಬ ಮಾತು ಟಾಲಿವುಡ್‌ನಲ್ಲಿ ಕೇಳಿಬರುತ್ತಿತ್ತು. ಅದಕ್ಕೆ ಪೂರಕವಾಗಿ ತಮನ್ನಾ ಭಾರಿ ಮೊತ್ತದ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸ್ಟಾರ್ ನಟರ ಜತೆ ಆಫರ್ ಬಂದಾಗಲೂ ತಮನ್ನಾ ಕಥೆ ಕೇಳುವ ಮೊದಲು ಸಂಭಾವನೆ ವಿಚಾರವನ್ನೇ ಪ್ರಸ್ತಾಪಿಸುತ್ತಾರೆ. ಅದಕ್ಕೆ ಒಪ್ಪಿಕೊಂಡರೆ ಮಾತ್ರವೇ ಕಥೆ ಕೇಳಲು ಮುಂದಾಗುತ್ತಾರೆ ಎಂಬ ಆರೋಪವಿದೆ.

  ಅನಂತ್ ನಾಗ್ ಗಾಯತ್ರಿಯವರಿಗೆ ಏನಂತ ಪ್ರಪೋಸ್ ಮಾಡಿದ್ರು ಗೊತ್ತಾ? | Ananth Nag

  ಈ ಹಿಂದೆಯೂ ಕೋಟಿಗಟ್ಟಲೆ ಸಂಭಾವನೆ ಕೇಳುವ ಮೂಲಕ ತಮನ್ನಾ ಸ್ಟಾರ್ ನಟರ ಚಿತ್ರಗಳನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದರು ಎನ್ನಲಾಗಿತ್ತು. ಈಗ ಕೊರೊನಾ ವೈರಸ್ ಕಾರಣದಿಂದ ಚಿತ್ರಗಳ ಬಜೆಟ್ ಕಡಿಮೆಯಾಗುತ್ತಿದೆ. ಹಾಗೆಯೇ ನಟ-ನಟಿಯರು, ತಂತ್ರಜ್ಞರ ಸಂಭಾವನೆ ಕೂಡ ಕಡಿಮೆಯಾಗುತ್ತಿದೆ. ಆದರೆ ಈ ವೇಳೆ ಕೂಡ ತಮನ್ನಾ ಭಾರಿ ಮೊತ್ತದ ಬೇಡಿಕೆ ಇರಿಸಿದ್ದಾರಂತೆ. ಮುಂದೆ ಓದಿ..

  ದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತದೊಡ್ಡ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಲು ತಮನ್ನಾ ಕೇಳಿದ್ರು ಭಾರಿ ಮೊತ್ತ

  ಕೆರಿಯರ್ ಅಂತ್ಯದ ಹಾದಿ

  ಕೆರಿಯರ್ ಅಂತ್ಯದ ಹಾದಿ

  ಮಿಲ್ಕಿ ಬ್ಯೂಟಿ ತಮನ್ನಾ ಅವರ ಸಿನಿಮಾಗಳು ಸಾಲು ಸಾಲು ಸೋಲು ಕಂಡಿದ್ದರಿಂದ ಅವರ ವೃತ್ತಿ ಬದುಕು ಮುಗಿದೇ ಹೋಗಿತ್ತು ಎನ್ನಲಾಗಿತ್ತು. ತಮಿಳು, ತೆಲುಗು ಸಿನಿಮಾಗಳು ಅವರ ಕೈ ಹಿಡಿಯಲಿಲ್ಲ. ಈ ನಡುವೆ ಅವರು ಐಟಂ ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದರು.

  ಯಶ್ ಜತೆ ಮುಂದಿನ ಸಿನಿಮಾ ಸುದ್ದಿ: ನಿರ್ದೇಶಕ ನರ್ತನ್ ಹೇಳಿದ್ದೇನು?ಯಶ್ ಜತೆ ಮುಂದಿನ ಸಿನಿಮಾ ಸುದ್ದಿ: ನಿರ್ದೇಶಕ ನರ್ತನ್ ಹೇಳಿದ್ದೇನು?

  ಸಂಭಾವನೆಯಲ್ಲಿ ಹೆಚ್ಚಳ

  ಸಂಭಾವನೆಯಲ್ಲಿ ಹೆಚ್ಚಳ

  ವೆಂಕಟೇಶ್ ಮತ್ತು ವರುಣ್ ತೇಜ್ ಜತೆಗೆ 'ಎಫ್ 2' ಚಿತ್ರದ ಹಿಟ್ ತಮನ್ನಾ ಅವರ ಸಿನಿ ಜೀವನಕ್ಕೆ ಬೂಸ್ಟ್ ನೀಡಿತು. ಹಿಂದಿ ಮತ್ತು ತೆಲುಗಿನಲ್ಲಿ ಇನ್ನಷ್ಟು ಅವಕಾಶಗಳು ಬಂದವು. ಈಗ ಅವರ ಸಂಭಾವನೆ 1.5 ಕೋಟಿ ರೂ ಇದೆ ಎನ್ನಲಾಗಿದೆ.

  2.5 ಕೋಟಿ ಕೇಳಿದ ತಮನ್ನಾ

  2.5 ಕೋಟಿ ಕೇಳಿದ ತಮನ್ನಾ

  ಇತ್ತೀಚೆಗೆ ರವಿತೇಜಾ ನಟನೆಯ ಚಿತ್ರದೊಂದರಲ್ಲಿ ನಟಿಸಲು ತಮನ್ನಾ ಅವರಿಗೆ ಆಫರ್ ಹೋಗಿತ್ತು. ಆದರೆ ಕಥೆ ಕುರಿತು ಚರ್ಚಿಸುವ ಮೊದಲೇ ತಮನ್ನಾ ಸಂಭಾವನೆ ವಿಚಾರ ಮುಂದಿಟ್ಟಿದ್ದಾರೆ. ಸಂಭಾವನೆ ಕಡಿತವಾದರೆ ತಮನ್ನಾ ಕೂಡ ತಮ್ಮ ಬೇಡಿಕೆಯನ್ನು 1 ಕೊಟಿಗೆ ಇಳಿಸಿಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅವರು 2.5 ಕೋಟಿ ಬೇಡಿಕೆ ಇರಿಸಿದ್ದಾರಂತೆ.

  ಭಾರಿ ಡಿಮ್ಯಾಂಡ್ ಇರಿಸಿದ ತಮನ್ನಾ

  ಭಾರಿ ಡಿಮ್ಯಾಂಡ್ ಇರಿಸಿದ ತಮನ್ನಾ

  2015ರಲ್ಲಿ ತಮನ್ನಾ ಮತ್ತು ರವಿತೇಜಾ ನಟನೆಯ 'ಬೆಂಗಾಲ್ ಟೈಗರ್' ಭರ್ಜರಿ ಹಿಟ್ ಆಗಿತ್ತು. ಆ ಕಾಂಬಿನೇಷನ್ ವರ್ಕೌಟ್ ಆಗುತ್ತದೆ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ. ತ್ರಿನಾದ ರಾವ್ ನಕ್ಕಿನಾ ನಿರ್ದೇಶನದ ಚಿತ್ರಕ್ಕೆ ಅವರೇ ಸೂಕ್ತ ಎಂದು ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ತಮನ್ನಾ ಮುಂದಿಟ್ಟ ಸಂಭಾವನೆ ಕೇಳಿ ಅವರು ದಂಗಾಗಿ ಮರಳಿದ್ದಾರಂತೆ.

  ರವಿತೇಜಾ ಜತೆ ನಟಿಸಲು ಇಷ್ಟವಿಲ್ಲ?

  ರವಿತೇಜಾ ಜತೆ ನಟಿಸಲು ಇಷ್ಟವಿಲ್ಲ?

  ರವಿ ತೇಜಾ ಜತೆಗಿನ ಚಿತ್ರವನ್ನು ತಿರಸ್ಕರಿಸಲು ಸಂಭಾವನೆ ಮಾತ್ರವೇ ಕಾರಣವಲ್ಲ. ತಮನ್ನಾ ಈ ತಿರಸ್ಕಾರದ ಹಿಂದೆ ಬೇರೆಯದೇ ಲೆಕ್ಕಾಚಾರವಿದೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ತಮನ್ನಾ 'ಸೈ ರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಚಿರಂಜೀವಿ ಜತೆ ನಟಿಸಿದ್ದರು. ಅದು ಹೇಳಿಕೊಳ್ಳುವ ಗೆಲುವು ಕಾಣಲಿಲ್ಲ. ರವಿತೇಜಾ ಅವರಿಗೆ 52 ವರ್ಷ. ವಯಸ್ಸಿನ ಅಂತರದ ಕಾರಣದಿಂದ ರವಿತೇಜಾ ಜತೆ ನಟಿಸಲು ಇಷ್ಟವಿಲ್ಲದೆ ಅವರು ಸಂಭಾವನೆ ಏರಿಕೆಯನ್ನು ನೆಪವಾಗಿರಿಸಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಕೆಲವು ತಿಂಗಳ ಹಿಂದೆ ಬಾಲಕೃಷ್ಣ ಜತೆಗಿನ ಸಿನಿಮಾಕ್ಕೂ ತಮನ್ನಾ ಭಾರಿ ಸಂಭಾವನೆ ಕೇಳಿದ್ದರು. ಇದೂ ಕೂಡ ಬಾಲಕೃಷ್ಣ ವಯಸ್ಸಿನ ಕಾರಣಕ್ಕಾಗಿಯೇ ಅವರು ಮಾಡಿದ ತಂತ್ರ ಎನ್ನಲಾಗಿತ್ತು.

  English summary
  Reports says Tollywood actress Tamannaah Bhatia has rejected the movie offer with Ravi Teja demanding high remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X