ವರಸೆ ಬದಲಿಸಿದ ತಮನ್ನಾ? ಆತನೊಟ್ಟಿಗೆ ಲಿಪ್‌ಲಾಕ್, ಬೆಡ್ ರೂಂ ಸೀನ್‌ಗಳಿಗೆ ಸೈ ಎಂದ ಮಿಲ್ಕಿಬ್ಯೂಟಿ ?
ಬಹುಭಾಷಾ ನಟಿ ತಮನ್ನಾ ಕ್ರೇಜ್ ಇತ್ತೀಚೆಗೆ ಯಾಕೋ ಕಮ್ಮಿ ಆಗಿದೆ. ಹೊಸ ಬೆಡಗಿಯರ ಆರ್ಭಟದ ನಡುವೆ ಅಷ್ಟಾಗಿ ಮಿಲ್ಕಿಬ್ಯೂಟಿ ಹವಾ ನಡೀತ್ತಿಲ್ಲ. ತಮನ್ನಾ ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಕ್ಕಿಂತ ಗ್ಲಾಮರ್ ಡಾಲ್ ಆಗಿ ಮಿಂಚಿದ್ದೇ ಹೆಚ್ಚು. ಮಾದಕ ಮೈಮಾಟದಿಂದ ಮುಂಬೈ ಬೆಡಗಿ ಪಡ್ಡ ಹೈಕಳ ನಿದ್ದೆ ಕದ್ದಿದ್ದು ಸುಳ್ಳಲ್ಲ. ಆದರೆ ಇದೇ ಮೊದಲ ಬಾರಿಗೆ ತಮನ್ನಾ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
ನಟಿ ತಮನ್ನಾ ಚಿತ್ರರಂಗಕ್ಕೆ ಬಂದು 15 ವರ್ಷ ಕಳೆದಿದೆ. ಇಷ್ಟು ವರ್ಷಗಳಲ್ಲಿ ಮಿಲ್ಕಿ ಬ್ಯೂಟಿ ಎಷ್ಟೇ ಸ್ಕಿನ್ ಶೋ ಮಾಡಿದರೂ ಲಿಪ್ ಲಾಕ್ ಸೀನ್ ಆಗಲಿ, ಇಂಟಿಮೇಟ್ ಸೀನ್‌ಗಳಲ್ಲಿ ಆಗಲಿ ಕಾಣಿಸಿಕೊಳ್ಳಲಿಲ್ಲ. ಅಂತಹ ಸನ್ನಿವೇಶಗಳಲ್ಲಿ ನಟಿಸಬಾರದು ಎಂದು ತನಗೆ ತಾನು ಷರತ್ತು ವಿಧಿಸಿಕೊಂಡಿದ್ದರು. ಒಂದು ವೇಳೆ ತಮ್ಮ ಷರತ್ತನ್ನು ಮುರಿದರೆ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಮಾಡಲು ಇಷ್ಟಪಡುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಈಗ ವೆಬ್ ಸೀರಿಸ್‌ವೊಂದರಲ್ಲಿ ಹಾಟ್ ಹಾಟ್ ಸೀನ್ಸ್‌ಗೆ ತಮನ್ನಾ ಸೈ ಎಂದಿದ್ದಾರೆ ಎನ್ನಲಾಗ್ತಿದೆ.

ಕಿಯಾರಾ ಅದ್ವಾನಿ ಕೆಲ ದಿನಗಳ ಹಿಂದೆ 'ಲಸ್ಟ್ ಸ್ಟೋರಿಸ್' ವೆಬ್ ಸೀರಿಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ನಟಿ ಸಮಂತಾ ಕೂಡ 'ಫ್ಯಾಮಿಲಿಮ್ಯಾನ್- 2' ಸೀರಿಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ದರ್ಶನ ಕೊಟ್ಟು ಎಲ್ಲರ ಹುಬ್ಬೇರಿಸಿದ್ದರು. ಸದ್ಯ 'ಲಸ್ಟ್ ಸ್ಟೋರಿಸ್' ಸೀಸನ್- 2 ಶುರುವಾಗುತ್ತಿದೆ. ಇದರಲ್ಲಿ ಮಿಲ್ಕಿಬ್ಯೂಟಿ ತಮನ್ನಾ ನಟಿಸ್ತಿದ್ದಾರೆ. ಶೀಘ್ರದಲ್ಲೇ ಈ ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಮನ್ನಾ ಜೊತೆ ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ವಿಜಯ್ ವರ್ಮಾ ಕೂಡ ನಟಿಸಿದ್ದಾರೆ. ನೀನಾ ಗುಪ್ತಾ, ಕಾಜೋಲ್‌ರಂತಹ ನಟಿಯರು ಈ ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ.
ಸದ್ಯ 'ಲಸ್ಟ್ ಸ್ಟೋರಿಸ್' ಸೀಸನ್- 2ನಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇಬ್ಬರು ಲಿಪ್ ಲಾಕ್ ಕೂಡ ಮಾಡಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದಷ್ಟು ಹಾಟ್ ಆಗಿ ಈ ವೆಬ್ ಸೀರಿಸ್‌ನಲ್ಲಿ ಮಿಲ್ಕಿಬ್ಯೂಟಿ ದರ್ಶನ ಕೊಟ್ಟಿದ್ದಾರಂತೆ. ಪ್ರಿಯಕರನಿಗಾಗಿ ತಮನ್ನಾ ತಮ್ಮ ಷರತ್ತುಗಳನ್ನು ಮುರಿದುಕೊಂಡ್ರಾ? ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಮನ್ನಾ ಮಾತ್ರ ನನಗೆ ಯಾವುದೇ ಲವ್ ಅಫೇರ್ಸ್ ಇಲ್ಲಾ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ಇಬ್ಬರು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ.

ಸದ್ಯ ತಮನ್ನಾ 'ಭೋಳಾ ಶಂಕರ್', 'ಜೈಲರ್', 'ಅರನ್ಮಣೈ- 4', 'ಬಾಂದ್ರಾ', 'ಬೋಲೆ ಚೂಡಿಯಾ' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇನ್ನು ಇನ್ನು ಬಾಲಿವುಡ್ ಕ್ವೀನ್ ರೀಮೆಕ್ 'ದಟ್ ಈಸ್ ಮಹಾಲಕ್ಷ್ಮಿ' ಸಿನಿಮಾ ರಿಲೀಸ್ ಆಗದೇ ಉಳಿದುಬಿಟ್ಟಿದೆ. 2005ರಲ್ಲಿ 'ಚಾಂದ್ ಸೆ ರೋಷನ್ ಚೆಹ್ರಾ' ಎನ್ನುವ ಬಾಲಿವುಡ್ ಸಿನಿಮಾ ಮೂಲಕ ತಮನ್ನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ತಮಿಳಿನ 'ಪಯ್ಯಾ' ಸಿನಮಾ ಬ್ರೇಕ್ ಕೊಡ್ತು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಕನ್ನಡ 2 ಐಟಂ ಸಾಂಗ್‌ಗಳಲ್ಲೂ ಕುಣಿದಿದ್ದಾರೆ.


Click it and Unblock the Notifications











